ನಿತ್ಯ ಭವಿಷ್ಯ; ಈ ರಾಶಿಯವರಿಗಿಂದು ಸ್ವಂತ ವ್ಯಾಪಾರದಲ್ಲಿ ಹಣ ಗಳಿಕೆ ಹೆಚ್ಚಲಿದೆ

ಜ್ಯೋತಿಷ್ಯ
ಜ್ಯೋತಿಷ್ಯ
Published on

ಮೇಷ: ಬ್ಯಾಂಕ್ ನೌಕರರಿಗೆ ವರ್ಗ ಸಾಧ್ಯತೆ. ಸಾಲ ತೀರಿಸುವ ಚಿಂತೆಗೆ ಪರಿಹಾರ. ಸಾರ್ವಜನಿಕವಾಗಿ ಮಾತಿನಿಂದ ಕಾರ್ಯ ಸಾಧನೆ. ಶುಭಸಂಖ್ಯೆ:3

ವೃಷಭ: ಚಿಕ್ಕ ಶಸ್ತ್ರ ಚಿಕಿತ್ಸೆ ಸಾಧ್ಯತೆ ಇದೆ. ಸ್ವಂತ ವ್ಯಾಪಾರದಲ್ಲಿ ಹಣ ಗಳಿಕೆ ಹೆಚ್ಚಲಿದೆ. ಮಕ್ಕಳಿಗಾಗಿ ಅಧಿಕ ಖರ್ಚು ಮಾಡಬೇಕಾಗುವುದು. ಶುಭಸಂಖ್ಯೆ:2

ಮಿಥುನ: ವಾಣಿಜ್ಯ, ಕಾನೂನು ವಿದ್ಯಾರ್ಥಿಗಳಿಗೆ ಮುನ್ನಡೆ. ಬಂಧುಗಳಿಂದ ಮಗಳ ವಿವಾಹಕ್ಕೆ ಸಹಾಯ. ದೈಹಿಕ ಅಸಮತೋಲನ ಸಮಸ್ಯೆ. ಶುಭಸಂಖ್ಯೆ: 8

ಕಟಕ: ಅಲಂಕಾರಿಕ ವಸ್ತುಗಳಿಂದ ಲಾಭ. ಆರ್ಥಿಕ ಒತ್ತಡ ನಿಭಾಯಿಸಲು ಆರ್ಥಿಕ ಮೂಲ ಸಿಗಲಿದೆ. ವಿದೇಶ ಪ್ರವಾಸದ ಕನಸಿನ ಸಾಕಾರ. ಶುಭಸಂಖ್ಯೆ: 8

ಸಿಂಹ: ಆರೋಗ್ಯ ವ್ಯತ್ಯಾಸದಿಂದ ಚೇತರಿಸಿಕೊಳ್ಳವಿರಿ. ಬಟ್ಟೆ ಖರೀದಿಯಲ್ಲಿ ಅನಿರೀಕ್ಷಿತ ಲಾಭ. ಶಿಕ್ಷಕ ವೃತ್ತಿಗೆ ಆಯ್ಕೆಯಾಗಿ ಸಮಾಧಾನ. ಶುಭಸಂಖ್ಯೆ: 8

ಕನ್ಯಾ: ದೊಡ್ಡ ಉದ್ದಿಮೆದಾರರಿಗೆ ವಿದೇಶದಲ್ಲಿ ಸನ್ಮಾನ. ಮಾತಿನಿಂದ ಹೆಸರು ಗಳಿಸುವಿರಿ. ಪ್ರಯಾಣದಲ್ಲಿ ಹಳೆಯ ಸ್ನೇಹಿತನ ಭೇಟಿ. ಶುಭಸಂಖ್ಯೆ:1

ತುಲಾ: ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಮುನ್ನಡೆ. ಅಧಿಕಾರಿಗಳಿಂದ ಉದ್ಯೋಗ ಸ್ಥಿರತೆಯ ಭರವಸೆ. ದುಶ್ಚಟಕ್ಕೆ ಹಣ ಖರ್ಚಾಗಲಿದೆ. ಶುಭಸಂಖ್ಯೆ: 3

ವೃಶ್ಚಿಕ: ಸಂಗಾತಿಯಿಂದ ವ್ಯಾಪಾರ ಅಭಿವೃದ್ಧಿಗೆ ಸಲಹೆ. ಧಾರ್ವಿುಕ ಆಲೋಚನೆ ಕಾರ್ಯಗತ. ಉದ್ಯೋಗದಲ್ಲಿ ಹೊಸ ಜವಾಬ್ದಾರಿ.ಶುಭಸಂಖ್ಯೆ:7

ಧನಸ್ಸು: ತಂದೆಯಿಂದ ಮನೆಯ ನವೀಕರಣಕ್ಕೆ ಸಹಕಾರ. ಐಟಿ ಉದ್ಯೋಗಿಗಳಿಗೆ ಉದ್ಯೋಗ ನಷ್ಟ. ಕಲಾವಿದರಿಗೆ ವಿಶೇಷ ಪುರಸ್ಕಾರ. ಶುಭಸಂಖ್ಯೆ:1

ಮಕರ: ತಾಯಿಯ ಆರೋಗ್ಯದಲ್ಲಿ ಸುಧಾರಣೆ. ಮಕ್ಕಳ ಭವಿಷ್ಯದತ್ತ ಹೆಚ್ಚಿನ ಗಮನ ಹರಿಸುವುದು ಅಗತ್ಯ. ಸಗಟು ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ: 3

ಕುಂಭ: ಸ್ಥಿರಾಸ್ತಿಯಿಂದ ಆದಾಯ ಹೆಚ್ಚಲಿದೆ. ಮಾನಸಿಕ ದೌರ್ಬಲ್ಯದಿಂದ ವೈಫಲ್ಯ. ದಾಂಪತ್ಯದಲ್ಲಿ ಸಮಸ್ಯೆ. ಬಾಳೆ ಕೃಷಿಕರಿಗೆ ಅನುಕೂಲ. ಶುಭಸಂಖ್ಯೆ: 5

ಮೀನ: ಹೋಟೆಲ್ ಉದ್ಯಮಿಗಳಿಗೆ ಆರ್ಥಿಕ ಅಭಿವೃದ್ಧಿ. ಸಂಬಂಧಪಡದವಿಷಯದಲ್ಲಿ ತಲೆ ತೂರಿಸಬೇಡಿ.ಉನ್ನತ ಪರೀಕ್ಷೆಯಲ್ಲಿ ತೇರ್ಗಡೆ.ಶುಭಸಂಖ್ಯೆ: 9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net