_1774118380290.webp?w=480&auto=format%2Ccompress&fit=max)
_1774118380290.webp?w=480&auto=format%2Ccompress&fit=max)
ಮೇಷ: ಉದ್ಯೋಗ ಅಥವಾ ವ್ಯಾಪಾರದಲ್ಲಿ ಹೊಸ ಜವಾಬ್ದಾರಿಗಳು ಸಿಗಲಿವೆ. ವ್ಯಾಪಾರದಲ್ಲಿ ಲಾಭದ ಪ್ರಮಾಣ ಹೆಚ್ಚಾಗಲಿದೆ. ಶುಭಸಂಖ್ಯೆ: 9
ವೃಷಭ: ಸಹೋದ್ಯೋಗಿಗಳ ಜೊತೆ ಭಿನ್ನಾಭಿಪ್ರಾಯ ಮೂಡದಂತೆ ಎಚ್ಚರ ವಹಿಸಿ. ಹಣಕಾಸಿನ ವ್ಯವಹಾರದಲ್ಲಿ ಜಾಗರೂಕರಾಗಿರಿ.ಶುಭಸಂಖ್ಯೆ:9
ಮಿಥುನ: ಉದ್ಯೋಗದಲ್ಲಿ ಬಡ್ತಿಯ ಯೋಗವಿದೆ. ರಫ್ತು-ಆಮದು ವ್ಯವಹಾರ ಮಾಡುವವರಿಗೆ ಸುಸಮಯ. ಲೇಖಕರಿಗೆ ಯಶಸ್ಸು. ಶುಭಸಂಖ್ಯೆ:4
ಕಟಕ: ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ಹೊಸ ಹೂಡಿಕೆಗೆ ಸೂಕ್ತ ದಿನವಲ್ಲ. ನಟನಾ ಕ್ಷೇತ್ರದಲ್ಲಿರುವವರಿಗೆ ಸನ್ಮಾನ. ಶುಭಸಂಖ್ಯೆ:7
ಸಿಂಹ: ಕಚೇರಿಯಲ್ಲಿ ಪ್ರಭಾವ ಹೆಚ್ಚಾಗಲಿದೆ. ಪಾಲುದಾರಿಕೆ ವ್ಯಾಪಾರದಲ್ಲಿ ಲಾಭವಾಗುವುದು. ಚಿತ್ರಕಲೆ, ಶಿಲ್ಪಕಲೆಗೆ ಬೇಡಿಕೆ ಹೆಚ್ಚಲಿದೆ. ಶುಭಸಂಖ್ಯೆ: 2
ಕನ್ಯಾ: ವಿದೇಶಿ ವ್ಯವಹಾರಗಳಲ್ಲಿ ಪ್ರಗತಿ. ಐಟಿ ಉದ್ಯೋಗಿಗಳಿಗೆ ದೂರ ಪ್ರಯಾಣದ ಸೂಚನೆ. ಸಾಹಿತ್ಯ ಲೋಕದಲ್ಲಿ ಜನಮನ್ನಣೆ. ಶುಭಸಂಖ್ಯೆ:1
ತುಲಾ: ಆರ್ಥಿಕ ಪರಿಸ್ಥಿತಿ ಸುಧಾರಣೆ. ಹಳೇಬಾಕಿ ವಾಪಸ್ ಬರಲಿದೆ. ಕೆಲಸದಲ್ಲಿ ಸಮಾಧಾನ. ನೃತ್ಯ, ಫ್ಯಾಷನ್ ರಂಗದವರಿಗೆ ಶುಭ. ಶುಭಸಂಖ್ಯೆ:5
ವೃಶ್ಚಿಕ: ಕೆಲಸದ ಸ್ಥಳದಲ್ಲಿ ಗೌರವ. ವ್ಯಾಪಾರದಲ್ಲಿ ಹೊಸ ಯೋಜನೆ ಜಾರಿಗೆ ಸುಸಮಯ. ಜಾನಪದ ಕಲಾವಿದರಿಗೆ ಹೆಚ್ಚಿನ ಮನ್ನಣೆ. ಶುಭಸಂಖ್ಯೆ:8
ಧನಸ್ಸು: ಸವಾಲುಗಳನ್ನು ಸಮರ್ಥವಾಗಿ ಎದುರಿಸುವಿರಿ. ಸ್ವಂತ ಉದ್ಯಮ ಆರಂಭಿಸುವವರಿಗೆ ಶುಭ ಸೂಚನೆ. ಅಧ್ಯಾತ್ಮದತ್ತ ಒಲವು. ಶುಭಸಂಖ್ಯೆ:8
ಮಕರ: ಹಿರಿಯ ಅಧಿಕಾರಿಗಳಿಂದ ಬೆಂಬಲ. ಕಬ್ಬಿಣ, ಕಟ್ಟಡ ಸಾಮಗ್ರಿ ವ್ಯಾಪಾರಿಗಳಿಗೆ ಹೆಚ್ಚಿನ ಲಾಭ. ನಾಟಕ ರಂಗದವರಿಗೆ ಶುಭದಿನ. ಶುಭಸಂಖ್ಯೆ: 3
ಕುಂಭ: ಹೊಸ ಆಲೋಚನೆಗಳು ಕೆಲಸದಲ್ಲಿ ಜಯ ತರಲಿವೆ. ಆರ್ಥಿಕವಾಗಿ ಖರ್ಚು ಹೆಚ್ಚಾಗಬಹುದು. ಡಿಜಿಟಲ್ ವೃತ್ತಿಯವರಿಗೆ ಬೇಡಿಕೆ. ಶುಭಸಂಖ್ಯೆ:3
ಮೀನ: ಎಲ್ಲ ಕ್ಷೇತ್ರದಲ್ಲೂ ಯಶಸ್ಸು. ಆದಾಯದ ಹೊಸ ಮೂಲ ಸೃಷ್ಟಿ. ಕಲಾವಿದರಿಗೆ ಉತ್ತಮ ಲಾಭ. ಆರೋಗ್ಯ ಉತ್ತಮವಾಗಿರುತ್ತದೆ. ಶುಭಸಂಖ್ಯೆ:3