ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಕುಟುಂಬದ ಆಸ್ತಿ ವಿವಾದ ಪರಿಹಾರವಾಗಲಿದೆ

ಜ್ಯೋತಿಷ್ಯ
ಜ್ಯೋತಿಷ್ಯ
Published on

ಮೇಷ: ಭೂಮಿ ಖರೀದಿಗೆ ಅನುಕೂಲ. ಶತ್ರುಗಳ ಮೇಲೆ ಹಿಡಿತ ಸಾಧನೆ. ಸಿನಿಮಾ ನಟರಿಗೆ ಶುಭ. ಸಹೋದರಿಯ ಆರೋಗ್ಯ ಚೇತರಿಕೆ. ಶುಭಸಂಖ್ಯೆ: 8

ವೃಷಭ: ಭೂ ವ್ಯವಹಾರಗಳಿಂದ ಅನುಕೂಲ. ಐಟಿ ಉದ್ಯೋಗದಲ್ಲಿ ಲಾಭ. ಕೃಷಿ ಉಪಕರಣಗಳ ವ್ಯಾಪಾರದಲ್ಲಿ ಸಾಧಾರಣ ಸಂಪಾದನೆ.ಶುಭಸಂಖ್ಯೆ: 4

ಮಿಥುನ: ಸೀರೆ, ಉಡುಗೆ ವ್ಯವಹಾರದಲ್ಲಿ ಆರ್ಥಿಕ ಲಾಭ. ಕೌಟುಂಬಿಕ ನೆಮ್ಮದಿ. ಮೋಜು ಮಸ್ತಿ ಮಾಡುವ ತವಕ. ಪ್ರೇಮದಲ್ಲಿ ಸಿಲುಕುವಿರಿ. ಶುಭಸಂಖ್ಯೆ: 2

ಕಟಕ: ತಂದೆಯಿಂದ ಆರ್ಥಿಕ ಸಹಾಯ. ಕಚೇರಿಯಲ್ಲಿ ಸಹೋದ್ಯೋಗಿಗಳು ಸಹಾಯ ಮಾಡುತ್ತಾರೆ. ಮಕ್ಕಳಿಂದ ಸಮಾಜದಲ್ಲಿ ಗೌರವ. ಶುಭಸಂಖ್ಯೆ: 6

ಸಿಂಹ: ಕುಟುಂಬದ ಆಸ್ತಿ ವಿವಾದ ಪರಿಹಾರವಾಗಲಿದೆ. ಸ್ತ್ರೀಯರಿಗೆ ಉದ್ಯೋಗ ಬದಲಾವಣೆ. ಮನಸ್ಸಿನಲ್ಲಿ ನಾನಾ ಆಲೋಚನೆ ಬರಲಿದೆ.ಶುಭಸಂಖ್ಯೆ: 1

ಕನ್ಯಾ: ಚಿಕ್ಕ ವ್ಯಾಪಾರಸ್ಥರಿಗೆ ಲಾಭ. ಸಾಲ ಪಡೆಯಲು ಸುಸಮಯ. ಸಹೋದರಿಯಿಂದ ಸಹಾಯ. ಹೆಣ್ಣು ಮಕ್ಕಳಿಂದ ಉತ್ತಮ ಹೆಸರು. ಶುಭಸಂಖ್ಯೆ: 9

ತುಲಾ: ದೂರ ಪ್ರದೇಶದಲ್ಲಿ ಉದ್ಯೋಗ. ಮನೆಯಲ್ಲಿ ನೆಮ್ಮದಿ. ಅಲಂಕಾರಿಕ ವಸ್ತು ಮಾರಾಟದಲ್ಲಿ ಲಾಭ. ಕಚೇರಿಯಲ್ಲಿ ಉಲ್ಲಾಸದ ಕ್ಷಣ. ಶುಭಸಂಖ್ಯೆ: 7

ವೃಶ್ಚಿಕ: ಬುದ್ಧಿವಂತಿಕೆಯಿಂದ ವ್ಯಾಪಾರದ ನಷ್ಟವನ್ನು ತಡೆಯುವಿರಿ. ಬಂಧುಗಳಿಂದ ಹಣಕಾಸಿನ ನೆರವು. ಐಟಿ ಕ್ಷೇತ್ರದವರಿಗೆ ಅನುಕೂಲ. ಶುಭಸಂಖ್ಯೆ: 5

ಧನಸ್ಸು: ನೂತನ ವಾಹನ ಖರೀದಿಗೆ ನಿರ್ಧಾರ. ಸ್ನೇಹಿತರಿಂದ ನಿಮ್ಮ ಬಗ್ಗೆ ಪ್ರಚಾರ. ದಾಂಪತ್ಯದಲ್ಲಿ ಇದ್ದ ಮನಃಸ್ತಾಪ ಬಗೆಹರಿಯಲಿದೆ.ಶುಭಸಂಖ್ಯೆ: 4

ಮಕರ: ಪ್ರೀತಿ -ಪ್ರೇಮ ವಿಚಾರದಲ್ಲಿ ಯಶಸ್ಸು. ಮನಸ್ಸಿನ ಭಾವನೆಗಳಿಗೆ ತಕ್ಕಂತೆ ಇಷ್ಟಾರ್ಥ ಸಿದ್ಧಿಸುವುದು. ಶತ್ರುಗಳು ಮಿತ್ರರಾಗುವರು. ಶುಭಸಂಖ್ಯೆ: 6

ಕುಂಭ: ಸ್ನೇಹಿತನ ಸಾಲ ತೀರಿಸಲು ದುಡಿದ ಹಣ ನೀಡುವಿರಿ. ಸ್ಥಿರಾಸ್ತಿ-ವಾಹನ ವ್ಯವಹಾರದಲ್ಲಿ ಲಾಭ. ಮಕ್ಕಳ ವಿದ್ಯಾಭ್ಯಾಸಕ್ಕೆ ಖರ್ಚು. ಶುಭಸಂಖ್ಯೆ: 2

ಮೀನ: ನೆರೆಹೊರೆಯವರ ಜೊತೆ ಉತ್ತಮ ಬಾಂಧವ್ಯ. ಆಕಸ್ಮಿಕ ಲಾಭ. ಆಸೆ ಆಕಾಂಕ್ಷೆಗಳಿಗಾಗಿ ದಾರಿ ತಪ್ಪುವ ಆಲೋಚನೆ ಬೇಡ. ಶುಭಸಂಖ್ಯೆ: 3

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net