_1780770328998.webp?w=480&auto=format%2Ccompress&fit=max)
_1780770328998.webp?w=480&auto=format%2Ccompress&fit=max)
ಮೇಷ: ಧಾರ್ವಿುಕ ಕಾರ್ಯಕ್ರಮದಲ್ಲಿ ಭಾಗವಹಿಸುವುದರಿಂದ ಮನಃಶಾಂತಿ ಸಿಗಲಿದೆ. ಕುಟುಂಬದಲ್ಲಿ ಅನಿರೀಕ್ಷಿತ ಘಟನೆ ನಡೆಯಲಿದೆ.ಶುಭಸಂಖ್ಯೆ:9
ವೃಷಭ: ಕೋರ್ಟ್ ಕೇಸ್ ವಿಳಂಬವಾಗಲಿದೆ. ನೂತನ ಗೃಹ ಖರೀದಿಗೆ ನಿರ್ಧಾರ. ಸಹೋದರರಿಂದ ಆರ್ಥಿಕ ಸಹಾಯ ದೊರೆಯುವುದು.ಶುಭಸಂಖ್ಯೆ:6
ಮಿಥುನ: ರೆಸ್ಟೋರೆಂಟ್ ಮಾಲೀಕರಿಗೆ ಇದ್ದ ಕೆಲಸಗಾರರ ಸಮಸ್ಯೆ ನಿವಾರಣೆ. ಎಲೆಕ್ಟ್ರಿಕ್ ವೃತ್ತಿಯ ತಜ್ಞರಿಗೆ ಬೇಡಿಕೆ. ಆಧ್ಯಾತ್ಮಿಕದತ್ತ ಒಲವು.ಶುಭಸಂಖ್ಯೆ: 9
ಕಟಕ: ಧಾರಾವಾಹಿ ನಿರ್ದೇಶಕರಿಗೆ ಅನುಕೂಲಕರ ದಿವಸ. ಹೊಸ ವ್ಯವಹಾರದಲ್ಲಿ ಅಲ್ಪ ಆದಾಯ. ರತ್ನಗಳ ವ್ಯಾಪಾರಿಗಳಿಗೆ ಲಾಭ. ಶುಭಸಂಖ್ಯೆ: 9
ಸಿಂಹ: ಸಂತಾನ ಅಪೇಕ್ಷಿತರಿಗೆ ಶುಭ ಸುದ್ದಿ. ವಿದೇಶ ಪ್ರವಾಸ ವಿಳಂಬವಾಗುವ ಸಾಧ್ಯತೆ ಹೆಚ್ಚು. ಮಕ್ಕಳ ಪ್ರಗತಿಯಿಂದ ಹೆಮ್ಮೆಪಡುವಿರಿ. ಶುಭಸಂಖ್ಯೆ:5
ಕನ್ಯಾ; ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಲಾಭಗಳಿಸುವಿರಿ. ಸಿದ್ದ ಉಡುಪು ಮಾರಾಟದಲ್ಲಿ ಲಾಭ. ಅಡಿಕೆ, ಕಾಳುಮೆಣಸು ಕೃಷಿಕರಿಗೆ ಲಾಭ.ಶುಭಸಂಖ್ಯೆ: 6
ತುಲಾ: ಹೊಸ ಸ್ವಂತ ಉದ್ಯೋಗದಲ್ಲಿ ಪ್ರಗತಿ. ಕೇಂದ್ರ ಸರ್ಕಾರಿ ನೌಕರರಿಗೆ ವೇತನ ಹೆಚ್ಚಲಿದೆ. ರಕ್ಷಣಾ ಇಲಾಖೆಯಲ್ಲಿ ಉದ್ಯೋಗ ಪ್ರಾಪ್ತಿ. ಶುಭಸಂಖ್ಯೆ:7
ವೃಶ್ಚಿಕ: ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಸಾಧನೆ. ಕುಟುಂಬದ ಮನಸ್ತಾಪ ನಿವಾರಣೆ. ಕೊಟ್ಟ ಕೆಲಸ ಯಶಸ್ವಿಯಾಗಿ ಮುಗಿಸುವಿರಿ. ಶುಭಸಂಖ್ಯೆ:2
ಧನಸ್ಸು: ಹೊಸ ಬಂಡವಾಳ ನಿಮ್ಮ ಉದ್ಯಮ ಸೇರಲಿದೆ. ಜಲ ಸಂಪನ್ಮೂಲ ವ್ಯವಹಾರದಲ್ಲಿ ಲಾಭ. ಸಗಟು ವ್ಯಾಪಾರದಲ್ಲಿ ಅಭಿವೃದ್ಧಿ. ಶುಭಸಂಖ್ಯೆ: 1
ಮಕರ: ಸ್ಟಾರ್ಟಪ್ ಉದ್ಯಮ ವಿಚಾರದಲ್ಲಿ ಪ್ರಗತಿ. ಪ್ರಭಾವಿಗಳ ಶಿಫಾರಸ್ಯನಿಂದ ಪದವಿ ಪ್ರಾಪ್ತಿ. ರೈತರಿಗೆ ಬಿತ್ತನೆಯ ಗೊಂದಲ ನಿವಾರಣೆ. ಶುಭಸಂಖ್ಯೆ: 6
ಕುಂಭ: ದುಡುಕುತನದಿಂದಾಗಿ ಅವಕಾಶವಂಚಿತರಾಗುವ ಸಾಧ್ಯತೆ. ರೇಷ್ಮೆ ವ್ಯಾಪಾರದಲ್ಲಿ ಲಾಭ. ವಿದ್ಯಾಭ್ಯಾಸಕ್ಕೆ ವಿದೇಶ ಪ್ರಯಾಣ. ಶುಭಸಂಖ್ಯೆ: 3
ಮೀನ: ಕ್ರೀಡಾಪಟುಗಳಿಗೆ ಶುಭ. ಸಹಕಾರಿ ಸಂಘದಲ್ಲಿ ನಿರೀಕ್ಷಿತ ಯಶಸ್ಸು. ಅಧ್ಯಾತ್ಮ ಗುರುಗಳ ಭೇಟಿ. ಧಾನ್ಯ ಮಾರಾಟದಲ್ಲಿ ಲಾಭ. ಶುಭಸಂಖ್ಯೆ: 8