ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಹಣಕಾಸು ಪರಿಸ್ಥಿತಿ ಸುಧಾರಣೆ

ಜ್ಯೋತಿಷ್ಯ
ಜ್ಯೋತಿಷ್ಯ
Published on
ಮೇಷ: ಕಚೇರಿಯಲ್ಲಿ ವಿಶೇಷ ಗೌರವ ಪಡೆಯಲಿದ್ದೀರಿ. ಕೃಷಿಕರಿಗೆ ಧನಲಾಭ. ಸರ್ಕಾರಿ ನೌಕರರ ಸಂಘದ ಚುನಾವಣೆಯಲ್ಲಿ ಗೆಲುವು. ಶುಭಸಂಖ್ಯೆ: 9
ವೃಷಭ: ಹಣಕಾಸು ಪರಿಸ್ಥಿತಿ ಸುಧಾರಣೆ. ದುಡಿಮೆಯ ಕ್ಷೇತ್ರದಲ್ಲಿ ವಿಶ್ವಾಸ ವೃದ್ಧಿ. ಕಾನೂನು ವಿದ್ಯಾರ್ಥಿಗಳಿಗೆ ಪ್ರಯತ್ನಗಳಿಂದ ಯಶಸ್ಸು. ಶುಭಸಂಖ್ಯೆ: 5
ಮಿಥುನ: ಆಗುಹೋಗುಗಳಿಂದ ಸಮಾಧಾನ. ಆರ್ಥಿಕ ಯೋಜನೆಗೆ ಒತ್ತು ನೀಡಿ. ದೊಡ್ಡ ನಿರ್ಧಾರ ಕೈಗೊಳ್ಳುವಾಗ ವಿವೇಚನೆ ಇರಲಿ. ಶುಭಸಂಖ್ಯೆ: 9
ಕಟಕ: ಕಚೇರಿಯಲ್ಲಿ ನಿಮ್ಮ ಮಾತಿಗೆ ಹೆಚ್ಚಿನ ಬೆಲೆ ಸಿಗಲಿದೆ. ಗೆಳೆಯರಿಂದ ಬೆಂಬಲ. ಕುಟುಂಬದ ಭಿನ್ನಾಭಿ ಪ್ರಾಯ ಪರಿಹಾರವಾಗಲಿದೆ. ಶುಭಸಂಖ್ಯೆ: 9
ಸಿಂಹ; ನಂಬಿಕಸ್ಥರಿಂದ ಆಶಾಭಂಗ. ನಿಯಮಗಳ ಉಲ್ಲಂಘನೆಯಿಂದ ದಂಡ ಕಟ್ಟುವಿರಿ. ವಿದ್ಯಾರ್ಥಿಗಳ ಸಮಸ್ಯೆ ಪರಿಹಾರವಾಗಲಿದೆ. ಶುಭಸಂಖ್ಯೆ: 6
ಕನ್ಯಾ: ಕೌಟುಂಬಿಕ ಸಮಸ್ಯೆ ಪರಿಹಾರವಾಗಿ ನಿರಾಳ. ವಿವಾದಗಳನ್ನು ನಿರ್ಲಕ್ಷಿಸಿ. ಪ್ರತಿಸ್ಪರ್ಧಿಗಳ ಪ್ರಬಲ ವಿರೋಧದ ನಡುವೆ ಯಶಸ್ಸು.ಶುಭಸಂಖ್ಯೆ: 6
ತುಲಾ: ಪರಿಶ್ರಮಕ್ಕೆ ತಕ್ಕ ಫಲ. ಕುಟುಂಬದಲ್ಲಿ ನಿಮ್ಮ ಮಾತೇ ನಡೆಯಬೇಕೆಂಬ ಹಟ ಬಿಡಿ. ಇತರರ ವಿಚಾರಗಳಲ್ಲಿ ತಲೆ ತೂರಿಸಬೇಡಿ.ಶುಭಸಂಖ್ಯೆ:9
ವೃಶ್ಚಿಕ: ಮಾಡುವ ವ್ಯವಹಾರದ ಸಮಸ್ಯೆಗಳನ್ನು ನಿಮ್ಮ ಅನುಭವದ ಸಾಮರ್ಥ್ಯದಿಂದ ಪರಿಹರಿಸುವಿರಿ. ಅವಸರದ ನಿರ್ಣಯಬೇಡ. ಶುಭಸಂಖ್ಯೆ:1
ಧನಸ್ಸು: ಅನಿರೀಕ್ಷಿತ ಘಟನೆ ಕಿರಿಕಿರಿ ಮಾಡಬಹುದು. ಹಲವು ಮೂಲಗಳಿಂದ ಹಣ ಸಂಪಾದನೆ. ಅಜೀರ್ಣ ಸಂಬಂಧಿ ರೋಗ ನಿವಾರಣೆ.ಶುಭಸಂಖ್ಯೆ: 5
ಮಕರ: ಪಕ್ಕದ ರಾಜ್ಯಕ್ಕೆ ವ್ಯಾವಹಾರಿಕವಾಗಿ ಪ್ರಯಾಣ. ಆದಾಯ -ಖರ್ಚು ಸಮತೋಲನ ಅಗತ್ಯ. ರಾಜಕೀಯದವರಿಗೆ ಬದಲಾವಣೆ. ಶುಭಸಂಖ್ಯೆ: 8
ಕುಂಭ: ವೃತ್ತಿಜೀವನದಲ್ಲಿ ಕೀರ್ತಿ ಶನಿಯ ಪ್ರತಿಕೂಲ ಪ್ರಭಾವದಿಂದ ಹಣ ಉಳಿಯುವುದಿಲ್ಲ. ಅಧಿಕಾರ ಪ್ರಾಪ್ತಿ. ಹೊಣೆಗಾರಿಕೆ ಹೆಚ್ಚಲಿದೆ. ಶುಭಸಂಖ್ಯೆ: 4
ಮೀನ: ಸಾಮಾಜಿಕ ಕ್ಷೇತ್ರದಲ್ಲಿ ನಿಮಗೆ ಮುನ್ನಡೆ ಸಿಗಲಿದೆ. ಔಷಧ ವ್ಯಾಪಾರದಲ್ಲಿ ಲಾಭ. ಅನಿರೀಕ್ಷಿತ ಘಟನೆ ಎದುರಿಸಬೇಕಾಗಬಹುದು. ಶುಭಸಂಖ್ಯೆ: 1
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net