ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಸ್ವಂತ ಉದ್ಯಮದಲ್ಲಿ ನಿರೀಕ್ಷಿತ ಲಾಭಗಳಿಸುವಿರಿ

ಜ್ಯೋತಿಷ್ಯ
ಜ್ಯೋತಿಷ್ಯ
Published on

ಮೇಷ: ಶಿಕ್ಷಣ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡುವಿರಿ. 

ಗೃಹ ನಿರ್ವಣದ ವಿಳಂಬ. ಶಕ್ತಿ ಇಂಧನಗಳ ಮಾರಾಟದಲ್ಲಿ ಲಾಭವಾಗಲಿದೆ. ಶುಭಸಂಖ್ಯೆ:9

ವೃಷಭ: ಬಂಧುಗಳಿಂದ ಆರ್ಥಿಕ ಸಹಾಯ. ಷೇರು 

ಹೂಡಿಕೆಗೆ ಸುಸಮಯ. ವಾಹನ ದುರಸ್ತಿಗೆ ಖರ್ಚು ಹೆಚ್ಚು ಮಾಡಬೇಕಾಗುವುದು. ಶುಭಸಂಖ್ಯೆ: 4

ಮಿಥುನ: ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಸಾಧನೆ. 

ವೀಸಾ ಸಮಸ್ಯೆ ಪರಿಹಾರ. ಜೇನು ಕೃಷಿಗೆ ಸರ್ಕಾರದಿಂದ ಆರ್ಥಿಕ ಪೋ›ತ್ಸಾಹ. ಶುಭಸಂಖ್ಯೆ: 2

ಕಟಕ: ಬೃಹತ್ ವಾಹನಗಳ ಮಾಲೀಕರಿಗೆ ಶುಭದಿನ. ಅವಿವಾಹಿತರಿಗೆ ವಿವಾಹ ಸಿದ್ದಿ. ದಿನದ ಅಂತ್ಯದಲ್ಲಿ ದೂರ ಪ್ರಯಾಣ ಸಾಧ್ಯತೆ. ಶುಭಸಂಖ್ಯೆ: 4

ಸಿಂಹ: ನವದಂಪತಿ ವಿದೇಶ ಪ್ರಯಾಣ ಮಾಡುವಿರಿ. ಆಭರಣಗಳ ಮಳಿಗೆಯವರಿಗೆ ಲಾಭ. ಸಿದ್ಧ ಉಡುಪುಗಳ ಮಾರಾಟದಲ್ಲಿ ಪ್ರಗತಿ. ಶುಭಸಂಖ್ಯೆ: 2

ಕನ್ಯಾ: ನಿಮ್ಮ ಪ್ರತಿಭೆಗೆ ಸೂಕ್ತ ಪ್ರೋತ್ಸಾಹ ಸಿಗಲಿದೆ. ರಾಜ್ಯ ಸರ್ಕಾರಿ ಸೇವಾಕ್ಷೇತ್ರದಲ್ಲಿ ಉದ್ಯೋಗ ಪ್ರಾಪ್ತಿ. ಅನರೀಕ್ಷಿತವಾಗಿ ಪದವಿಪ್ರಾಪ್ತಿ. ಶುಭಸಂಖ್ಯೆ:3

ತುಲಾ: ಕೊಟ್ಟ ಸಾಲ ಸಕಾಲಕ್ಕೆ ತಿರುಗಿ ಬರಲಿದೆ. ಮನೆ ನವೀಕರಣಕ್ಕೆ ಹಣ ಖರ್ಚಾಗಲಿದೆ. ಆಸ್ತಿ ವಿವಾದ ಕೋರ್ಟ್ ಮೆಟ್ಟಿಲೇರಲಿದೆ. ಶುಭಸಂಖ್ಯೆ: 8

ವೃಶ್ಚಿಕ: ಧಾರ್ವಿುಕ ಕ್ಷೇತ್ರದ ಕೆಲಸಗಾರರಿಗೆ ಒತ್ತಡ ಹೆಚ್ಚಾಗಲಿದೆ. ಪೆಟ್ರೋಲ್ ಬಂಕ್ ಸ್ಥಾಪನೆಗೆ ಅನುಮತಿ ದೊರೆಯಲಿದೆ. ಸಮಾಧಾನ. ಶುಭಸಂಖ್ಯೆ: 5

ಧನಸ್ಸು: ಎಲೆಕ್ಟ್ರಾನಿಕ್ಸ್ ವ್ಯವಹಾರದಲ್ಲಿ ಲಾಭ. ಹಣ್ಣು,ತರಕಾರಿ ಅಂಗಡಿ ಸ್ಥಾಪನೆಗೆ ನಿರ್ಧಾರ. ಗುರು ಹಿರಿಯರ ದರ್ಶನದಿಂದ ಉಲ್ಲಾಸ. ಶುಭಸಂಖ್ಯೆ: 6

ಮಕರ: ಕಾನೂನು ಅಭ್ಯಾಸದಲ್ಲಿ ಅಭಿವೃದ್ಧಿ. 

ಸಾಂಪ್ರದಾಯಿಕ ಉಡುಪುಗಳ ಮಾರಾಟದಲ್ಲಿ ಲಾಭ. ದಿನಾಂತ್ಯದಲ್ಲಿ ಶುಭ ಸುದ್ದಿ ಕೇಳುವಿರಿ. ಶುಭಸಂಖ್ಯೆ: 6

ಕುಂಭ: ಚುನಾವಣೆಯಲ್ಲಿ ಗೆಲುವು. ಡೈರಿ ಉತ್ಪನ್ನ ಮಾರಾಟದಲ್ಲಿ ಲಾಭ. ತೆಂಗಿನಕಾಯಿ, ಬಾಳೆಹಣ್ಣಿನ ವ್ಯಾಪಾರಿಗಳಿಗೆ ಆರ್ಥಿಕ ಅಭಿವೃದ್ಧಿ. ಶುಭಸಂಖ್ಯೆ: 6

ಮೀನ: ಸ್ವಂತ ಉದ್ಯಮದಲ್ಲಿ ನಿರೀಕ್ಷಿತ ಲಾಭಗಳಿಸುವಿರಿ. ಉದ್ಯೋಗಸ್ಥ ಮಹಿಳೆಯರಿಗೆ ಬಡ್ತಿ. ದೈಹಿಕ ಕಸರತ್ತಿನ ಶಿಕ್ಷಕರಿಗೆ ಧನ ಲಾಭ. ಶುಭಸಂಖ್ಯೆ: 4

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net