_1774031299831.webp?w=480&auto=format%2Ccompress&fit=max)
_1774031299831.webp?w=480&auto=format%2Ccompress&fit=max)
ಮೇಷ: ವೃತ್ತಿಯಲ್ಲಿ ಒತ್ತಡ ಇದ್ದರೂ ಫಲ ಸಿಗುತ್ತದೆ. ಐಟಿ ಕ್ಷೇತ್ರದಲ್ಲಿ ಒತ್ತಡ. ಮಹಿಳೆಯರಿಗೆ ಹೊಸ ಅವಕಾಶ. ಶರೀರದಲ್ಲಿ ದಣಿವು. ಶುಭಸಂಖ್ಯೆ: 9
ವೃಷಭ: ಉದ್ಯೋಗದಲ್ಲಿ ಸ್ಥಿರತೆ. ದಿನಸಿ ವ್ಯಾಪಾರದಲ್ಲಿ ಲಾಭ. ಕಲಾ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುವಿರಿ. ಸಂಗಾತಿಯ ಆರೋಗ್ಯ ಸಾಧಾರಣ. ಶುಭಸಂಖ್ಯೆ:9
ಮಿಥುನ: ಸಂವಹನದಿಂದ ಯಶ. ಐಟಿ ಕ್ಷೇತ್ರದಲ್ಲಿ ವರ್ಗಾವಣೆ ಸಾಧ್ಯತೆ. ಉನ್ನತ ವಿದ್ಯಾಭ್ಯಾಸದಲ್ಲಿ ಅನುಕೂಲ. ಮಹಿಳೆಯರಿಗೆ ಶುಭ. ಶುಭಸಂಖ್ಯೆ:3
ಕಟಕ: ನಿಮ್ಮ ನಿರ್ಧಾರಕ್ಕೆ ಕುಟುಂಬದ ಬೆಂಬಲ. ಕೃಷಿ ವ್ಯವಹಾರದಲ್ಲಿ ಸಾಧಾರಣ ಫಲ. ದೈಹಿಕ ಕಸರತ್ತಿನ ತರಬೇತುದಾರರಿಗೆ ಶುಭ. ಶುಭಸಂಖ್ಯೆ:1
ಸಿಂಹ: ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶ. ಹೊಸ ಉದ್ಯೋಗದಲ್ಲಿ ಪ್ರಶಂಸೆ. ಕಲಾಕ್ಷೇತ್ರದಲ್ಲಿ ಹೆಸರು ಮಾಡುವಿರಿ. ಮಹಿಳೆಯರಿಗೆ ಗೌರವ. ಶುಭಸಂಖ್ಯೆ:7
ಕನ್ಯಾ: ಕಚೇರಿಯಲ್ಲಿ ಕೆಲಸದ ಒತ್ತಡ ಹೆಚ್ಚಾಗುತ್ತದೆ. ಐಟಿ ಕ್ಷೇತ್ರದಲ್ಲಿ ಸ್ಥಾನಪಲ್ಲಟ ಸಾಧ್ಯತೆ. ಆರೋಗ್ಯದಲ್ಲಿ ಸಣ್ಣ ಪುಟ್ಟ ತೊಂದರೆ ಸಾಧ್ಯತೆ. ಶುಭಸಂಖ್ಯೆ:2
ತುಲಾ: ಆಮದು ವ್ಯಾಪಾರದಲ್ಲಿ ಉತ್ತಮ ಅವಕಾಶ. ಹೊಸ ತಾಂತ್ರಿಕ ಪ್ರಾಜೆಕ್ಟ್ ಕೈಗೆತ್ತಿಕೊಳ್ಳುವಿರಿ. ಮಹಿಳೆಯರಿಗೆ ಲಾಭದಾಯಕ ದಿನ. ಶುಭಸಂಖ್ಯೆ:3
ವೃಶ್ಚಿಕ: ಕಲಾವಿದರಿಗೆ ಶ್ರಮಕ್ಕೆ ತಕ್ಕ ಫಲ. ತೈಲ ವ್ಯಾಪಾರದಲ್ಲಿ ಲಾಭಗಳಿಸುವಿರಿ. ಕಚೇರಿಯಲ್ಲಿ ಕೋಪ ನಿಯಂತ್ರಿಸಿಕೊಳ್ಳುವುದು ಅಗತ್ಯ.ಶುಭಸಂಖ್ಯೆ: 2
ಧನಸ್ಸು: ದೂರ ಪ್ರಯಾಣ ಮಾಡುವ ಸಾಧ್ಯತೆ. ವೃತ್ತಿ ಶಿಕ್ಷಣದಲ್ಲಿ ಯಶಸ್ಸು ಪಡೆಯುವಿರಿ. ಸ್ವಂತ ಉದ್ಯಮದಲ್ಲಿ ಅನಿರೀಕ್ಷಿತ ಲಾಭದ ಖುಷಿ. ಶುಭಸಂಖ್ಯೆ:4
ಮಕರ: ಆರ್ಥಿಕ ವ್ಯವಹಾರದಲ್ಲಿ ಜಾಗ್ರತೆ. ಉದ್ಯೋಗದಲ್ಲಿ ಹೊಸ ಜವಾಬ್ದಾರಿ ಹೆಗಲೇರುವುದು. ತಾಯಿಯ ಆರೋಗ್ಯದಲ್ಲಿ ಚೇತರಿಕೆ. ಶುಭಸಂಖ್ಯೆ:8
ಕುಂಭ: ಹೊಸ ಆಲೋಚನೆಗಳು ನಿರೀಕ್ಷಿತ ಯಶಸ್ಸು ತರುತ್ತವೆ. ಚಲನಚಿತ್ರ ಕ್ಷೇತ್ರದಲ್ಲಿ ಪ್ರಗತಿಯಾಗುವುದು. ಮಹಿಳೆಯರಿಗೆ ಶುಭ ಫಲ. ಶುಭಸಂಖ್ಯೆ:6
ಮೀನ: ಖಾದಿ ಉಡುಪುಗಳ ಮಾರಾಟದಲ್ಲಿ ಗಣನೀಯ ಲಾಭ. ಸಂಗೀತ ಕ್ಷೇತ್ರದಲ್ಲಿ ವಿಶೇಷ ಸಾಧನೆ. ಕುಟುಂಬದಲ್ಲಿ ಸಂತಸದ ದಿನ. ಶುಭಸಂಖ್ಯೆ:5