_1777742778261.webp?w=480&auto=format%2Ccompress&fit=max)
_1777742778261.webp?w=480&auto=format%2Ccompress&fit=max)
ಮೇಷ: ಹಣದ ಕೊರತೆ ಕಡಿಮೆಯಾಗುತ್ತದೆ. ಹೋಟೆಲ್ ಮಾಲೀಕರಿಗೆ ಹಣಕಾಸಿನಲ್ಲಿ ಹಿಡಿತವಿರಲಿ. ಭೂ ವ್ಯವಹಾರದಲ್ಲಿ ಲಾಭ ಬರಲಿದೆ. ಶುಭಸಂಖ್ಯೆ: 5
ವೃಷಭ: ಪ್ರಯಾಣದಿಂದ ಹಣ ಸಂಪಾದನೆ ಆಗಲಿದೆ. ಆರ್ಥಿಕ ಸ್ಥಿತಿಯಲ್ಲಿ ಚೇತರಿಕೆ. ಉನ್ನತ ವಿದ್ಯಾಭ್ಯಾಸದ ಕನಸು ಸಾಕಾರವಾಗಲಿದೆ. ಶುಭಸಂಖ್ಯೆ: 9
ಮಿಥುನ: ಆರೋಗ್ಯ ಅಧಿಕಾರಿಗಳಿಗೆ ಬಡ್ತಿ. ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ವರ್ಗಾವಣೆ. ಪತ್ನಿಯ ಆರೋಗ್ಯದಲ್ಲಿ ಸುಧಾರಿಸುವುದು. ಶುಭಸಂಖ್ಯೆ:1
ಕಟಕ: ಸಂತಾನಾಕಾಂಕ್ಷಿಗಳಿಗೆ ಶುಭ. ಪಾಲುದಾರಿಕೆಯಲ್ಲಿ ಆದಾಯ. ಹಿರಿಯ ಅಧಿಕಾರಿಗಳ ಸೂಚನೆ ಪಾಲಿಸಿ ಪ್ರಶಂಸೆ ಪಡೆಯುವಿರಿ. ಶುಭಸಂಖ್ಯೆ:3
ಸಿಂಹ: ಬೇಕರಿ ವ್ಯಾಪಾರದಲ್ಲಿ ಲಾಭ. ಸಾರಿಗೆ ಕಾರ್ವಿುಕರಿಗೆ ಅನಿರೀಕ್ಷಿತ ಧನ ಲಾಭ. ಆರ್ಥಿಕ ವಿಚಾರದಲ್ಲಿದ್ದ ಮನಃಸ್ತಾಪ ಬಗೆಹರಿಯಲಿದೆ. ಶುಭಸಂಖ್ಯೆ: 7
ಕನ್ಯಾ: ಸಂತಾನಾಕಾಂಕ್ಷಿಗಳಿಗೆ ಸಕಾರಾತ್ಮಕ ಫಲಿತಾಂಶ ಸಿಗಲಿದೆ. ವಾಹನ ಲಾಭ. ಅಡಿಕೆ, ತೆಂಗು ಬೇಸಾಯದಲ್ಲಿ ಉತ್ತಮ ಆದಾಯ. ಶುಭಸಂಖ್ಯೆ:7
ತುಲಾ: ವಿವಾಹಾಕಾಂಕ್ಷಿಗಳಿಗೆ ಸೂಕ್ತ ಸಂಗಾತಿ ಗೋಚರ. ಕಟ್ಟಡ ಸಾಮಗ್ರಿಗಳ ವ್ಯಾಪಾರದಲ್ಲಿ ಲಾಭ. ಕುಟುಂಬದೊಂದಿಗೆ ಪ್ರವಾಸ. ಶುಭಸಂಖ್ಯೆ: 8
ವೃಶ್ಚಿಕ: ಇಲಾಖೆ ಪರೀಕ್ಷೆಗಳಲ್ಲಿ ತೇರ್ಗಡೆಯಾಗುವಿರಿ. ಚಿನ್ನ ಬೆಳ್ಳಿ ವ್ಯಾಪಾರದಲ್ಲಿ ಅಧಿಕ ಆದಾಯ. ಪಾಲುದಾರಿಕೆ ವ್ಯವಹಾರದಲ್ಲಿ ಲಾಭ. ಶುಭಸಂಖ್ಯೆ:3
ಧನಸ್ಸು: ಔತಣಕೂಟಕ್ಕೆ ಅಧಿಕ ಖರ್ಚು. ರಾಜಕೀಯ ಪ್ರವೇಶಿಸಲು ಸಕಾಲ. ಆತ್ಮವಿಶ್ವಾಸದ ಕೊರತೆ. ಜೇನುಕೃಷಿಯಿಂದ ಹಣ ಗಳಿಸುವಿರಿ. ಶುಭಸಂಖ್ಯೆ:6
ಮಕರ: ಅನಿರೀಕ್ಷಿತ ಧನ ಲಾಭ. ಬರಹಗಾರರಿಗೆ ಶುಭದಿನ. ಕಮಿಷನ್ ವ್ಯವಹಾರದಲ್ಲಿ ಆದಾಯ. ದಿನದ ಅಂತ್ಯದಲ್ಲಿ ಶುಭ ಸುದ್ದಿ. ಶುಭಸಂಖ್ಯೆ:2
ಕುಂಭ: ಆಸ್ತಿ ನೋಂದಣಿ ಕಾರ್ಯದಲ್ಲಿ ಮುನ್ನಡೆ. ತಾಂತ್ರಿಕ ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಯತ್ನದ ಅಗತ್ಯ ಇದೆ. ಹೈನುಗಾರಿಕೆಯಲ್ಲಿ ಶುಭ. ಶುಭಸಂಖ್ಯೆ:8
ಮೀನ: ಸಣ್ಣ ವ್ಯವಹಾರದಲ್ಲಿ ಲಾಭವಾಗಲಿದೆ. ಮಹಿಳಾ ರಾಜಕಾರಣಿಗಳಿಗೆ ಶುಭದಿನ. ಹೃದಯ ಸಂಬಂಧಿ ತೊಂದರೆ ಶಮನವಾಗಲಿದೆ. ಶುಭಸಂಖ್ಯೆ:8