ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ದಾಂಪತ್ಯದಲ್ಲಿ ಅನ್ಯೋನ್ಯತೆ

ಜ್ಯೋತಿಷ್ಯ
ಜ್ಯೋತಿಷ್ಯ
Published on
ಮೇಷ: ಕುಲಕಸುಬಿನಲ್ಲಿ ಕೀರ್ತಿ ಲಭಿಸಲಿದೆ. ಸಾಹಿತಿಗಳಿಗೆ ಗೌರವ, ಪ್ರಶಸ್ತಿ ಲಭ್ಯ. ಪ್ರಕರಣದ ಸಂಬಂಧ ನ್ಯಾಯಾಲಯಕ್ಕೆ ಅಲೆದಾಟ. ಶುಭಸಂಖ್ಯೆ: 8
ವೃಷಭ: ಯಕ್ಷಗಾನ ಕಲಾವಿದರಿಗೆ ವಿದೇಶ ಪ್ರಯಾಣ ಯೋಗ. ಆದಾಯ ತೆರಿಗೆ ಅಧಿಕಾರಿಗಳಿಗೆ ವರ್ಗ. ಬಾಕಿ ಇದ್ದ ಹಣ ಕೈ ಸೇರುತ್ತದೆ. ಶುಭಸಂಖ್ಯೆ: 4
ಮಿಥುನ: ಕಳೆದಿದ್ದ ವಸ್ತು ಮರಳಿ ಬರಲಿದೆ. ವೈದ್ಯಕೀಯ ವಸ್ತುಗಳ ಮಾರಾಟಗಾರರಿಗೆ ಲಾಭ. ಪತ್ರಕರ್ತರಿಗೆ ಸರ್ಕಾರದಿಂದ ವಿಶೇಷ ನೆರವು. ಶುಭಸಂಖ್ಯೆ: 5
ಕಟಕ: ಲೆಕ್ಕಪತ್ರ ಪರಿಶೀಲನೆ ಮಾಡುವವರಿಗೆ ಶುಭದಾಯಕ ದಿನ. ಷೇರು ವ್ಯವಹಾರದಲ್ಲಿ ಲಾಭ. ಪ್ರಯತ್ನಿಸಿದ ಕಾರ್ಯದಲ್ಲಿ ಯಶಸ್ಸು. ಶುಭಸಂಖ್ಯೆ:9
ಸಿಂಹ: ಕಿರುಚಿತ್ರ ನಿರ್ದೇಶಕರಿಗೆ ಅವಕಾಶಗಳು ದೊರೆ ಯುತ್ತವೆ. ಭೂಮಿಯ ವ್ಯವಹಾರದಲ್ಲಿ ಗೊಂದಲ. ಉದರ ಬಾಧೆ ಕಾಡಬಹುದು. ಶುಭಸಂಖ್ಯೆ:8
ಕನ್ಯಾ: ಅನಿರೀಕ್ಷಿತ ಐಶ್ವರ್ಯ ಪ್ರಾಪ್ತಿ. ಕೇಂದ್ರ ಸರ್ಕಾರದ ನೌಕರಿಯಲ್ಲಿ ಬಡ್ತಿ. ಲೇವಾದೇವಿ ವ್ಯವಹಾರದಲ್ಲಿ ಬೇರೆಯವರಿಂದ ಲಾಭ. ಶುಭಸಂಖ್ಯೆ: 3
ತುಲಾ: ಆತ್ಮೀಯರೊಬ್ಬರಿಂದ ಧನ ಸಹಾಯ. ಮಹಿಳೆಯರಿಗೆ ಉದ್ಯೋಗ ಲಾಭ. ಒಡಹುಟ್ಟಿದವರಿಂದ ಆಸ್ತಿ ವಿಚಾರದಲ್ಲಿ ತೊಂದರೆ. ಶುಭಸಂಖ್ಯೆ:2
ವೃಷ್ಚಿಕ: ಮನೆಯಲ್ಲಿ ಶುಭಕಾರ್ಯದ ಸಂಭ್ರಮ. ಅಧಿಕಾರ ಪ್ರಾಪ್ತಿಗೆ ಶತ್ರುಗಳಿಂದ ತಡೆ. ಎಲೆಕ್ಟ್ರಾನಿಕ್ಸ್ ಸಂವಹನ ಕ್ಷೇತ್ರದವರಿಗೆ ಬೇಡಿಕೆ. ಶುಭಸಂಖ್ಯೆ:3
ಧನಸ್ಸು: ಪದವೀಧರರಿಗೆ ಕೃಷಿಯ ಕಡೆ ಆಸಕ್ತಿ. ಕೈಗೊಂಡ ಕಾರ್ಯಗಳಲ್ಲಿ ಯಶ ದೊರೆಯುವುದು. ವಾಹನ ಮಾರಾಟಗಾರರಿಗೆ ಧನಲಾಭ. ಶುಭಸಂಖ್ಯೆ: 1
ಮಕರ: ಹಳೆಯ ಸಾಲ ತೀರಿಸಲು ಸ್ನೇಹಿತನಿಂದ ಸಹಾಯ. ಸಮಾಜದಲ್ಲಿ ಗೌರವ ಸ್ಥಾನ. ದೃಢ ನಿರ್ಧಾರ ತೆಗೆದುಕೊಳ್ಳುವಲ್ಲಿ ಗೊಂದಲ.ಶುಭಸಂಖ್ಯೆ:7
ಕುಂಭ: ಸ್ವಂತ ಕಚೇರಿಯಲ್ಲಿ ಭಿನ್ನಾಭಿಪ್ರಾಯ. ದಾಂಪತ್ಯದಲ್ಲಿ ಅನ್ಯೋನ್ಯತೆ. ಹೊಸ ನಿವೇಶನ ಖರೀದಿಗೆ ಅಡೆತಡೆ. ಜೇನು ಮಾರಾಟದಲ್ಲಿ ಅಧಿಕ ಲಾಭ. ಶುಭಸಂಖ್ಯೆ: 2
ಮೀನ: ಹೊಸ ಜವಾಬ್ದಾರಿಗಳು ಹೆಗಲೇರುತ್ತವೆ. ಗಣ್ಯವ್ಯಕ್ತಿಗಳ ಭೇಟಿಯಾಗಲಿದೆ. ಆಧ್ಯಾತ್ಮಿಕ ಗ್ರಂಥದ ಓದಿನಲ್ಲಿ ಹೆಚ್ಚು ಆಸಕ್ತಿ ತಾಳುವಿರಿ. ಶುಭಸಂಖ್ಯೆ:4
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net