_1787768426722.webp?w=480&auto=format%2Ccompress&fit=max)
_1787768426722.webp?w=480&auto=format%2Ccompress&fit=max)
ಮೇಷ: ಸಹಾಯ ಸಂಸ್ಥೆಯ ಸಲಹೆಗಾರರಾಗುವಿರಿ. ಹಿತಶತ್ರುಗಳ ವಿಷಯದಲ್ಲಿ ಎಚ್ಚರವಿರಲಿ. ಹಣದ ಒಳಹರಿವಿನಲ್ಲಿ ಅಭಿವೃದ್ಧಿ ಆಗಲಿದೆ. ಶುಭಸಂಖ್ಯೆ: 9
ವೃಷಭ: ಆದಾಯ -ಖರ್ಚಿನಲ್ಲಿ ಸಮತೋಲನ ಕಾಯ್ದುಕೊಳ್ಳಿ. ಸ್ನೇಹಿತರೊಂದಿಗೆ ಔತಣಕೂಟ. ಮೇಕಪ್ ವಸ್ತು ಮಾರಾಟದಲ್ಲಿ ಲಾಭ. ಶುಭಸಂಖ್ಯೆ:6
ಮಿಥುನ: ಅಧಿಕಾರಿಗಳನ್ನು ಓಲೈಸಿ ಕೆಲಸ ಸಾಧನೆ. ದೇವರ ಕಾರ್ಯ ಮಾಡುವಿರಿ. ಸಂದರ್ಶನದ ಅವಕಾಶ ಸದುಪಯೋಗ ಮಾಡಿಕೊಳ್ಳಿ. ಶುಭಸಂಖ್ಯೆ: 1
ಕಟಕ: ನಿಮ್ಮ ದೃಢನಿರ್ಧಾರಗಳಿಂದ ಯಶಸ್ಸು. ಕುಶಲಕರ್ವಿುಗಳಿಗೆ ಪ್ರಗತಿ. ಕಾರ್ಯ ಸಾಧನೆಯಿಂದ ಸಮಾಜದಲ್ಲಿ ಹೆಸರು ಗಳಿಸುವಿರಿ. ಶುಭಸಂಖ್ಯೆ:8
ಸಿಂಹ: ತಾಯಿಯ ಆರೋಗ್ಯದಲ್ಲಿ ಚೇತರಿಕೆ. ಗೃಹ ನಿರ್ವಣದ ಸಮಸ್ಯೆಗಳಿಂದ ಮುಕ್ತಿ. ಐಟಿ ಉದ್ಯಮದಲ್ಲಿ ಬದಲಾವಣೆಗೆ ನಿರ್ಧಾರ. ಶುಭಸಂಖ್ಯೆ:3
ಕನ್ಯಾ: ವೈದ್ಯಕೀಯ ವಿದ್ಯಾರ್ಥಿಗಳಿಗೆ ಅಧಿಕ ಖರ್ಚು. ಆಹಾರ ಧಾನ್ಯಬೇಸಾಯಗಾರರಿಗೆ ಅಭಿವೃದ್ಧಿ. ಅದಿರು ವ್ಯಾಪಾರಿಗಳಿಗೆ ಲಾಭ. ಶುಭಸಂಖ್ಯೆ:8
ತುಲಾ: ವಾಹನಗಳ ಬಿಡಿಭಾಗ ಮಾರಾಟಸ್ಥರಿಗೆ ಲಾಭ. ಕಲಾವಿದ್ಯಾರ್ಥಿಗಳಿಗೆ ವಿದೇಶ ಪ್ರಯಾಣ. ನಂಬಿಕೆಯಿಂದ ಕೆಲಸದಲ್ಲಿ ಗೆಲುವು. ಶುಭಸಂಖ್ಯೆ: 4
ವೃಶ್ಚಿಕ: ಲೇವಾದೇವಿ ವ್ಯವಹಾರ ಫಲಪ್ರದ. ಸಾಲನೀಡುವಾಗ ಯೋಚಿಸಿ. ಕೋರ್ಟ್ನಲ್ಲಿ ಹಿನ್ನಡೆ. ಹೂಡಿಕೆಗೆ ತಜ್ಞರ ಸಲಹೆ ಅಗತ್ಯ. ಶುಭಸಂಖ್ಯೆ: 7
ಧನಸ್ಸು: ಕೈಮಗ್ಗದ ಬಟ್ಟೆಗಳ ಮಾರಾಟದಲ್ಲಿ ಲಾಭವಿದೆ. ಕೇಂದ್ರ ಸರ್ಕಾರಿ ನೌಕರರಿಗೆ ವರ್ಗಾವಣೆ ಸಂಭವ. ಸಮಾಜ ಸೇವೆಯಲ್ಲಿ ಆಸಕ್ತಿ. ಶುಭಸಂಖ್ಯೆ:3
ಮಕರ: ಅನಾರೋಗ್ಯ ಕಾಡಬಹುದು. ಉದ್ಯೋಗ ಸ್ಥಳದಲ್ಲಿ ಸಹೋದ್ಯೋಗಿಗಳ ಸಹಕಾರ. ನಿವೇಶನ ಖರೀದಿಗೆ ಬ್ಯಾಂಕಿನಿಂದ ನೆರವು. ಶುಭಸಂಖ್ಯೆ:8
ಕುಂಭ: ದಾಂಪತ್ಯದ ವೈಮನಸ್ಯ ಬಗೆಹರಿಯಲಿದೆ. ಉಳಿತಾಯದ ವಿಚಾರದಲ್ಲಿ ದುಡುಕು ಬೇಡ. ಉನ್ನತ ಸರ್ಕಾರಿ ಉದ್ಯೋಗ ಪ್ರಾಪ್ತಿ. ಶುಭಸಂಖ್ಯೆ:5
ಮೀನ: ಸ್ವಂತ ವ್ಯಾಪಾರದಲ್ಲಿ ಗಣನೀಯ ಪ್ರಗತಿ. ಜೇನು ಮತ್ತು ರೇಷ್ಮೆ ಕೃಷಿಕರಿಗೆ ಶುಭದಾಯಕ ದಿನ. ಆಸ್ತಿ ವಿವಾದಕ್ಕೆ ರ್ತಾಕ ಅಂತ್ಯ. ಶುಭಸಂಖ್ಯೆ:1