ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಚಿನ್ನ ಬೆಳ್ಳಿ ವ್ಯವ ಹಾರದಲ್ಲಿ ಹೆಚ್ಚು ಲಾಭ ಗಳಿಸುವಿರಿ

ಜ್ಯೋತಿಷ್ಯ
ಜ್ಯೋತಿಷ್ಯ
Published on

ಮೇಷ: ಕೆಲಸದಲ್ಲಿ ಉತ್ಸಾಹ ಹೆಚ್ಚಿರುತ್ತದೆ. ಹಣಕಾಸಿನಲ್ಲಿ ಎಚ್ಚರಿಕೆ ಅಗತ್ಯ. ಕುಟುಂಬದಿಂದ ನಿಮ್ಮ ನಿರ್ಧಾರಕ್ಕೆ ಬೆಂಬಲ ಸಿಗುತ್ತದೆ. ಶುಭಸಂಖ್ಯೆ:9

ವೃಷಭ: ಹಳೆಯ ಕೆಲಸಗಳು ಪೂರ್ಣಗೊಳ್ಳುತ್ತವೆ. ಆರೋಗ್ಯದ ಕಡೆ ಗಮನ ಕೊಡಿ. ಚಿನ್ನ ಬೆಳ್ಳಿ ವ್ಯವ ಹಾರದಲ್ಲಿ ಹೆಚ್ಚು ಲಾಭ ಗಳಿಸುವಿರಿ.ಶುಭಸಂಖ್ಯೆ: 2

ಮಿಥುನ: ಹೊಸ ಪರಿಚಯಗಳಿಂದ ಲಾಭ. ಮಾತಿನಲ್ಲಿ ಸಂಯಮ ಇರಲಿ. ನಾಟ್ಯ ಕಲಾವಿದರಿಗೆ ಸಣ್ಣ ಅವಕಾಶಗಳು ದೊರೆಯುತ್ತವೆ. ಶುಭಸಂಖ್ಯೆ:9

ಕಟಕ: ವಿದೇಶ ವ್ಯಾಪಾರ ಸಂಬಂಧಿತ ಒಪ್ಪಂದ ಲಾಭ ತರಲಿದೆ. ಕುಟುಂಬದಲ್ಲಿ ಸಹನೆ ಅಗತ್ಯ. ಸಂಜೆ ವೇಳೆಗೆ ಮಾನಸಿಕ ನೆಮ್ಮದಿ. ಶುಭಸಂಖ್ಯೆ:2

ಸಿಂಹ: ನಿಮ್ಮ ಪ್ರತಿಭೆಗೆ ಮೆಚ್ಚುಗೆ ಸಿಗುತ್ತದೆ. ಹೊಸ ಕೆಲಸದಲ್ಲಿ ಪ್ರಗತಿ. ಕಣ್ಣು, ತಲೆಗೆ ಸಂಬಂಧಪಟ್ಟ ರೋಗಕ್ಕೆ ಸೂಕ್ತ ಚಿಕಿತ್ಸೆ ಸಿಗಲಿದೆ.ಶುಭಸಂಖ್ಯೆ:4

ಕನ್ಯಾ: ಜವಾಬ್ದಾರಿಗಳು ಹೆಚ್ಚಾಗುತ್ತವೆ. ಕಿರುಚಿತ್ರ ನಟರ ಶ್ರಮಕ್ಕೆ ತಕ್ಕ ಫಲ ದೊರೆಯುವುದು. ಹಣಕಾಸಿನಲ್ಲಿ ಜಾಗರೂಕತೆ ಇರಲಿ. ಶುಭಸಂಖ್ಯೆ:4

ತುಲಾ: ಸಂಬಂಧಗಳಲ್ಲಿ ಎಚ್ಚರಿಕೆಯಿಂದ ವ್ಯವಹರಿಸಿ. ಕಚೇರಿಯ ಜವಾಬ್ದಾರಿ ನಿರ್ವಹಿಸಲು ಸಹೋ ದ್ಯೋಗಿಗಳ ಸಹಕಾರ ಸಿಗುತ್ತದೆ. ಶುಭಸಂಖ್ಯೆ:7

ವೃಶ್ಚಿಕ: ಮಹತ್ವದ ನಿರ್ಧಾರ ಕೈಗೊಳ್ಳಲು ಈ ದಿನ ಒಳ್ಳೆಯದು. ಒಳಾಂಗಣ ವಿನ್ಯಾಸಕಾರರಿಗೆ ಧನ ಲಾಭ. ಆರೋಗ್ಯದ ಕಡೆ ಎಚ್ಚರಿಕೆ. ಶುಭಸಂಖ್ಯೆ:1

ಧನಸ್ಸು: ಅನಿರೀಕ್ಷಿತ ಪ್ರಯಾಣದಿಂದ ಲಾಭ. ಹಿರಿಯ ಅಧಿಕಾರಿಗಳ ಬೆಂಬಲ. ಉದ್ಯೋಗಸ್ಥ ಸ್ತ್ರೀಯರ ಮನಸ್ಸು ಉತ್ಸಾಹದಲ್ಲಿರುತ್ತದೆ. ಶುಭಸಂಖ್ಯೆ:6

ಮಕರ: ಕೆಲಸದಲ್ಲಿ ಸ್ಥಿರತೆ ಕಾಯ್ದುಕೊಳ್ಳಿ. ಹೊಸ ವ್ಯಾಪಾರ ದಲ್ಲಿ ನಿಧಾನ ಪ್ರಗತಿ. ಆರ್ಥಿಕ ವ್ಯವಹಾರದಲ್ಲಿ ಹಿರಿಯರ ಸಲಹೆ ಉಪಯುಕ್ತ. ಶುಭಸಂಖ್ಯೆ:3

ಕುಂಭ: ಹೊಸ ಆಲೋಚನೆಗಳು ಇಂದು ಕಾರ್ಯಗತ ವಾಗಲಿವೆ. ಬದಲಾದ ಕೃಷಿಯಲ್ಲಿ ಯಶ ಸಿಗುವುದು. ಹಳೆಯ ಸ್ನೇಹಿತರ ಭೇಟಿ. ಶುಭಸಂಖ್ಯೆ: 4

ಮೀನ: ಭಾವನಾತ್ಮಕ ದಿನ. ಕುಟುಂಬದೊಂದಿಗೆ ಸಂತೋಷ ಕೂಟ. ಹೊಸ ವ್ಯಾಪಾರದಲ್ಲಿ ಲಾಭ. ವಿದೇಶದಿಂದ ನೆಂಟರ ಆಗಮನ. ಶುಭಸಂಖ್ಯೆ:2

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net