ನಿತ್ಯಭವಿಷ್ಯ; ಈ ರಾಶಿಯವರಿಗಿಂದು ಕುಟುಂಬದಲ್ಲಿ ಶುಭ ಕಾರ್ಯದ ಸಂಭ್ರಮ

ಜ್ಯೋತಿಷಿ
ಜ್ಯೋತಿಷಿ
Published on

ಮೇಷ: ಕುಲಕಸುಬಿನಲ್ಲಿ ಹೆಸರು ಗಳಿಸುವಿರಿ. ಸಾಹಿತಿಗಳಿಗೆ, ಚಲನಚಿತ್ರ ಕ್ಷೇತ್ರದಲ್ಲಿ ಅವಕಾಶ. ಆಸ್ತಿ ವಿವಾದಕ್ಕೆ ಕೋರ್ಟಿಗೆ ಅಲೆದಾಟ. ಶುಭಸಂಖ್ಯೆ: 5

ವೃಷಭ: ಯಕ್ಷಗಾನ ಕಲಾವಿದರಿಗೆ ವಿದೇಶ ಪ್ರಯಾಣ ಯೋಗ. ಆದಾಯ ಇಲಾಖೆ ಅಧಿಕಾರಿಗಳಿಗೆ ವರ್ಗ. ಬಾಕಿ ಇದ್ದ ಹಣ ಕೈ ಸೇರುತ್ತದೆ. ಶುಭಸಂಖ್ಯೆ: 6

ಮಿಥುನ: ಕಳೆದುಹೋಗಿದ್ದ ವಸ್ತು ಸಿಗಲಿದೆ. ಎಲೆಕ್ಟ್ರಿಕ್ ವಸ್ತುಗಳ ಮಾರಾಟಸ್ಥರಿಗೆ ಲಾಭ. ಪತ್ರಕರ್ತರಿಗೆ ಸರ್ಕಾರದಿಂದ ಹಣ ಸಹಾಯ.ಶುಭಸಂಖ್ಯೆ:2

ಕಟಕ: ಲೆಕ್ಕಪತ್ರ ಪರಿಶೋಧಕರಿಗೆ ಸಂಪಾದನೆ ಅಧಿಕವಾಗಲಿದೆ. ಷೇರು ವ್ಯವಹಾರಗಳಲ್ಲಿ ಲಾಭ. ಪ್ರಯತ್ನಿಸಿದ ಕಾರ್ಯಗಳಲ್ಲಿ ಯಶಸ್ಸು. ಶುಭಸಂಖ್ಯೆ:8

ಸಿಂಹ: ಕಿರುಚಿತ್ರ ನಿರ್ದೇಶಕರಿಗೆ ಅವಕಾಶಗಳು ಲಭ್ಯ. ಭೂಮಿಯ ವ್ಯವಹಾರದಲ್ಲಿ ಲಾಭ. ಉದರ ಸಂಬಂಧಿ ಅನಾರೋಗ್ಯ ನಿವಾರಣೆ. ಶುಭಸಂಖ್ಯೆ: 8

ಕನ್ಯಾ: ದಾಂಪತ್ಯ ಜೀವನದಲ್ಲಿ ತಿರುವು. ಕೇಂದ್ರ ಸರ್ಕಾರದಿಂದ ಆಗಬೇಕಾದ ಕಾರ್ಯದಲ್ಲಿ ಯಶ. ಲೇವಾದೇವಿ ವ್ಯವಹಾರದಲ್ಲಿ ಪ್ರಗತಿ. ಶುಭಸಂಖ್ಯೆ:3

ತುಲಾ: ಆತ್ಮೀಯರೊಬ್ಬರಿಂದ ಧನ ಸಹಾಯ. ಸ್ತ್ರೀಯರಿಗೆ ಉದ್ಯೋಗ ಲಾಭ. ಒಡಹುಟ್ಟಿದವರಿಂದ ಆಸ್ತಿ ವಿಚಾರದಲ್ಲಿ ಕಿರಿಕಿರಿ ಸಾಧ್ಯತೆ. ಶುಭಸಂಖ್ಯೆ:2

ವೃಶ್ಚಿಕ: ಕುಟುಂಬದಲ್ಲಿ ಶುಭ ಕಾರ್ಯದ ಸಂಭ್ರಮ. ಅಧಿಕಾರ ಪ್ರಾಪ್ತಿಯಲ್ಲಿ ನಂಬಿಕೆ ದ್ರೋಹ ಉಂಟಾಗುವ ಸಾಧ್ಯತೆ. ಸಂವಹನ ಕ್ಷೇತ್ರದವರಿಗೆ ಬೇಡಿಕೆ.ಶುಭಸಂಖ್ಯೆ: 7

ಧನಸ್ಸು: ಪದವೀಧರರಿಗೆ ಗ್ರಾಮ ಜೀವನದತ್ತ ಆಸಕ್ತಿ ಬರಲಿದೆ. ಆಸ್ತಿ ನೊ್ಙೕಂದಣಿ ವಿಳಂಬ. ವಾಹನ ಮಾರಾಟಗಾರರಿಗೆ ಆರ್ಥಿಕ ಚೇತರಿಕೆ. ಶುಭಸಂಖ್ಯೆ: 6

ಮಕರ: ಹಳೇ ಸಾಲ ತೀರಿಸಲು ಸ್ನೇಹಿತನಿಂದ ಸಹಾಯ. ಸಮಾಜದಲ್ಲಿ ಗೌರವ. ದೃಢ ನಿರ್ಧಾರ ಕೈಗೊಳ್ಳುವಲ್ಲಿ ಪರಿಣಿತರ ಸಲಹೆ ಅಗತ್ಯ. ಶುಭಸಂಖ್ಯೆ:8

ಕುಂಭ: ಕಚೇರಿ ಬದಲಾವಣೆಗೆ ನಿರ್ಧಾರ. ದಾಂಪತ್ಯದಲ್ಲಿ ಅನ್ಯೋನ್ಯತೆ. ನಿವೇಶನ ಖರೀದಿಗೆ ಸುಸಮಯ. ಜೇನು ಮಾರಾಟದಲ್ಲಿ ಲಾಭ. ಶುಭಸಂಖ್ಯೆ:2

ಮೀನ: ಕುಟುಂಬದಲ್ಲಿ ಹೊಸ ಜವಾಬ್ದಾರಿ ಹೆಗಲೇರುತ್ತದೆ. ಗಣ್ಯ ವ್ಯಕ್ತಿಗಳ ಭೇಟಿ. ಆಧ್ಯಾತ್ಮಿಕ ಗ್ರಂಥಗಳ ಅಧ್ಯಯನದಲ್ಲಿ ಆಸಕ್ತಿ. ಶುಭಸಂಖ್ಯೆ: 8

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net