_1783880183399.webp?w=480&auto=format%2Ccompress&fit=max)
_1783880183399.webp?w=480&auto=format%2Ccompress&fit=max)
ಮೇಷ: ಪಿತ್ರಾರ್ಜಿತ ಆಸ್ತಿ ಗೊಂದಲ ನ್ಯಾಯಾಲಯದಲ್ಲಿ ಬಗೆಹರಿಯಲಿದೆ. ಪೀಠೋಪಕರಣಗಳ ಖರೀದಿ. ಚಿಕ್ಕ ಅಪಘಾತ ಸಾಧ್ಯತೆ. ಶುಭಸಂಖ್ಯೆ: 3
ವೃಷಭ: ದೃಢ ನಿರ್ಧಾರ ತೆಗೆದುಕೊಳ್ಳುವಲ್ಲಿ ಇದ್ದ ಗೊಂದಲ ಬಗೆಹರಿಯಲಿದೆ. ಗೃಹ ನಿರ್ವಣದ ಕೆಲಸಗಳು ಯಶಸ್ವಿಯಾಗುತ್ತವೆ. ಶುಭಸಂಖ್ಯೆ: 1
ಮಿಥುನ: ಅಲಂಕಾರಿಕ ವಸ್ತುಗಳ ಖರೀದಿಗೆ ನಿರ್ಧಾರ, ಟ್ರಾವೆಲ್ಸ್ ಮಾಲೀಕರಿಗೆ ಅಧಿಕ ಲಾಭ ಗಳಿಕೆ. ರೆಸ್ಟೋರೆಂಟ್ ಸ್ಥಾಪನೆಗೆ ನಿರ್ಧಾರ. ಶುಭಸಂಖ್ಯೆ:9
ಕಟಕ: ಪುಸ್ತಕ ಪ್ರಕಾಶಕರಿಗೆ ಹೂಡಿಕೆದಾರರು ಸಿಗಲಿದ್ದಾರೆ. ಬ್ಯಾಂಕ್ ಉದ್ಯೋಗಿಗಳಿಗೆ ನಿರೀಕ್ಷಿತ ಬಡ್ತಿ. ನೂತನ ಪಾಲುದಾರರ ಆಗಮನ. ಶುಭಸಂಖ್ಯೆ: 7
ಸಿಂಹ: ಸಮುದ್ರದ ಉತ್ಪನ್ನ ಮಾರಾಟದಲ್ಲಿ ಲಾಭ. ಕೃಷಿಕರು ಬದಲಾವಣೆಗೆ ಹೊಂದಿಕೊಳ್ಳಿ. ಸಹೋದರರಿಂದ ಆಸ್ತಿ ವಿಚಾರದಲ್ಲಿ ಕಿರಿಕಿರಿ. ಶುಭಸಂಖ್ಯೆ: 8
ಕನ್ಯಾ: ಅನಾರೋಗ್ಯಸಮಸ್ಯೆ ನಿವಾರಣೆ. ಮಂಗಳ ಕಾರ್ಯದಲ್ಲಿ ಭಾಗಿ. ಆಹಾರ ವ್ಯತ್ಯಾಸದಿಂದ ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ.ಶುಭಸಂಖ್ಯೆ:6
ತುಲಾ: ಆಸ್ತಿ ವಿಚಾರದ ಮಾತುಕತೆ ಫಲಪ್ರದವಾಗಲಿದೆ. ಅಧ್ಯಾಪಕ ವೃತ್ತಿಯವರಿಗೆ ಶುಭದಾಯಕ. ನೀರಿನ ವಿಚಾರದಲ್ಲಿ ಎಚ್ಚರಿಕೆ ಇರಲಿ. ಶುಭಸಂಖ್ಯೆ:2
ವೃಶ್ಚಿಕ: ಕೇಂದ್ರ ಸರ್ಕಾರಿ ಸೇವೆಯ ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆಯಲ್ಲಿ ಪ್ರಗತಿ. ಹೊಸ ವ್ಯವಹಾರದಿಂದ ಪ್ರಗತಿ. ಹಿತ ಶತ್ರು ಬಗ್ಗೆ ಎಚ್ಚರ. ಶುಭಸಂಖ್ಯೆ:9
ಧನಸ್ಸು: ಕಾಲಹರಣದಿಂದ ಅವಕಾಶ ವಂಚಿತರಾಗುವ ಸಾಧ್ಯತೆ. ನ್ಯಾಯಾಲಯದ ತೀರ್ಪು ನಿಮ್ಮ ಪರ. ಮಕ್ಕಳ ವಿಚಾರದಲ್ಲಿ ಎಚ್ಚರ. ಶುಭಸಂಖ್ಯೆ:2
ಮಕರ: ಲೇವಾದೇವಿ ವ್ಯವಹಾರಸ್ಥರಿಗೆ ಲಾಭ. ವಿದೇಶದಲ್ಲಿ ರುವ ಮಕ್ಕಳಿಂದ ಸುವಾರ್ತೆ. ಚಿಕ್ಕ ಅಂಗಡಿಯವರಿಗೆ ಲಾಭದಾಯಕ ದಿನ.ಶುಭಸಂಖ್ಯೆ: 5
ಕುಂಭ: ಅಧಿಕಾರದ ಹಾದಿಯಲ್ಲಿದ್ದ ನಿರ್ಬಂಧ ತೆರವು. ದುರ್ಬಲರಿಗೆ ಉಪಕಾರ ಮಾಡುವಿರಿ. ಕಲಾವಿದರು ಅವಕಾಶ ವಂಚಿತರಾಗುವರು.ಶುಭಸಂಖ್ಯೆ:1
ಮೀನ: ಸ್ನೇಹಿತರಿಂದ ವ್ಯಾಪಾರಕ್ಕೆ ಸಹಕಾರ. ಉದರ ಸಂಬಂಧಿ ತೊಂದರೆಯಿಂದ ಚೇತರಿಕೆ. ದಾಂಪತ್ಯದಲ್ಲಿ ಅನಿರೀಕ್ಷಿತ ಬದಲಾವಣೆ. ಶುಭಸಂಖ್ಯೆ:8