ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ಯಶಸ್ಸು

ಜ್ಯೋತಿಷ್ಯ
ಜ್ಯೋತಿಷ್ಯ
Published on

ಮೇಷ: ಕೌಶಲ, ತಿಳಿವಳಿಕೆಯಿಂದ ಅಪೂರ್ಣ ಕೆಲಸವನ್ನು ಪೂರ್ಣಗೊಳಿಸುವಿರಿ. ಒತ್ತಡ ಹೆಚ್ಚಿದ್ದರೂ ಸಮನ್ವಯ ಕಾಪಾಡಿಕೊಳ್ಳಿ. ಶುಭಸಂಖ್ಯೆ:1

ವೃಷಭ: ಮಾತು, ನಡವಳಿಕೆ ಮೇಲೆ ಹಿಡಿತವಿರಲಿ. ಆರ್ಥಿಕ ಸ್ಥಿರತೆ ಉತ್ತಮ. ಹೂಡಿಕೆ ಬಗ್ಗೆ ಯೋಚಿಸಿ. ವಿದ್ಯಾರ್ಥಿಗಳಿಗೆ ಉತ್ತಮ ದಿನ. ಶುಭಸಂಖ್ಯೆ:9

ಮಿಥುನ: ಹೊಸ ಕೆಲಸದಲ್ಲಿ ಗಮನ ಇರಲಿ. ಮಹಿಳೆಯರಿಗೆ ಸಹೋದ್ಯೋಗಿಗಳಿಂದ ಸಹಕಾರ. ಆದಾಯದ ಹೊಸ ಮೂಲ ಸಿಗಲಿದೆ. ಶುಭಸಂಖ್ಯೆ:5

ಕಟಕ: ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ಯಶಸ್ಸು. ಸಮಾಜದಲ್ಲಿ ಖ್ಯಾತಿ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ದಾನ-ಧರ್ಮದತ್ತ ಒಲವು. ಶುಭಸಂಖ್ಯೆ:2

ಸಿಂಹ: ಹಣಹೂಡಿಕೆಗೆ ಅನುಕೂಲಕರ ದಿನ. ಹೊಸ ಯೋಜನೆ ಕಾರ್ಯರೂಪಕ್ಕೆ ಬರಲಿವೆ. ಉನ್ನತ ಅಧಿಕಾರಿ ಮೆಚ್ಚುಗೆ ಸೂಚಿಸುತ್ತಾರೆ. ಶುಭಸಂಖ್ಯೆ: 7

ಕನ್ಯಾ: ಪ್ರಯತ್ನಗಳಿಗೆ ಉತ್ತಮ ಫಲಿತಾಂಶ ಸಿಗಲಿದೆ. ಅನಗತ್ಯವಾದ-ವಿವಾದಗಳಿಂದ ದೂರವಿರಿ. ಕಚೇರಿಯಲ್ಲಿ ಹೊಸ ಜವಾಬ್ದಾರಿ. ಶುಭಸಂಖ್ಯೆ: 7

ತುಲಾ: ದೀರ್ಘಕಾಲದ ಸಮಸ್ಯೆಗೆ ಇಂದು ಪರಿಹಾರ ಕಂಡುಕೊಳ್ಳುವಿರಿ. ಅಂತಃಪ್ರಜ್ಞೆಯನ್ನು ನಂಬಿರಿ. ಹೊಸ ಯೋಚನೆ ಲಾಭ ತರುತ್ತವೆ. ಶುಭಸಂಖ್ಯೆ: 1

ವೃಶ್ಚಿಕ: ಆಸ್ತಿ-ಸಂಬಂಧಿ ವಿಷಯಗಳ ಇತ್ಯರ್ಥಸಾಧ್ಯತೆ. ನಟರಿಗೆ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಆತುರದಲ್ಲಿ ನಿರ್ಧಾರ ತೆಗೆದುಕೊಳ್ಳಬೇಡಿ. ಶುಭಸಂಖ್ಯೆ: 7

ಧನಸ್ಸು: ಅನಿರೀಕ್ಷಿತವಾಗಿ ಪ್ರಭಾವಶಾಲಿಗಳ ಭೇಟಿ. ಪ್ರಯಾಣದ ಯೋಜನೆ ಅಂತಿಮಗೊಳ್ಳುವ ಸಾಧ್ಯತೆ. ಆರೋಗ್ಯದತ್ತ ಗಮನ ಇರಲಿ. ಶುಭಸಂಖ್ಯೆ: 8

ಮಕರ: ಉನ್ನತ ವ್ಯಾಸಂಗದತ್ತ ಗಮನ ಹರಿಸಿ. ಬಾಕಿ ಕೆಲಸಗಳನ್ನು ಪೂರ್ಣಗೊಳಿಸುತ್ತೀರಿ. ಕೋರ್ಟ್ ಕೇಸ್​ನಲ್ಲಿ ಕುಟುಂಬದ ಬೆಂಬಲ. ಶುಭಸಂಖ್ಯೆ:1

ಕುಂಭ: ಸಾಮಾಜಿಕ ಚಟುವಟಿಕೆಯಲ್ಲಿ ಸಕ್ರಿಯರಾಗುತ್ತೀರಿ. ಪ್ರೀತಿ ಪ್ರೇಮದ ವಿಷಯದಲ್ಲಿ ಸ್ನೇಹಿತರ ಬೆಂಬಲ. ಹೂಡಿಕೆಯಲ್ಲಿ ಯಶಸ್ಸು. ಶುಭಸಂಖ್ಯೆ: 7

ಮೀನ: ಸಕಾರಾತ್ಮಕವಾಗಿ ಯೋಚಿಸಿ ವೃತ್ತಿಜೀವನದಲ್ಲಿ ಪ್ರಗತಿ ಕಾಣುವಿರಿ. ಮಕ್ಕಳ ಕಡೆಯಿಂದ ಶುಭ ಸುದ್ದಿ ಯನ್ನು ಕೇಳುವ ಸಾಧ್ಯತೆ ಇದೆ. ಶುಭಸಂಖ್ಯೆ: 6

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net