ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ನಿಮ್ಮ ಪ್ರತಿಭೆಗೆ ತಕ್ಕ ಪುರಸ್ಕಾರ ಸಿಗಲಿದೆ

ಜ್ಯೋತಿಷ್ಯ
ಜ್ಯೋತಿಷ್ಯ
Published on

ಮೇಷ: ಹೃದಯ ಸಂಬಂಧಿ ವ್ಯಾಧಿಗೆ ಸಮರ್ಪಕ ಚಿಕಿತ್ಸೆ ಸಿಗಲಿದೆ. ಕೆಲಸಗಾರರ ಸಮಸ್ಯೆ ಪರಿಹಾರ. ಅಡಿಕೆ, ತೆಂಗು ಬೆಳೆಗಾರರಿಗೆ ಲಾಭ. ಶುಭಸಂಖ್ಯೆ: 8

ವೃಷಭ: ಧಾರ್ವಿುಕ ಮುಖಂಡರಿಗೆ ಸಾರ್ವಜನಿಕವಾಗಿ ಒತ್ತಡ ಹೆಚ್ಚಾಗಲಿದೆ. ವಾಣಿಜ್ಯ ಮತ್ತು ತಾಂತ್ರಿಕ ವಿದ್ಯಾರ್ಥಿಗಳಿಗೆ ಶುಭದಿನ. ಶುಭಸಂಖ್ಯೆ:7

ಮಿಥುನ: ಕ್ರೀಡಾ ತರಬೇತುದಾರರಿಗೆ ವಿದೇಶ ಪ್ರಯಾಣ ಸಾಧ್ಯತೆ. ಗೃಹ ನಿರ್ವಣಕ್ಕೆ ಚಾಲನೆ. ಆಸ್ತಿ ನೋಂದಣಿಗೆ ಇದ್ದ ಅಡ್ಡಿ ನಿವಾರಣೆ. ಶುಭಸಂಖ್ಯೆ: 1

ಕಟಕ: ಧಾರ್ವಿುಕ ಕ್ಷೇತ್ರದ ನೇತಾರರಿಗೆ ಧನಲಾಭವಾಗು ವುದು. ರೇಷ್ಮೆ ಕೃಷಿಕರಿಗೆ ಸರ್ಕಾರದಿಂದ ಸಹಾಯ. ಕಲಾವಿದರಿಗೆ ವಿಶೇಷ ದಿನ. ಶುಭಸಂಖ್ಯೆ: 5

ಸಿಂಹ: ಯಶಸ್ಸಿಗೆ ಬಂಧು ಬಾಂಧವರಿಂದ ಪ್ರಶಂಸೆ. ಬ್ಯಾಂಕ್ ಉದ್ಯೋಗಿಗಳ ಸ್ಥಳ ಬದಲಾವಣೆ. ಕಟ್ಟಡ ನಿರ್ವಣದಲ್ಲಿ ವಿಳಂಬ. ಶುಭಸಂಖ್ಯೆ:7

ಕನ್ಯಾ: ಬಟ್ಟೆ ವ್ಯಾಪಾರದಲ್ಲಿ ನಿರೀಕ್ಷೆಗೂ ಮೀರಿ ಲಾಭ. ದಾಂಪತ್ಯದಲ್ಲಿ ತಾಳ್ಮೆ ಇರಲಿ. ಡೇರಿ ಉತ್ಪನ್ನಗಳ ಹೊಸ ಅಂಗಡಿ ಫಲ ಕೊಡಲಿದೆ. ಶುಭಸಂಖ್ಯೆ: 6

ತುಲಾ: ನಿರೀಕ್ಷಿತ ವೈದ್ಯಕೀಯ ಕಾಲೇಜಿನ ಪ್ರವೇಶದ ಕನಸು ನನಸು. ವಿವಾಹದ ಯತ್ನ ಫಲಕಾರಿ. ಕೋರ್ಟ್ ಕೆಲಸದಲ್ಲಿ ನಿಧಾನಗತಿ. ಶುಭಸಂಖ್ಯೆ:4

ವೃಶ್ಚಿಕ: ದೃಢ ನಿರ್ಧಾರ ತೆಗೆದುಕೊಳ್ಳುವಲ್ಲಿ ಗೊಂದಲ. ಗೃಹ ನಿರ್ಮಾಣ ಮಂದಗತಿಯಲ್ಲಿ ಸಾಗಲಿದೆ. ಕಬಡ್ಡಿ ಆಟಗಾರರಿಗೆ ಧನ ಲಾಭ. ಶುಭಸಂಖ್ಯೆ:4

ಧನಸ್ಸು: ಸಿಕ್ಕ ಅವಕಾಶ ಸದುಪಯೋಗಪಡಿಸಿಕೊಳ್ಳಿ. ಆದಾಯ ತೆರಿಗೆ ನೌಕರರಿಗೆ ವರ್ಗಾವಣೆ. ವೈಮಾನಿಕ ಕ್ಷೇತ್ರದಲ್ಲಿ ಉದ್ಯೋಗ ಪ್ರಾಪ್ತಿ. ಶುಭಸಂಖ್ಯೆ:2

ಮಕರ: ಹಳೆಯ ಸ್ನೇಹಿತರ ಭೇಟಿಯಾಗಲಿದೆ. ಆಹಾರ ಸೇವನೆಯಲ್ಲಿ ಎಚ್ಚರವಿರಲಿ. ಕುಟುಂಬದಲ್ಲಿ ಅನಿರೀಕ್ಷಿತ ಘಟನೆ ನಡೆದೀತು. ಶುಭಸಂಖ್ಯೆ:3

ಕುಂಭ: ನಿಮ್ಮ ಪ್ರತಿಭೆಗೆ ತಕ್ಕ ಪುರಸ್ಕಾರ ಸಿಗಲಿದೆ. ಹೊಸ ಪರಿಚಯದಿಂದ ಪ್ರಯೋಜನ. ಪೀಠೋಪಕರಣ ಖರೀದಿಯಲ್ಲಿ ಹಣವ್ಯಯ. ಶುಭಸಂಖ್ಯೆ:9

ಮೀನ: ಕೃಷಿಕರ ಸಮಸ್ಯೆಗೆ ಅಧಿಕಾರಿಗಳಿಂದ ಸ್ಪಂದನೆ. ಕಾರು ಮಳಿಗೆಯ ಮಾಲೀಕರಿಗೆ ಲಾಭ. ಕಟ್ಟಡ ಸಾಮಗ್ರಿ ಮಾರಾಟದಲ್ಲಿ ಲಾಭ. ಶುಭಸಂಖ್ಯೆ:5

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net