_1766169607946.webp?w=480&auto=format%2Ccompress&fit=max)
_1766169607946.webp?w=480&auto=format%2Ccompress&fit=max)
ಮೇಷ: ಬಂಧುಗಳ ಜತೆಗೆ ಪ್ರವಾಸ. ಪರರ ಕಷ್ಟಕ್ಕೆ ಸ್ಪಂದಿಸುವಿರಿ. ಅಸಾಧ್ಯ ಕೆಲಸವನ್ನು ಸಾಧಿಸುವಿರಿ. ಅತಿಯಾದ ಆತ್ಮವಿಶ್ವಾಸ ಬೇಡ. ಶುಭಸಂಖ್ಯೆ: 5
ವೃಷಭ: ಕೋರ್ಟ್ ಪ್ರಕರಣಗಳಲ್ಲಿ ಕಾರ್ಯಾನುಕೂಲ. ಸ್ಥಿರಾಸ್ತಿ ಖರೀದಿಗೆ ನಿರ್ಧರಿಸುವಿರಿ. ಭತ್ತದ ಕೃಷಿಯಲ್ಲಿ ಉತ್ತಮ ಲಾಭವಾಗುವುದು. ಶುಭಸಂಖ್ಯೆ: 7
ಮಿಥುನ: ಯುವತಿಯರಿಗೆ ವಿವಾಹ ಯೋಗ ಕೂಡಿ ಬರಲಿದೆ. ಉದ್ಯೋಗದ ಸಂದರ್ಶನದಲ್ಲಿ ಯಶಸ್ವಿಯಾಗುವಿರಿ. ಸಂಭ್ರಮದ ದಿನ. ಶುಭಸಂಖ್ಯೆ:1
ಕಟಕ: ಆಹಾರ ವ್ಯತ್ಯಾಸದಿಂದ ಶರೀರದಲ್ಲಿ ತಳಮಳ. ಐಷಾರಾಮಿ ವಸ್ತುಗಳ ಖರೀದಿ. ಉನ್ನತ ವಿದ್ಯಾಭ್ಯಾಸಕ್ಕೆ ವಿದೇಶದಲ್ಲಿ ಅವಕಾಶ. ಶುಭಸಂಖ್ಯೆ: 4
ಸಿಂಹ: ಸರ್ಕಾರಿ ಅಧಿಕಾರಿಗಳ ಕಾರ್ಯವೈಖರಿಯಲ್ಲಿ ಬದಲಾವಣೆ. ಷೇರು ವ್ಯವಹಾರಗಳಲ್ಲಿ ಲಾಭ. ದಾಂಪತ್ಯದಲ್ಲಿ ಅನ್ಯೋನ್ಯತೆ. ಶುಭಸಂಖ್ಯೆ: 3
ಕನ್ಯಾ: ಸ್ನೇಹಿತರಿಂದ ಸಾಲ ಪಡೆಯುವ ಯೋಚನೆ. ಸಲ್ಲದ ಅಪವಾದದಿಂದ ಹೊರಬಂದು ನಿರಾಳ. ನಿಯಮ ಉಲ್ಲಂಘನೆಗೆ ದಂಡ. ಶುಭಸಂಖ್ಯೆ:3
ತುಲಾ: ಕೊಟ್ಟ ಸಾಲ ತಿರುಗಿ ಬರುವುದು. ನಾಟ್ಯ ಶಿಕ್ಷಕರಿಗೆ ಬೇಡಿಕೆ. ಸರ್ಕಾರಿ ಕೆಲಸ ಬೇಗ ಮುಗಿಯಲಿದೆ. ದೂರ ಪ್ರಯಾಣಕ್ಕೆ ನಿರ್ಧಾರ.ಶುಭಸಂಖ್ಯೆ:1
ವೃಶ್ಚಿಕ: ಕುಟುಂಬದಲ್ಲಿ ಹಿತಕರ ವಾತಾವರಣ. ಸಂಶೋಧನಾ ಕ್ಷೇತ್ರದವರಿಗೆ ಕೇಂದ್ರ ಸರ್ಕಾರದಿಂದ ಗೌರವ. ಜಾಣ್ಮೆಯಿಂದ ಯಶಸ್ಸು. ಶುಭಸಂಖ್ಯೆ: 6
ಧನಸ್ಸು: ದೇವತಾ ಕಾರ್ಯಗಳಲ್ಲಿ ಭಾಗಿಯಾಗುವಿರಿ. ಅವಿವಾಹಿತರಿಗೆ ವಿವಾಹ ಯೋಗ. ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆಯಾಗಲಿದೆ. ಶುಭಸಂಖ್ಯೆ:5
ಮಕರ: ದುರ್ವ್ಯಸನದಿಂದ ಹೊರಬರುವಿರಿ. ಅಕಾಲ ಭೋಜನ. ಪದವಿ ಪ್ರಾಪ್ತಿಗೆ ಇದ್ದ ಅಡ್ಡಿ ನಿವಾರಣೆ. ಮೇಲಧಿಕಾರಿಗಳಿಂದ ಪ್ರಶಂಸೆ. ಶುಭಸಂಖ್ಯೆ: 2
ಕುಂಭ: ಕಾರ್ಯದಲ್ಲಿ ಜಯ. ಮಕ್ಕಳ ಪ್ರಗತಿಯಿಂದ ಸಂತೋಷ. ಕಲಾವಿದರ ಜೀವನದಲ್ಲಿ ಉತ್ತಮ ಪ್ರಗತಿ. ಗುಪ್ತ ವಿದ್ಯೆಯಲ್ಲಿ ಆಸಕ್ತಿ. ಶುಭಸಂಖ್ಯೆ: 7
ಮೀನ: ಬ್ಯಾಂಕಿನಿಂದ ಸಾಲ ಸಿಗಲಿದೆ, ಆಹಾರ ಸಾಮಗ್ರಿ ವ್ಯಾಪಾರದಲ್ಲಿ ಸಾಧಾರಣ ಲಾಭ. ಆರ್ಥಿಕವಾಗಿ ಋಣಮುಕ್ತರಾಗುವ ಅವಕಾಶ. ಶುಭಸಂಖ್ಯೆ: 6