

ಮೇಷ: ಕ್ರೀಡಾಪಟುಗಳು ಶ್ರಮ ವಹಿಸಿದರೆ ಹೆಚ್ಚಿನ ಯಶಸ್ಸು ಲಭಿಸಲಿದೆ. ಮುಂದೂಡಿದ ವಿದೇಶ ಪ್ರಯಾಣ ಮತ್ತೆ ಕೈಗೊಳ್ಳುವ ಸಾಧ್ಯತೆ. ಶುಭಸಂಖ್ಯೆ:8
ವೃಷಭ: ಕಂಪ್ಯೂಟರ್, ಮೊಬೈಲ್ ವ್ಯಾಪಾರದಲ್ಲಿ ಲಾಭ. ಪ್ರಾಣಿ ಸಂಗ್ರಹಾಲಯ ಕೆಲಸಗಾರರಿಗೆ ವೇತನ ಹೆಚ್ಚಳ. ಅವಿವಾಹಿತರಿಗೆ ಶುಭ.ಶುಭಸಂಖ್ಯೆ: 7
ಮಿಥುನ: ಸಾಹಸಭರಿತವಾಗಿ ಮಾಡುವ ಕೆಲಸದಲ್ಲಿ ಯಶಸ್ವಿಯಾಗುವಿರಿ. ಇಂದು ನಿಮ್ಮ ಪ್ರತಿಭೆಯಿಂದ ಹಣ ಸಂಪಾದನೆ ಆಗಲಿದೆ. ಶುಭಸಂಖ್ಯೆ:3
ಕಟಕ: ರಾಜಕೀಯದವರಿಗೆ ಪದವಿಯಲ್ಲಿ ತಡೆ. ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಕರಿಗೆ ಲಾಭ. ವಿದೇಶದ ಬಂಧುಗಳ ಆಗಮನ. ಶುಭಸಂಖ್ಯೆ:2
ಸಿಂಹ: ಸಾರ್ವಜನಿಕ ಸೇವೆಯಲ್ಲಿ ಮನಃಪೂರ್ವಕವಾಗಿ ತೊಡಗಿಸಿಕೊಳ್ಳಿ. ನೌಕರಿಯಲ್ಲಿ ಬಡ್ತಿ, ವರ್ಗಾವಣೆ. ಸ್ವಉದ್ಯಮ ಯಶಸ್ಸಿನತ್ತ. ಶುಭಸಂಖ್ಯೆ:7
ಕನ್ಯಾ: ಯೋಜಿತ ಕೆಲಸಗಳನ್ನು ಸಕಾಲದಲ್ಲಿ ಪೂರ್ಣ ಮಾಡುವಿರಿ. ಪದವೀಧರರಿಗೆ ಉದ್ಯೋಗ ಪ್ರಾಪ್ತಿ. ಪೋಲೀಸರಿಗೆ ಕೆಲಸದ ಹೊರೆ. ಶುಭಸಂಖ್ಯೆ:7
ತುಲಾ: ತಂದೆಯ ಆರೋಗ್ಯದಲ್ಲಿ ಚೇತರಿಕೆ. ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುವಿರಿ. ಉಳಿತಾಯಕ್ಕೆ ಧನಹೂಡಿಕೆ ಒಳ್ಳೆಯದು. ಶುಭಸಂಖ್ಯೆ: 9
ವೃಶ್ಚಿಕ: ವೈಯಕ್ತಿಕ ಬದುಕಿನಲ್ಲಿ ಸಂತೃಪ್ತಿ ಸಿಗಲಿದೆ. ನಿಮ್ಮ ಪ್ರತಿಭೆಗೆ ಪುರಸ್ಕಾರ. ಅವಿವಾಹಿತ ಪುರುಷರಿಗೆ ಅನುರೂಪ ಸಂಗಾತಿ ಸಿಗುವಳು. ಶುಭಸಂಖ್ಯೆ:9
ಧನಸ್ಸು: ಹೊಸ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸುವಿರಿ. ಕೃಷಿಕರಿಗೆ ಹೊಸ ಬೆಳೆಯಿಂದ ಅನಿರೀಕ್ಷಿತ ಹೆಚ್ಚು ಆದಾಯ ಬರಲಿದೆ. ಶುಭಸಂಖ್ಯೆ: 4
ಮಕರ: ಉದ್ಯೋಗ ಕ್ಷೇತ್ರದಲ್ಲಿ ಒತ್ತಡ. ಶಿಲ್ಪಿಗಳಿಗೆ ನಿಗದಿತ ಸಮಯಕ್ಕೆ ಕಾರ್ಯ ಮುಗಿಸುವ ಒತ್ತಡ. ಚರ್ಮದ ವಸ್ತುಗಳಿಂದ ಹೆಚ್ಚುಲಾಭ. ಶುಭಸಂಖ್ಯೆ:9
ಕುಂಭ: ಹಿರಿಯ ಸಹೋದ್ಯೋಗಿಗಳಿಂದ ಸಕಾಲಿಕ ಸೂಕ್ತ ಮಾರ್ಗದರ್ಶನ ಸಿಗಲಿದೆ. ಹತ್ತಿಯ ಉತ್ಪನ್ನ ಮಾರಾಟಗಾರರಿಗೆ ಹೆಚ್ಚಿನ ಬೇಡಿಕೆ. ಶುಭಸಂಖ್ಯೆ: 1
ಮೀನ: ವಾಹನ ಮಾಲೀಕರಿಗೆ ಶುಭ ಸುದ್ದಿ. ಪಾಲುದಾರಿಕೆ ವ್ಯವಹಾರದ ವಿಸ್ತರಣೆ. ಸಾಮಾಜಿಕವಾಗಿ ಹೊಸ ಜವಾಬ್ದಾರಿಯಿಂದ ಗೌರವ. ಶುಭಸಂಖ್ಯೆ: 6