_1779734118704.webp?w=480&auto=format%2Ccompress&fit=max)
_1779734118704.webp?w=480&auto=format%2Ccompress&fit=max)
ಮೇಷ: ಕಿರುಚಿತ್ರ ಹೂಡಿಕೆದಾರರಿಗೆ ಲಾಭವಾಗಲಿದೆ. ಕಬ್ಬಿಣ, ಸಿಮೆಂಟ್ ವ್ಯಾಪಾರದಲ್ಲಿ ನಿರೀಕ್ಷಿಸಿದ್ದಕ್ಕಿಂತ ಆದಾಯ ಬರಲಿದೆ. ಶುಭಸಂಖ್ಯೆ: 9
ವೃಷಭ; ಹಣ್ಣು ತರಕಾರಿಗಳ ಮಾರಾಟದಲ್ಲಿ ಹಣಗಳಿಕೆ. ಧಾರ್ವಿುಕ ಸಂಸ್ಥೆಯ ನೌಕರರಿಗೆ ಪ್ರಗತಿ. ಔಷಧಗಳ ಖರೀದಿಯಲ್ಲಿ ಲಾಭ. ಶುಭಸಂಖ್ಯೆ: 6
ಮಿಥುನ: ವಿವಾಹದ ಪ್ರಯತ್ನ ಫಲ ನೀಡಲಿದೆ. ಸಗಟು ವ್ಯಾಪಾರದಲ್ಲಿ ಗಣನೀಯ ಆದಾಯ. ಸಾಂಪ್ರದಾ ಯಿಕ ಕಲಾವಿದರಿಗೆ ಬೇಡಿಕೆ. ಶುಭಸಂಖ್ಯೆ: 8
ಕಟಕ: ಶಸ್ತ್ರ ಚಿಕಿತ್ಸೆಗಳ ಉಪಕರಣಗಳ ಮಾರಾಟದಲ್ಲಿ ಉತ್ತಮ ಪ್ರಗತಿ. ಪತ್ರಿಕಾ ಮಾಧ್ಯಮ ಕ್ಷೇತ್ರದಲ್ಲಿ ಹೆಸರು, ಗೌರವ ಗಳಿಸುವಿರಿ. ಶುಭಸಂಖ್ಯೆ: 9
ಸಿಂಹ: ಕುಟುಂಬದ ಸಹಕಾರದಿಂದ ಆಸ್ತಿ ಖರೀದಿ. ಬಾಡಿಗೆದಾರರಿಂದ ಅಸಮಾಧಾನ. ತೆಂಗು, ಬಾಳೆ ಬೇಸಾಯಗಾರಿಗೆ ಆರ್ಥಿಕ ಪ್ರಗತಿ. ಶುಭಸಂಖ್ಯೆ: 1
ಕನ್ಯಾ: ಉದ್ಯೋಗಸ್ಥ ಮಹಿಳೆಯರಿಗೆ ಜವಾಬ್ದಾರಿ ಹೆಚ್ಚಲಿದೆ. ಪಾಲುದಾರಿಕೆಯ ಉದ್ಯಮಕ್ಕೆ ನಿರ್ಧಾರ. ಆಧ್ಯಾತ್ಮಿಕ ಅಧ್ಯಯನದಲ್ಲಿ ಆಸಕ್ತಿ. ಶುಭಸಂಖ್ಯೆ: 2
ತುಲಾ: ಸಂಗೀತ ನಿರ್ದೇಶಕರಿಗೆ ಬೇಡಿಕೆ. ಉನ್ನತ ವಿದ್ಯಾಭ್ಯಾಸದ ಕ್ಷೇತ್ರದಲ್ಲಿ ಪ್ರಗತಿಯಾಗಲಿದೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೆರ್ಗಡೆ. ಶುಭಸಂಖ್ಯೆ: 4
ವೃಶ್ಚಿಕ: ಬ್ಯಾಂಕ್ ವ್ಯವಹಾರದಲ್ಲಿ ಪ್ರಗತಿ. ರಾಜಕೀಯ ಕ್ಷೇತ್ರದವರಿಗೆ ಪದವಿ ದೊರೆಯಲಿದೆ. ಕೇಂದ್ರ ಸರ್ಕಾರಿ ನೌಕರರಿಗೆ ವರ್ಗಾವಣೆ. ಶುಭಸಂಖ್ಯೆ: 1
ಧನಸ್ಸು: ಆಸ್ತಿ ವಿವಾದ ಬಗೆಹರಿಯಲಿದೆ. ಜೇನು ಸಾಕಣೆ, ರೇಷ್ಮೆ ಕೃಷಿಯಲ್ಲಿ ನಿರೀಕ್ಷಿತ ಮುನ್ನಡೆ. ಧಾರ್ವಿುಕ ವೃತ್ತಿಪರರಿಗೆ ಅಧಿಕ ಹಣ ಗಳಿಕೆ. ಶುಭಸಂಖ್ಯೆ: 7
ಮಕರ: ಕೇಂದ್ರ ಸರ್ಕಾರದ ಉನ್ನತ ವೃತ್ತಿಯ ಪ್ರಯತ್ನ ಯಶಸ್ವಿ. ನವದಂಪತಿಗೆ ಶುಭ ಸುದ್ದಿ. ಭೂ ವ್ಯವಹಾರದಲ್ಲಿ ಇದ್ದ ಅಡ್ಡಿ ನಿವಾರಣೆ. ಶುಭಸಂಖ್ಯೆ: 8
ಕುಂಭ: ಕ್ರೀಡಾಪಟುಗಳಿಗೆ ಶುಭದಿನ. ಸಂಗೀತ, ನಾಟ್ಯ ಶಿಕ್ಷಕರಿಗೆ ವಿದೇಶ ಪ್ರಯಾಣ ಯೋಗ. ಸಹಕಾರ ಸಂಘಗಳಲ್ಲಿ ಅಧಿಕಾರ ಪ್ರಾಪ್ತಿ. ಶುಭಸಂಖ್ಯೆ: 5
ಮೀನ: ಬರಹಗಾರರಿಗೆ ಗೌರವ ಮನ್ನಣೆ ಸಿಗಲಿದೆ. ಸಿಹಿ ತಿಂಡಿ ಮಾರಾಟಗಾರರಿಗೆ ಲಾಭ. ತಾಂತ್ರಿಕ ಪದವೀಧರರಿಗೆ ಉದ್ಯೋಗ ಪ್ರಾಪ್ತಿ. ಶುಭಸಂಖ್ಯೆ: 6