

ಮೇಷ: ಜವಾಬ್ದಾರಿಗಳನ್ನು ಮರೆಯದಿರಿ. ಆತ್ಮಗೌರವ ವೃದ್ಧಿ. ಧಾರ್ವಿುಕ ಕಾರ್ಯಗಳಲ್ಲಿ ಭಾಗಿಯಾಗುವಿರಿ. ಸ್ವಗ್ರಾಮಕ್ಕೆ ಪ್ರಯಾಣ. ಶುಭಸಂಖ್ಯೆ:7
ವೃಷಭ: ಮಕ್ಕಳ ಆರೋಗ್ಯದಲ್ಲಿ ಸುಧಾರಣೆ. ಜೀವನೋ ಪಾಯಕ್ಕೆ ಸಿಕ್ಕ ಅವಕಾಶ ಬಳಸಿ. ಕ್ರೀಡಾಳುಗಳಿಗೆ ಸರ್ಕಾರದಿಂದ ತರಬೇತಿ. ಶುಭಸಂಖ್ಯೆ:9
ಮಿಥುನ: ದಿನಸಿ ವರ್ತಕರಿಗೆ ಲಾಭ, ಧಾರ್ವಿುಕ ಸಮಾರಂಭದಿಂದ ಮನಃಶಾಂತಿ ಸಿಗಲಿದೆ. ಪ್ರಮುಖ ನಿರ್ಧಾರಗಳಲ್ಲಿ ಆತುರ ಬೇಡ. ಶುಭಸಂಖ್ಯೆ:2
ಕಟಕ: ಕುಟುಂಬದ ವ್ಯವಹಾರಗಳಲ್ಲಿ ಶ್ರದ್ಧೆ ವಹಿಸುವಿರಿ. ಆರ್ಥಿಕ ಸಂಕಷ್ಟ ಪರಿಹಾರವಾಗಲಿದೆ. ಕಾಫಿ ಕೃಷಿಕರಿಗೆ ಉತ್ತಮ ಲಾಭ. ಶುಭಸಂಖ್ಯೆ: 7
ಸಿಂಹ: ಹವ್ಯಾಸಿ ಕಲಾವಿದರಿಗೆ ವಿಶೇಷ ವೇದಿಕೆ ಲಭ್ಯವಾಗಲಿದೆ. ಸಣ್ಣಪುಟ್ಟ ಅಡಚಣೆಯಾದರೂ ಕಾರ್ಯಸಿದ್ಧಿ. ಹೂಡಿಕೆಯಲ್ಲಿ ಎಚ್ಚರ. ಶುಭಸಂಖ್ಯೆ: 9
ಕನ್ಯಾ: ಕ್ಲಿಷ್ಟಕರ ಸ್ಥಿತಿಯನ್ನು ಧೈರ್ಯದಿಂದ ಎದುರಿಸಿ ವಿಜಯಿಯಾಗುವಿರಿ. ರಚನಾತ್ಮಕ ಕೆಲಸಗಳಲ್ಲಿ ಆಸಕ್ತಿ. ಜಾಣ್ಮೆಯಿಂದ ವ್ಯವಹರಿಸಿ. ಶುಭಸಂಖ್ಯೆ: 5
ತುಲಾ: ಹಲವು ದಿನಗಳ ಕನಸು ನನಸಾಗಲಿದೆ. ಪಿಎಚ್ಡಿ ವಿದ್ಯಾರ್ಥಿಗಳಿಗೆ ಯಶಸ್ಸು ಲಭ್ಯ. ಹಿತಶತ್ರುಗಳಿಂದ ಅಂತರ ಕಾಯ್ದುಕೊಳ್ಳಿ. ಶುಭಸಂಖ್ಯೆ: 7
ವೃಶ್ಚಿಕ: ಲೇವಾದೇವಿಯಲ್ಲಿ ಆದಾಯ. ಕಲಾ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಲಭ್ಯ. ತಂದೆಯೊಂದಿಗಿನ ಮನಸ್ತಾಪ ನಿವಾರಣೆ. ಶುಭಸಂಖ್ಯೆ:3
ಧನಸ್ಸು: ತಾಯಿಯ ಆರೋಗ್ಯದಲ್ಲಿ ಚೇತರಿಕೆ. ಗೃಹ ನಿರ್ವಣ ಸಮಸ್ಯೆಯಿಂದ ಮುಕ್ತಿ. ಸರ್ಕಾರದಿಂದ ಅಡಿಕೆ ಕೃಷಿಕರಿಗೆ ಸಹಾಯ. ಶುಭಸಂಖ್ಯೆ:3
ಮಕರ: ಸ್ವಂತ ವ್ಯಾಪಾರದಲ್ಲಿ ಅಭಿವೃದ್ಧಿ. ಆಸ್ತಿ ಖರೀದಿ ಕಾರ್ಯಗಳಲ್ಲಿ ಮುನ್ನಡೆಯಅಗಲಿದೆ. ಮಹಿಳಾ ವೈದ್ಯರಿಗೆ ವಿದೇಶ ಪ್ರಯಾಣ. ಶುಭಸಂಖ್ಯೆ: 4
ಕುಂಭ: ನ್ಯಾಯಾಲಯದಲ್ಲಿರುವ ದಾವೆ ನಿಮ್ಮ ಪರವಾಗಿರಲಿದೆೆ. ಬೆಂಕಿಯಿಂದ ಎಚ್ಚರವಹಿಸಿ. ಹೊಸ ವಸ್ತುಗಳ ಖರೀದಿ ಯೋಗವಿದೆ.ಶುಭಸಂಖ್ಯೆ: 1
ಮೀನ: ಸಾಲ ಮರುಪಾವತಿಸಲು ಬ್ಯಾಂಕಿನಿಂದ ಸಹಾಯ, ಹೊಸ ಯೋಜನೆಗಳು ಭಾರಿ ಲಾಭ ತರಲಿವೆ. ಗೃಹಾಲಂಕಾರ ವಸ್ತು ಖರೀದಿ. ಶುಭಸಂಖ್ಯೆ: 4