ನಿತ್ಯಭವಿಷ್ಯ; ಈ ರಾಶಿಯವರಿಗಿಂದು ಹೊಸ ವ್ಯಾಪಾರ ಪ್ರಾರಂಭಕ್ಕೆ, ನಿವೇಶನ ಖರೀದಿಗೆ ಶುಭದಿನ

ಜ್ಯೋತಿಷ್ಯ
ಜ್ಯೋತಿಷ್ಯ
Published on

ಮೇಷ: ಸಾಲಗಾರರ ಸಮಸ್ಯೆಗೆ ಪರಿಹಾರ ದೊರೆಯಲಿದೆ. ಕೈಗೊಂಡ ಕೆಲಸಗಳಲ್ಲಿ ಯಶಸ್ಸು. ಮನೆ ನವೀಕರಣಕ್ಕೆ ಹೆಚ್ಚು ಖರ್ಚು. ಶುಭಸಂಖ್ಯೆ: 9

ವೃಷಭ: ಪುಸ್ತಕ ವ್ಯಾಪಾರದಲ್ಲಿ ಅನಿರೀಕ್ಷಿತ ಲಾಭ ಬರಲಿದೆ. ವಾಹನ ಚಾಲನೆಯಲ್ಲಿ ಎಚ್ಚರಿಕೆ ಇರಲಿ. ಅಮೂಲ್ಯ ವಸ್ತುಗಳ ಖರೀದಿ. ಶುಭಸಂಖ್ಯೆ: 1

ಮಿಥುನ: ಹೊಸ ವ್ಯಾಪಾರ ಪ್ರಾರಂಭಕ್ಕೆ, ನಿವೇಶನ ಖರೀದಿಗೆ ಶುಭದಿನ. ಉನ್ನತ ಶಿಕ್ಷಣಕ್ಕಾಗಿ ವಿದ್ಯಾರ್ಥಿನಿಯರಿಗೆ ವಿದೇಶ ಪ್ರಯಾಣ. ಶುಭಸಂಖ್ಯೆ:6

ಕಟಕ: ತಂದೆಯ ಆರೋಗ್ಯದಲ್ಲಿ ಸುಧಾರಣೆ ಆಗಲಿದೆ. ಗೃಹ ನಿರ್ಮಾಣ ಕೆಲಸದಲ್ಲಿ ಲಾಭ. ಸಣ್ಣ ಕೃಷಿಕರಿಗೆ ಧನಸಹಾಯ ಸಿಗಲಿದೆ. ಶುಭಸಂಖ್ಯೆ:1

ಸಿಂಹ: ಚಿನ್ನ- ಬೆಳ್ಳಿ ಅಂಗಡಿಯವರಿಗೆ ಲಾಭ. ಕಲಾವಿದರಿಗೆ ಹಣದ ರೂಪದಲ್ಲಿ ಪುರಸ್ಕಾರ. ಪಾಲುದಾರರ ಮನಸ್ತಾಪ ನಿವಾರಣೆ. ಶುಭಸಂಖ್ಯೆ:6

ಕನ್ಯಾ: ಉನ್ನತ ವಿದ್ಯಾಭ್ಯಾಸದ ಕನಸು ನನಸು. ನಂಬಿದವರಿಂದಲೇ ಮೋಸವಾಗುವ ಸಾಧ್ಯತೆ. ವಾಹನ ಬದಲಾವಣೆಗೆ ಸುಸಮಯ. ಶುಭಸಂಖ್ಯೆ: 9

ತುಲಾ: ಕಚೇರಿಯಲ್ಲಿ ಕ್ಲಿಷ್ಟಕರ ಪರಿಸ್ಥಿತಿಯನ್ನು ನಿಭಾಯಿಸುವಿರಿ. ಹೈನೋತ್ಪನ್ನಗಳ ಮಾರಾಟದಲ್ಲಿ ಲಾಭ. ಕೃಷಿ ಬದಲಾವಣೆಗೆ ಸಕಾಲ. ಶುಭಸಂಖ್ಯೆ: 8

ವೃಶ್ಚಿಕ: ಹವ್ಯಾಸಿ ಬರಹಗಾರರಿಗೆ ಬೇಡಿಕೆ ಜಾಸ್ತಿಯಾಗಲಿದೆ. ಗ್ರಂಧಿಗೆ ಅಂಗಡಿ ಮಾಲೀಕರಿಗೆ ಲಾಭ. ದಿನಸಿ ಅಂಗಡಿ ಸ್ಥಾಪನೆಗೆ ನಿರ್ಧಾರ. ಶುಭಸಂಖ್ಯೆ: 7

ಧನಸ್ಸು: ಆಸ್ತಿ ವಿಭಾಗಕ್ಕೆ ಸಹೋದರರ ಸಹಮತ. ಐಟಿ ಉದ್ಯೋಗದಲ್ಲಿ ಅತಂತ್ರ ಸ್ಥಿತಿ. ಲೆಕ್ಕ ಪರಿಶೋಧಕ ವೃತ್ತಿಯಲ್ಲಿ ಹಣ ಗಳಿಸುವಿರಿ. ಶುಭಸಂಖ್ಯೆ:8

ಮಕರ: ಸರ್ಕಾರಿ ಕ್ಷೇತ್ರದಲ್ಲಿ ಉದ್ಯೋಗ ಪ್ರಾಪ್ತಿ. ಶತ್ರುಗಳ ವಿರೋಧದ ನಡುವೆಯೂ ಕಾರ್ಯಸಾಧನೆ ಆಗಲಿದೆ. ವೀಸಾ ಸಮಸ್ಯೆ ಇತ್ಯರ್ಥ. ಶುಭಸಂಖ್ಯೆ: 4

ಕುಂಭ: ಮಕ್ಕಳು ಅನಾರೋಗ್ಯದಿಂದ ಚೇತರಿಸಿಕೊಳ್ಳಲಿದ್ದಾರೆ. ಅನಿರೀಕ್ಷಿತ ಘಟನೆಯಿಂದ ಲಾಭ. ವಿದೇಶಿ ವಿನಿಮಯದಿಂದ ಆದಾಯ. ಶುಭಸಂಖ್ಯೆ: 8

ಮೀನ: ಸಗಟು ವ್ಯಾಪಾರದಲ್ಲಿ ಲಾಭ ಬೃಹತ್ ವಾಹನಗಳ ಮಾಲೀಕರಿಗೆ ಪ್ರಗತಿ. ಸಾಂಬಾರ ಪದಾರ್ಥಗಳ ರೈತರಿಗೆ ಹಣದ ಅನುಕೂಲ. ಶುಭಸಂಖ್ಯೆ: 3

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net