ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಹೊಸ ಯೋಜನೆ ಆರಂಭಿಸಲು ಇಂದು ಶುಭದಿನ

ಜ್ಯೋತಿಷ್ಯ
ಜ್ಯೋತಿಷ್ಯ
Published on

ಮೇಷ: ಕೆಲಸಗಳನ್ನು ಚೆನ್ನಾಗಿ ನಿರ್ವಹಿಸುವಿರಿ. ಮನೆಯಲ್ಲಿನ ಚಿಕ್ಕ ಗೊಂದಲ ಪರಿಹಾರ. ಸಂಗಾತಿಯ ಮಾತನ್ನು ಶಾಂತವಾಗಿ ಕೇಳಿ. ಶುಭಸಂಖ್ಯೆ:1

ವೃಷಭ: ಆರ್ಥಿಕ ಟೆನ್ಷನ್ ಮಧ್ಯಾಹ್ನದ ವೇಳೆಗೆ ಕಡಿಮೆ ಯಾಗುತ್ತದೆ. ದೂರದ ಸಂಬಂಧಿಯಿಂದ ಶುಭಸುದ್ದಿ. ಗೃಹ ನಿರ್ವಣಕ್ಕೆ ಸಿದ್ಧತೆ. ಶುಭಸಂಖ್ಯೆ: 7

ಮಿಥುನ: ಹೊಸ ಕೆಲಸ ಶುರು ಮಾಡಲು ಶುಭದಿನ. ಗೆಳೆಯರಿಂದ ಆರ್ಥಿಕ ನೆರವು ಸಿಗಲಿದೆ. ಪ್ರಮುಖ ಮಾಹಿತಿಯನ್ನು ಕಲೆ ಹಾಕಲಿದ್ದೀರಿ. ಶುಭಸಂಖ್ಯೆ:7

ಕಟಕ: ಕುಟುಂಬದ ವಿಷಯಕ್ಕೆ ಜಾಸ್ತಿ ಗಮನ ಅಗತ್ಯ. ಸಹೋದ್ಯೋಗಿಗಳಿಂದ ಬೆಂಬಲ. ಕಲಾವಿದರ ಜೀವನದಲ್ಲಿ ಅನಿರೀಕ್ಷಿತ ಘಟನೆ. ಶುಭಸಂಖ್ಯೆ:5

ಸಿಂಹ: ಧೈರ್ಯ, ಉತ್ಸಾಹದಿಂದ ಕೆಲಸ ನಿರ್ವಹಿಸುವಿರಿ. ಹೊಸ ಯೋಜನೆ ಆರಂಭಿಸಲು ಇಂದು ಶುಭದಿನ. ಪ್ರಯಾಣ ಮುಂದೂಡಿ. ಶುಭಸಂಖ್ಯೆ:2

ಕನ್ಯಾ: ಹೆಚ್ಚು ಚಿಂತಿಸದೆ ಮುಂದಕ್ಕೆ ಹೋಗಿ. ಪ್ರತಿಭೆಗೆ ಸೂಕ್ತ ಅವಕಾಶ ಸಿಗಲಿದೆ. ನಿವೇಶನ ಖದೀದಿಗೆ ಇದ್ದ ನಿರ್ಬಂಧ ತೆರವಾಗಲಿದೆ. ಶುಭಸಂಖ್ಯೆ:9

ತುಲಾ: ಸಾಲ ತೀರಿಸಲು ಸ್ನೇಹಿತರಿಂದ ಸಹಕಾರ ಸಿಗಲಿದೆ. ಸಹೋದ್ಯೋಗಿಗಳೊಂದಿಗೆ ಔತಣ ಕೂಟ. ಹಣಕಾಸಿನಲ್ಲಿ ಸ್ಥಿರತೆ ಇರಲಿದೆ. ಶುಭಸಂಖ್ಯೆ:1

ವೃಶ್ಚಿಕ: ಕೊಟ್ಟ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿ ಸುವಿರಿ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಆತ್ಮವಿಶ್ವಾಸದಿಂದ ಇದ್ದರೆ ಯಶಸ್ಸು ಖಚಿತ. ಶುಭಸಂಖ್ಯೆ: 4

ಧನಸ್ಸು: ಸಹೋದರನ ಆರೋಗ್ಯದತ್ತ ಗಮನ ಕೊಡಿ. ವ್ಯವಹಾರದಲ್ಲಿ ಒತ್ತಡ ನಿಭಾಯಿಸಿ. ಆಸ್ತಿ ನೋಂದಣಿ ಮುಂದೂಡುವುದು ಸೂಕ್ತ. ಶುಭಸಂಖ್ಯೆ: 3

ಮಕರ: ಕಿರುತೆರೆ ನಿರ್ದೇಶಕರಿಗೆ ಹೊಸ ಯೋಚನೆ. ಸರ್ಕಾರಿ ಕೆಲಸ ತಡವಾದರೂ ಅಂತಿಮ ಫಲ ಒಳ್ಳೆಯದೇ. ಅಡಿಕೆ ಕೃಷಿಯಲ್ಲಿ ಲಾಭ. ಶುಭಸಂಖ್ಯೆ:7

ಕುಂಭ: ಬೆಳೆದ ಫಸಲಿನ ಮಾರಾಟಕ್ಕೆ ಶುಭದಿನ. ಲೆಕ್ಕಪರಿ ಶೋಧಕರಿಗೆ ಅಯಾಚಿತವಾಗಿ ಹಣ ಬರಲಿದೆ. ಸಂಜೆಯ ವೇಳೆಗೆ ಶುಭ ಸುದ್ದಿ. ಶುಭಸಂಖ್ಯೆ:5

ಮೀನ: ಮಗಳ ವಿವಾಹ ನಿಶ್ಚಯವಾಗಲಿದೆ. ನಾಟ್ಯ ಮತ್ತು ಸಂಗೀತದವರಿಗೆ ಇದು ಒಳ್ಳೆಯ ದಿನ. ಹಣ ಹೂಡಿಕೆಗೆ ಇಂದು ಸುಸಮಯ. ಶುಭಸಂಖ್ಯೆ:9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net