ನಿತ್ಯಭವಿಷ್ಯ; ಈ ರಾಶಿಯವರಿಗಿಂದು ದಾಂಪತ್ಯದಲ್ಲಿದ್ದ ಮನಸ್ತಾಪ ದೂರವಾಗಲಿದೆ

ಜ್ಯೋತಿಷ್ಯ
ಜ್ಯೋತಿಷ್ಯ
Published on

ಮೇಷ: ಹೂವು ಹಣ್ಣು ಮಾರಾಟಗಾರರಿಗೆ ನಷ್ಟ ಸಾಧ್ಯತೆ. ಕುಶಲಕರ್ವಿುಗಳಿಗೆ ಬೇಡಿಕೆ. ಪೀಠೋಪಕರಣಗಳ ಖರೀದಿಯಲ್ಲಿ ಲಾಭ. ಶುಭಸಂಖ್ಯೆ:5

ವೃಷಭ: ಟಿವಿ ಮಾಧ್ಯಮದ ನೌಕರರಿಗೆ ಬದಲಾವಣೆ ಸಾಧ್ಯತೆ. ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದೇಶ ಪ್ರಯಾಣ. ಶಿಕ್ಷಕ ವೃತ್ತಿಗೆ ಆಯ್ಕೆ. ಶುಭಸಂಖ್ಯೆ:7

ಮಿಥುನ: ನೂತನ ಗೃಹ ನಿರ್ವಣಕ್ಕೆ ಪ್ರಾರಂಭ. ದಂತ ವೈದ್ಯರಿಗೆ ಬೇಡಿಕೆ ಹೆಚ್ಚಲಿದೆ. ಉದ್ಯಮಸ್ಥ ಮಹಿಳೆಯರಿಗೆ ಶುಭದಾಯಕ ದಿನ. ಶುಭಸಂಖ್ಯೆ: 8

ಕಟಕ: ಡೇರಿ ಉತ್ಪನ್ನ ವ್ಯಾಪಾರಕ್ಕೆ ಚಾಲನೆ. ಧಾರ್ವಿುಕ ಕ್ಷೇತ್ರಗಳ ನೌಕರರಿಗೆ ಒತ್ತಡ. ವೀಸಾ ಸಮಸ್ಯೆ ಪರಿಹಾರವಾಗಿ ಸಮಾಧಾನ. ಶುಭಸಂಖ್ಯೆ:9

ಸಿಂಹ: ಪದವಿ ಪ್ರಾಪ್ತಿಯಲ್ಲಿದ್ದ ನಿರ್ಬಂಧ ತೆರವು. ಸಂತಾನ ಅಪೇಕ್ಷಿತರಿಗೆ ಶುಭ ಸುದ್ದಿ. ರೆಸ್ಟೋರೆಂಟ್ ವ್ಯಾಪಾರದಲ್ಲಿ ಲಾಭ ಹೆಚ್ಚಳ. ಶುಭಸಂಖ್ಯೆ:4

ಕನ್ಯಾ: ಪ್ರತಿಭಾವಂತರಿಗೆ ಸಂಘ ಸಂಸ್ಥೆಗಳಿಂದ ಸನ್ಮಾನ. ಹೈನೋತ್ಪನ್ನ ಸಗಟು ಮಾರಾಟದಲ್ಲಿ ಲಾಭ. ಆತ್ಮೀಯರೊಂದಿಗೆ ಯಾತ್ರೆ. ಶುಭಸಂಖ್ಯೆ:9

ತುಲಾ: ಕಚೇರಿ ಬದಲಾವಣೆಗೆ ಸೂಕ್ತ ಸಮಯ. ಎಲೆಕ್ಟ್ರಿಕ್ ಉಪಕರಣ ತಯಾರಕರಿಗೆ ಅಭಿವೃದ್ಧಿ. ದಿನದ ಅಂತ್ಯದಲ್ಲಿ ಶುಭ ಸಮಾಚಾರ. ಶುಭಸಂಖ್ಯೆ:2

ವೃಶ್ಚಿಕ: ದಿನಸಿ ಅಂಗಡಿ ಮಾಲೀಕರಿಗೆ ಅಭಿವೃದ್ಧಿ. ಹೂ- ಹಣ್ಣು -ತರಕಾರಿ ಮಾರಾಟದಲ್ಲಿ ಸ್ವಲ್ಪಮಟ್ಟಿನ ಪ್ರಗತಿ. ಬೇಸಾಯಗಾರರಿಗೆ ಲಾಭ. ಶುಭಸಂಖ್ಯೆ:4

ಧನಸ್ಸು: ಶತ್ರುಗಳ ವಿಚಾರದಲ್ಲಿ ಎಚ್ಚರಿಕೆ ವಹಿಸಿ. ಅಪರಿಚರಿತರಿಂದ ಆರ್ಥಿಕ ಸಹಾಯ. ಹೃದಯ ಸಂಬಂಧಿ ಅನಾರೋಗ್ಯದಲ್ಲಿ ಚೇತರಿಕೆ. ಶುಭಸಂಖ್ಯೆ:3

ಮಕರ: ಧಾರ್ವಿುಕ ಸಂಸ್ಥೆಯ ಪ್ರಮುಖರಿಗೆ ಶುಭದಿನ. ದಾಂಪತ್ಯದಲ್ಲಿದ್ದ ಮನಸ್ತಾಪ ದೂರವಾಗಲಿದೆ. ಬಹು ದಿನಗಳ ಕನಸು ನನಸು. ಶುಭಸಂಖ್ಯೆ:3

ಕುಂಭ: ವಿವಾಹದ ವಿಷಯದಲ್ಲಿ ಎಚ್ಚರಿಕೆಯ ಹೆಜ್ಜೆ ಇಡಿ. ತೀರ್ಥಯಾತ್ರೆಯ ಬಹು ದಿನಗಳ ಆಸೆ ಈಡೇರಲಿದೆ. ಅಧಿಕಾರಿಗಳಿಗೆ ಒತ್ತಡ. ಶುಭಸಂಖ್ಯೆ:5

ಮೀನ: ಭಾಷಣಕಾರರಿಗೆ ವಿದೇಶ ಪ್ರಯಾಣ ಯೋಗ. ತೆಂಗು ಮತ್ತು ಭತ್ತ ಬೆಳೆಗಾರರಿಗೆ ಆರ್ಥಿಕ ಲಾಭ. ವಿದೇಶದಿಂದ ಮಕ್ಕಳ ಆಗಮನ. ಶುಭಸಂಖ್ಯೆ:7

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net