ನಿತ್ಯಭವಿಷ್ಯ; ಈ ರಾಶಿಯವರಿಗಿಂದು ಹಣಕಾಸಿನಲ್ಲಿ ಉತ್ತಮ ಪ್ರಗತಿ

ಭವಿಷ್ಯ
ಭವಿಷ್ಯ
Published on

ಮೇಷ: ಕೆಲಸದಲ್ಲಿ ಜಾಣ್ಮೆತೋರಿಸಿ ಯಶ ಪಡೆಯುವಿರಿ. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಹೊಸ ಯೋಜನೆ ಶುರು ಮಾಡುವ ಸಾಧ್ಯತೆ. ಶುಭಸಂಖ್ಯೆ: 2

ವೃಷಭ: ಬಂಧುಗಳಿಂದ ಆರ್ಥಿಕ ಸಹಾಯ. ದಾಂಪತ್ಯ ಜೀವನದಲ್ಲಿ ಸಂತೋಷ. ಕಟ್ಟಡ ನಿರ್ಮಾಣ ಸಾಮಗ್ರಿಗಳ ವ್ಯವಹಾರದಲ್ಲಿ ಲಾಭ. ಶುಭಸಂಖ್ಯೆ: 1

ಮಿಥುನ: ಐಟಿ -ಬಿಟಿ ಕ್ಷೇತ್ರದವರಿಗೆ ಉತ್ತಮ ದಿನ. ಹೊಸ ಸಂದರ್ಶನಗಳಲ್ಲಿ ನಿಮಗೆ ಯಶಸ್ಸು. ಹಣಕಾಸಿನ ಖರ್ಚಿನಲ್ಲಿ ನಿಯಂತ್ರಣವಿರಲಿ. ಶುಭಸಂಖ್ಯೆ: 7

ಕಟಕ: ನಿವೇಶನ ಖರೀದಿಯಲ್ಲಿ ಗೊಂದಲ. ಮಹತ್ವದ ನಿರ್ಧಾರ ಮುಂದೂಡಿದರೆ ಒಳಿತು. ಕುಟುಂಬದಲ್ಲಿ ಹಿರಿಯರ ಸಲಹೆ ಉಪಕಾರಿ. ಶುಭಸಂಖ್ಯೆ: 6

ಸಿಂಹ: ನಿಮ್ಮ ಕೆಲಸದ ಬಗ್ಗೆ ಅಧಿಕಾರಿಗಳ ಮೆಚ್ಚುಗೆ. ಬ್ಯಾಂಕ್ ಉದ್ಯೋಗಿಗಳಿಗೆ ಬಡ್ತಿ. ಸಾರ್ವಜನಿಕ ಜೀವನದಲ್ಲಿ ಗೌರವ ಹೆಚ್ಚಾಗುತ್ತದೆ. ಶುಭಸಂಖ್ಯೆ:3

ಕನ್ಯಾ: ಬಟ್ಟೆ ವ್ಯಾಪಾರಿಗಳಿಗೆ ಲಾಭದ ದಿನ. ಆರೋಗ್ಯದಲ್ಲಿ ಜೀರ್ಣಕ್ರಿಯೆಗೆ ಗಮನ ಕೊಡಿ. ಮಗಳ ಮದುವೆಗೆ ಸಂಬಂಧಿಸಿ ಶುಭ ಸುದ್ದಿ. ಶುಭಸಂಖ್ಯೆ:3

ತುಲಾ: ಕಲಾತ್ಮಕ ಕೆಲಸಗಳಲ್ಲಿ ಸಾಧನೆ. ಖಾದಿ-ಗ್ರಾಮೋದ್ಯೋಗ ಇಲಾಖೆಯ ಉದ್ಯೋಗಿಗಳಿಗೆ ವರ್ಗಾವಣೆ. ಅನಗತ್ಯ ಖರ್ಚು ತಪ್ಪಿಸಿ. ಶುಭಸಂಖ್ಯೆ: 9

ವೃಶ್ಚಿಕ: ಸ್ಪರ್ಧಾತ್ಮಕ ಕ್ರೀಡೆಗಳಲ್ಲಿ ಜಯಶಾಲಿ ಆಗುವಿರಿ. ಕಚೇರಿಯಲ್ಲಿ ಸಹನೆಯಿಂದ ವರ್ತಿಸಿ. ದೇಹದಲ್ಲಿ ರಕ್ತದ ಒತ್ತಡ ಹೆಚ್ಚಾಗುತ್ತದೆ. ಶುಭಸಂಖ್ಯೆ:4

ಧನಸ್ಸು: ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ವಿದ್ಯಾಭ್ಯಾಸಕ್ಕೆ ಅವಕಾಶ. ಉದ್ಯೋಗದಲ್ಲಿ ಹೊಸ ಪದವಿ ಸಿಗಲಿದೆ. ಹಣಕಾಸಿನಲ್ಲಿ ಉತ್ತಮ ಪ್ರಗತಿ. ಶುಭಸಂಖ್ಯೆ: 3

ಮಕರ: ಧಾನ್ಯ, ಆಹಾರ ಪದಾರ್ಥಗಳ ಮಾರಾಟದಲ್ಲಿ ಲಾಭ. ಒಳಾಂಗಣ ವಿನ್ಯಾಸಕಾರರಿಗೆ ಬೇಡಿಕೆ. ಮನೆ ಬದಲಾವಣೆಗೆ ಇದು ಸಕಾಲ. ಶುಭಸಂಖ್ಯೆ:1

ಕುಂಭ: ವಿದ್ಯುತ್ ಸಂಬಂಧಿತ ಯೋಜನೆಗಳಲ್ಲಿ ಟೆಂಡರ್ ಸಿಗಲಿದೆ. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಇಡುವುದು ಕ್ಷೇಮ. ಶುಭಸಂಖ್ಯೆ:7

ಮೀನ: ಧಾರ್ವಿುಕ ಕಾರ್ಯದಲ್ಲಿ ಆಸಕ್ತಿ. ಸಹೋದ್ಯೋಗಿಗಳ ಬೆಂಬಲದಿಂದ ಕೆಲಸ ಪೂರೈಸುವಿರಿ. ಕೇಂದ್ರ ಸರ್ಕಾರಿ ನೌಕರರಿಗೆ ಬಡ್ತಿ. ಶುಭಸಂಖ್ಯೆ:1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net