ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಅವಿವಾಹಿತರಿಗೆ ವಿವಾಹ ಸಿದ್ದಿ

ಜ್ಯೋತಿಷ್ಯ
ಜ್ಯೋತಿಷ್ಯ
Published on

ಮೇಷ: ಉದ್ಯೋಗ ಅಸ್ಥಿರತೆ ಅಂತ್ಯ. ಕಾಫಿ ಬೆಳೆಗಾರರಿಗೆ ಶುಭ ಸುದ್ದಿ. ಐಟಿ ಕ್ಷೇತ್ರದ ಮಹಿಳೆಯರಿಗೆ ಕೆಲಸ ಕಳೆದುಕೊಳ್ಳುವ ಭೀತಿ. ಶುಭಸಂಖ್ಯೆ:5

ವೃಷಭ: ಹಣ್ಣಿನ ವ್ಯಾಪಾರದಲ್ಲಿ ಧನ ಲಾಭ. ನಾಲ್ಕು ಚಕ್ರದ ವಾಹನ ಖರೀದಿಗೆ ಹಣ ದೊರಕಲಿದೆ. ನೂತನ ಗೃಹ ನಿರ್ವಣಕ್ಕೆ ಚಾಲನೆ. ಶುಭಸಂಖ್ಯೆ:2

ಮಿಥುನ: ನಿಮ್ಮ ಮಕ್ಕಳ ಪ್ರತಿಭೆೆಗೆ ತಕ್ಕ ಪುರಸ್ಕಾರ ಸಿಗಲಿದೆ. ಸಾರ್ವಜನಿಕವಾಗಿ ತಾಳ್ಮೆಯಿಂದಿರಿ. ಆತ್ಮೀಯ ಮಿತ್ರರೊಂದಿಗೆ ಪ್ರಯಾಣ. ಶುಭಸಂಖ್ಯೆ: 8

ಕಟಕ: ಚಾಲಕ ವೃತ್ತಿಯಲ್ಲಿ ಹಣ ಗಳಿಸುವಿರಿ. ಮಕ್ಕಳು ಪರೀಕ್ಷೆಯ ಪ್ರಯತ್ನದಲ್ಲಿ ವಿಫಲರಾದಾರು. ದಿನಸಿ ವ್ಯಾಪಾರದಲ್ಲಿ ಧನಲಾಭ. ಶುಭಸಂಖ್ಯೆ:3

ಸಿಂಹ: ಸ್ನೇಹಿತರೊಂದಿಗೆ ಮನಸ್ತಾಪ ಬಗೆಹರಿಯಲಿದೆ. ಸ್ವಉದ್ಯೋಗ ಕ್ಷೇತ್ರದಲ್ಲಿ ಯಶಸ್ಸು. ಹೊಸ ಹೂಡಿಕೆದಾರರಿಂದ ಅಭಿವೃದ್ಧಿ. ಶುಭಸಂಖ್ಯೆ: 6

ಕನ್ಯಾ: ಶಿಕ್ಷಕ ವೃತ್ತಿಯವರಿಗೆ ವರ್ಗಾವಣೆ. ಧಾರಾವಾಹಿ ನಿರ್ವಪಕರಿಗೆ ಅದೃಷ್ಟದ ದಿನ. ಪ್ರತಿಭೆೆಗೆ ತಕ್ಕ ಪುರಸ್ಕಾರ ದೊರೆಯಲಿದೆ. ಶುಭಸಂಖ್ಯೆ: 2

ತುಲಾ: ಆಪತ್ತಿನಲ್ಲಿ ಸ್ನೇಹಿತರಿಂದ ಸಹಕಾರ ಸಿಗಲಿದೆ. ಉದ್ಯಮಸ್ಥ ಮಹಿಳೆಯರಿಗೆ ಹೆಚ್ಚಿದ ಒತ್ತಡ. ಕೊಟ್ಟ ಸಾಲ ತಿರುಗಿ ಬರಲಿದೆ. ಶುಭಸಂಖ್ಯೆ: 8

ವೃಶ್ಚಿಕ: ವಿದೇಶ ವ್ಯಾಪಾರದಿಂದ ಲಾಭ. ಮಹಿಳೆಯರು ಸವಾಲುಗಳನ್ನು ಯಶಸ್ವಿಯಾಗಿ ನಿರ್ವಹಿಸುವಿರಿ. ಜೇನು ಕೃಷಿಕರಿಗೆ ಗೌರವ. ಶುಭಸಂಖ್ಯೆ:9

ಧನಸ್ಸು: ಸಾಮಾಜಿಕ ಹೋರಾಟಗಾರರಿಗೆ ಪದವಿ ಪ್ರಾಪ್ತಿಯಾಗಲಿದೆ. ಭತ್ತ, ಅಡಕೆ ಬೆಳೆಗಾರರಿಗೆ ಲಾಭ. ಯಕ್ಷಗಾನ ಕಲಾವಿದರಿಗೆ ಸನ್ಮಾನ.ಶುಭಸಂಖ್ಯೆ: 4

ಮಕರ: ತಾಂತ್ರಿಕ ವಿದ್ಯಾರ್ಥಿಗಳಿಗೆ ಒತ್ತಡ. ನಾಟ್ಯ ಕಲಾವಿದರಿಗೆ ಬೇಡಿಕೆ ಹೆಚ್ಚುವುದು. ಸರ್ಕಾರಿ ಒಪ್ಪಂದದಲ್ಲಿ ಧನ ಲಾಭವಾಗಲಿದೆ. ಶುಭಸಂಖ್ಯೆ:3

ಕುಂಭ: ಕೃಷಿ ಭೂಮಿ ಖರೀದಿಗೆ ಇದ್ದ ಅಡ್ಡಿ ನಿವಾರಣೆ. ಪಿತ್ರಾರ್ಜಿತ ಆಸ್ತಿ ಹಂಚಿಕೆ. ಛಾಯಾಗ್ರಾಹಕರಿಗೆ ಅನಿರೀಕ್ಷಿತವಾಗಿ ಆದಾಯ ಹೆಚ್ಚಳ. ಶುಭಸಂಖ್ಯೆ: 4

ಮೀನ: ಅವಿವಾಹಿತರಿಗೆ ವಿವಾಹ ಸಿದ್ದಿ. ಮನೆಯಲ್ಲಿ ಶುಭಕಾರ್ಯ. ಇವೆಂಟ್ ನಿರ್ವಹಣೆಯಲ್ಲಿ ನಿರೀಕ್ಷೆಗಿಂತ ಅಧಿಕ ಲಾಭ ಗಳಿಸುವಿರಿ. ಶುಭಸಂಖ್ಯೆ:5

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net