

ಮೇಷ: ವಾಹನ ಖರೀದಿಗೆ ಹಣಕಾಸಿನ ಅನುಕೂಲ. ವಿದ್ಯುತ್ ಇಲಾಖೆ ಅಧಿಕಾರಿಗಳಿಗೆ ವರ್ಗ. ಸಿನಿಮಾ ನಿರ್ದೇಶಕರಿಗೆ ಮಹತ್ವದ ದಿನ. ಶುಭಸಂಖ್ಯೆ: 9
ವೃಷಭ: ವೈದ್ಯರಿಗೆ ಸಮಾಜದಲ್ಲಿ ಸನ್ಮಾನ. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಮಾಧಾನ. ಅಥ್ಲೀಟ್ಗಳಿಗೆ ವಿದೇಶ ಪ್ರಯಾಣ. ಶುಭಸಂಖ್ಯೆ: 6
ಮಿಥುನ: ಸಹೋದರರೊಂದಿಗೆ ಇದ್ದ ಮನಸ್ತಾಪ ಬಗೆಹರಿಯಲಿದೆ. ಖಾದಿ ವಸ್ತ್ರಗಳ ಮಾರಾಟದಲ್ಲಿ ಲಾಭ. ಪ್ರಭಾವಿ ವ್ಯಕ್ತಿಗಳ ಸಂಪರ್ಕ. ಶುಭಸಂಖ್ಯೆ: 2
ಕಟಕ: ವಿಚ್ಛೇದಿತರಿಗೆ ಮರುವಿವಾಹ ಯೋಗ. ಉನ್ನತ ವಿದ್ಯಾಭ್ಯಾಸದ ಆಸೆ ಈಡೇರಲಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿ. ಶುಭಸಂಖ್ಯೆ:5
ಸಿಂಹ: ಅಪರಿಚಿತರಿಂದ ಕಷ್ಟಕಾಲದಲ್ಲಿ ಸಹಾಯ ಸಿಗಲಿದೆ. ಸ್ನೇಹಿತರೊಂದಿಗೆ ದೂರ ಪ್ರಯಾಣ. ಕೃಷಿ ಜಮೀನಿನ ಮಾರಾಟದಲ್ಲಿ ಲಾಭ. ಶುಭಸಂಖ್ಯೆ:1
ಕನ್ಯಾ: ಕೆಮಿಕಲ್ಸ್ ಕಾರ್ಖಾನೆ ಮಾಲೀಕರಿಗೆ ಲಾಭ. ಗೃಹ ನಿರ್ಮಾಣ ಪ್ರಾರಂಭ. ರೇಷ್ಮೆ, ಜೇನು ಕೃಷಿಕರಿಗೆ ಸರ್ಕಾರದಿಂದ ಪುರಸ್ಕಾರ. ಶುಭಸಂಖ್ಯೆ:8
ತುಲಾ: ದುಬಾರಿ ವಸ್ತುಗಳ ಖರೀದಿಗೆ ವೆಚ್ಚ. ಬ್ಯಾಂಕಿಂಗ್ ನೌಕರರಿಗೆ ಕೆಲಸದ ಒತ್ತಡ. ಐಟಿ ಉದ್ಯೋಗಿಗಳಿಗೆ ಹೊಸ ಪ್ರಾಜೆಕ್ಟ್ ಸಿಗಲಿದೆ. ಶುಭಸಂಖ್ಯೆ:6
ವೃಶ್ಚಿಕ: ಲೆಕ್ಕಪರಿಶೋಧಕ ವೃತ್ತಿಯಲ್ಲಿ ಹಣ ಗಳಿಕೆ. ಧಾರ್ವಿುಕ ವ್ಯಕ್ತಿಗಳ ಮಾರ್ಗದರ್ಶನ ಸಿಗಲಿದೆ. ಶಿಕ್ಷಣ ಸಂಸ್ಥೆಗಳ ನೇತಾರರಿಗೆ ಶುಭದಿನ.ಶುಭಸಂಖ್ಯೆ: 3
ಧನಸ್ಸು: ಭೂ ವ್ಯವಹಾರದಲ್ಲಿ ದ್ವಿಗುಣ ಲಾಭ. ಸಂಗಾತಿಯ ಮಾರ್ಗದರ್ಶನದಲ್ಲಿ ನೂತನ ಮನೆ ಖರೀದಿ. ದಿನಾಂತ್ಯದಲ್ಲಿ ಶುಭ ಸುದ್ದಿ. ಶುಭಸಂಖ್ಯೆ:7
ಮಕರ: ಕುಟುಂಬದೊಂದಿಗೆ ಪುಣ್ಯಕ್ಷೇತ್ರದ ದರ್ಶನ ಮಾಡುವಿರಿ. ಐಷಾರಾಮಿ ಜೀವನಕ್ಕೆ ಖರ್ಚು. ಷೇರು ಹೂಡಿಕೆಗೆ ಸೂಕ್ತ ಸಮಯ. ಶುಭಸಂಖ್ಯೆ:9
ಕುಂಭ: ಕೊಟ್ಟ ಹಣ ತಿರುಗಿ ಬರಲಿದೆ. ಸಂಶೋಧನೆಯಲ್ಲಿ ಪ್ರಗತಿ. ಗೃಹ ನಿರ್ವಣಕ್ಕಿದ್ದ ಅಡ್ಡಿ ಅಂತ್ಯ. ರಾಜಕೀಯ ಅಧಿಕಾರ ಪ್ರಾಪ್ತಿ. ಶುಭಸಂಖ್ಯೆ:8
ಮೀನ: ಆಮದು ರಫ್ತು ವ್ಯವಹಾರದಲ್ಲಿ ಅನಿರೀಕ್ಷಿತ ಲಾಭ. ಸಹೋದ್ಯೋಗಿಗಳ ನೆರವು ಲಭ್ಯ. ನನೆಗುದಿಗೆ ಬಿದ್ದ ಕೆಲಸಕ್ಕೆ ಮರುಚಾಲನೆ. ಶುಭಸಂಖ್ಯೆ: 7