_1775844878624.webp?w=480&auto=format%2Ccompress&fit=max)
_1775844878624.webp?w=480&auto=format%2Ccompress&fit=max)
ಮೇಷ: ನಿರುದ್ಯೋಗಿಗಳಿಗೆ ಉದ್ಯೋಗದ ಆಶಾಕಿರಣ. ದೂರ ಪ್ರಯಾಣ ಫಲ ನೀಡಲಿದೆ. ತೈಲ ಮಾರಾಟದಲ್ಲಿ ಚೇತರಿಕೆ. ಶುಭಸಂಖ್ಯೆ: 9
ವೃಷಭ: ಆಸ್ತಿ ವಿಭಾಗಕ್ಕೆ ಅನುಕೂಲ ಒದಗಿ ಬರುತ್ತದೆ. ಪ್ರತಿಭಾ ಶಾಲಿಗಳಿಗೆ ಉತ್ತಮ ಹೆಸರು, ಕೀರ್ತಿ. ಪಾಲುದಾರಿಕೆಯಲ್ಲಿ ಲಾಭ. ಶುಭಸಂಖ್ಯೆ: 1
ಮಿಥುನ: ಮಹಿಳೆಯರಿಗೆ ಅನಿರೀಕ್ಷಿತ ಧನಾಗಮನ. ಉದ್ಯೋಗದಲ್ಲಿ ಯಶಸ್ಸು ಸಿಗುತ್ತದೆ. ಸಾಲ ತೀರಿಸಲು ಸ್ನೇಹಿತರಿಂದ ಸಹಾಯ. ಶುಭಸಂಖ್ಯೆ:5
ಕಟಕ: ಸೇವಾ ವೃತ್ತಿಯಲ್ಲಿ ಇರುವವರಿಗೆ ಶುಭದಾಯಕ ದಿನ. ಮಂಗಳ ಕಾರ್ಯಕ್ಕೆ ಇದ್ದ ಅಡೆತಡೆ ನಿವಾರಣೆಯಾಗಿ ಸಮಾಧಾನ. ಶುಭಸಂಖ್ಯೆ: 2
ಸಿಂಹ: ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯರು ಚೇತರಿಸಿಕೊಳ್ಳಲಿದ್ದಾರೆ. ಪಾಲುದಾರಿಕೆ ವ್ಯವಹಾರ ದಲ್ಲಿ ಇದ್ದ ಗೊಂದಲ ನಿವಾರಣೆ. ಶುಭಸಂಖ್ಯೆ:1
ಕನ್ಯಾ: ನಿಮ್ಮ ಸಮಯ ಸ್ಪೂರ್ತಿಯಿಂದ ಆಪತ್ತಿನಿಂದ ಪಾರು. ದಾಂಪತ್ಯದಲ್ಲಿ ಅನಿರೀಕ್ಷಿತ ಬೆಳವಣಿಗೆ. ನಿರೀಕ್ಷಿತ ಉದ್ಯೋಗ ಸಿಗಲಿದೆ. ಶುಭಸಂಖ್ಯೆ:3
ತುಲಾ: ಸಾಲಬಾಧೆಯಿಂದ ಮುಕ್ತಿ. ಹಿತಶತ್ರುಗಳಿಂದ ಅವಕಾಶಕ್ಕೆ ತಡೆ. ಮೇಲಧಿಕಾರಿಗಳ ಪ್ರಶಂಸೆ. ಪ್ರೀತಿ ಪ್ರೇಮ ಭಾವನೆಗಳಿಗೆ ಬೆಂಬಲ. ಶುಭಸಂಖ್ಯೆ: 8
ವೃಶ್ಚಿಕ: ಸ್ವಂತ ವ್ಯವಹಾರಕ್ಕೆ ಸೂಕ್ತ ಸಮಯ. ಅನಿರೀಕ್ಷಿತವಾಗಿ ಬಂದ ಹಣದಿಂದ ಸಾಲ ತೀರಿಸುವಿರಿ. ಸ್ಥಿರಾಸ್ತಿ ಖರೀದಿಗೆ ಅನುಕೂಲ. ಶುಭಸಂಖ್ಯೆ: 4
ಧನಸ್ಸು: ಉದ್ಯಮಿಗಳಿಗೆ ಆರ್ಥಿಕ ಚೇತರಿಕೆ. ನೆರೆಯವ ರೊಂದಿಗೆ ಉತ್ತಮ ಬಾಂಧವ್ಯ. ನಿರ್ಧಾರ ಕೈಗೊಳ್ಳಲು ಹಿರಿಯರ ಮಾರ್ಗದರ್ಶನ. ಶುಭಸಂಖ್ಯೆ: 7
ಮಕರ: ಲೆಕ್ಕಪರಿಶೋಧಕರಿಗೆ ಅನುಕೂಲ. ಜ್ಯುವೆಲ್ಲರಿ ವ್ಯವಹಾರದ ಲಾಭದಲ್ಲಿ ಚೇತರಿಕೆ. ಮಾತಿನಿಂದ ಕಾರ್ಯಸಾಧನೆಯಾಗುವುದು.ಶುಭಸಂಖ್ಯೆ:7
ಕುಂಭ: ದುಡುಕು ಸ್ವಭಾವ ನಿಯಂತ್ರಿಸಿದರೆ ಗೆಲುವು. ಬಹುಕಾಲದ ಅನಾರೋಗ್ಯಕ್ಕೆ ಸೂಕ್ತ ಚಿಕಿತ್ಸೆ. ಉನ್ನತ ವಿದ್ಯಾಭ್ಯಾಸದ ಕನಸು ನನಸು. ಶುಭಸಂಖ್ಯೆ: 6
ಮೀನ: ಸ್ವಂತ ಉದ್ಯಮದ ಆರ್ಥಿಕ ಮುಗ್ಗಟ್ಟು ಪರಿಹಾರ. ಕೃಷಿಕರ ಫಸಲಿಗೆ ಸೂಕ್ತ ಬೆಲೆ ಲಭ್ಯ. ಅನಗತ್ಯ ವಿಷಯಗಳಲ್ಲಿ ತಲೆ ತೂರಿಸಬೇಡಿ. ಶುಭಸಂಖ್ಯೆ: 4