ನಿತ್ಯ ಭವಿಷ್ಯ: ಈ ರಾಶಿಯವರಿಂದು ದಾಂಪತ್ಯದಲ್ಲಿ ತಾಳ್ಮೆಯಿಂದ ವರ್ತಿಸಿ

ಜ್ಯೋತಿಷ್ಯ
ಜ್ಯೋತಿಷ್ಯ
Published on

ಮೇಷ: ಹೃದಯ ಸಂಬಂಧಿ ವ್ಯಾಧಿಗೆ ಸೂಕ್ತ ಚಿಕಿತ್ಸೆ ಸಿಗಲಿದೆ. ಉದ್ಯಮಿ ಮಹಿಳೆಗೆ ವಿದೇಶ ಪ್ರವಾಸ. ಅಡಿಕೆ, ತೆಂಗು ಬೆಳೆಗಾರರಿಗೆ ಶುಭ. ಶುಭಸಂಖ್ಯೆ: 9

ವೃಷಭ: ಧಾರ್ವಿುಕ ಮುಖಂಡರಿಗೆ ಸಮಾಜದಲ್ಲಿ ಸನ್ಮಾನ. ವಾಣಿಜ್ಯ, ತಾಂತ್ರಿಕ ವಿದ್ಯಾರ್ಥಿಗಳಿಗೆ ಶುಭದಿನ. ನಟನಾ ಕ್ಷೇತ್ರದಲ್ಲಿ ಅವಕಾಶ. ಶುಭಸಂಖ್ಯೆ: 1

ಮಿಥುನ: ಕ್ರೀಡಾ ತರಬೇತಿ ಪಡೆಯಲು ವಿದೇಶಕ್ಕೆ ಪ್ರಯಾಣ. ಗೃಹ ನಿರ್ವಣಕ್ಕೆ ಚಾಲನೆ. ಆಸ್ತಿ ನೊಂದಣಿಗೆ ಇದ್ದ ಅಡೆತಡೆ ನಿವಾರಣೆ. ಶುಭಸಂಖ್ಯೆ: 5

ಕಟಕ: ಧಾರ್ವಿುಕ ನೇತಾರರಿಂದ ರಾಜಕೀಯ ಗಣ್ಯರ ಭೇಟಿ. ರೇಷ್ಮೆ ಕೃಷಿಕರಿಗೆ ಸರ್ಕಾರದಿಂದ ಸಹಾಯ. ನಾಟ್ಯ ಶಿಕ್ಷಕರಿಗೆ ವಿಶೇಷ ದಿನ. ಶುಭಸಂಖ್ಯೆ: 3

ಸಿಂಹ: ನಿಮ್ಮ ಯಶಸ್ಸಿಗೆ ಬಂಧುಬಾಂಧವರಿಂದ ಪ್ರಶಂಸೆ. ಬ್ಯಾಂಕ್ ಉದ್ಯೋಗಿಗಳಿಗೆ ಸ್ಥಳ ಬದಲಾವಣೆ. ಕಟ್ಟಡ ನಿರ್ವಣಕ್ಕೆ ಶೀಘ್ರಗತಿ. ಶುಭಸಂಖ್ಯೆ: 7

ಕನ್ಯಾ: ಬಟ್ಟೆ ವ್ಯಾಪಾರದಲ್ಲಿ ನಿರೀಕ್ಷೆಗೂ ಮೀರಿ ಲಾಭ. ದಾಂಪತ್ಯದಲ್ಲಿ ತಾಳ್ಮೆಯಿಂದ ವರ್ತಿಸಿ. ಡೇರಿ ಉತ್ಪನ್ನಗಳ ಮಾರಾಟದಲ್ಲಿ ಲಾಭ. ಶುಭಸಂಖ್ಯೆ: 6

ತುಲಾ: ನಿರೀಕ್ಷಿತ ವೈದ್ಯಕೀಯ ಕಾಲೇಜಿನ ಪ್ರವೇಶದ ಕನಸು ನನಸು. ವಿವಾಹ ಯತ್ನ ಫಲಕಾರಿ. ಕೋರ್ಟ್ ಕೆಲಸಗಳಲ್ಲಿ ನಿಧಾನಗತಿ. ಶುಭಸಂಖ್ಯೆ: 4

ವೃಶ್ಚಿಕ: ದೃಢ ನಿರ್ಧಾರ ತೆಗೆದುಕೊಳ್ಳುವಲ್ಲಿ ಕುಟುಂಬದ ಸಲಹೆ ಪಡೆದುಕೊಳ್ಳಿ. ಗೃಹ ನಿರ್ಮಾಣ ಕಾರ್ಯ ಮಂದಗತಿಯಲ್ಲಿ ಸಾಗಲಿದೆ. ಶುಭಸಂಖ್ಯೆ: 3

ಧನಸ್ಸು: ಸಿಕ್ಕ ಅವಕಾಶ ಸದುಪಯೋಗಪಡಿಸಿಕೊಳ್ಳಿ. ಆದಾಯ ತೆರಿಗೆ ನೌಕರರಿಗೆ ವರ್ಗಾವಣೆ. ವೈಮಾನಿಕ ಕ್ಷೇತ್ರದಲ್ಲಿ ಉದ್ಯೋಗ ಪ್ರಾಪ್ತಿ. ಶುಭಸಂಖ್ಯೆ: 2

ಮಕರ: ಹಳೇ ಸ್ನೇಹಿತರ ಭೇಟಿ. ಆಹಾರ ಪದಾರ್ಥಗಳ ವ್ಯಾಪಾರದಲ್ಲಿ ಲಾಭವಾಗುವುದು. ಕುಟುಂಬದಲ್ಲಿ ಅನಿರೀಕ್ಷಿತ ಘಟನೆ ನಡೆದೀತು. ಶುಭಸಂಖ್ಯೆ: 3

ಕುಂಭ: ಪ್ರತಿಭಾವಂತರಿಗೆ ಪುರಸ್ಕಾರ ಸಿಗಲಿದೆ. ಹೊಸ ಪರಿಚಯದಿಂದ ಪ್ರಯೋಜನ. ಪೀಠೋಪಕರಣಗಳ ಮಾರಾಟದಲ್ಲಿ ಅಭಿವೃದ್ಧಿ. ಶುಭಸಂಖ್ಯೆ: 8

ಮೀನ: ಆಸ್ತಿ ನೋಂದಣಿ ಸಮಸ್ಯೆಗೆ ಅಧಿಕಾರಿಗಳಿಂದ ಸ್ಪಂದನೆ. ಕಾರು ಮಳಿಗೆ ಮಾಲೀಕರಿಗೆ ಲಾಭ. ಕಟ್ಟಡ ನಿರ್ವಣಕ್ಕೆ ಮರುಚಾಲನೆ. ಶುಭಸಂಖ್ಯೆ: 5

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net