ನಿತ್ಯಭವಿಷ್ಯ; ಈ ರಾಶಿಯವರಿಗಿಂದು ಹೂಡಿಕೆ ವ್ಯವಹಾರ ಪ್ರಾರಂಭಿಸಲು ಇಂದು ಸೂಕ್ತ ಕಾಲ

ಜ್ಯೋತಿಷ್ಯ
ಜ್ಯೋತಿಷ್ಯ
Published on

ಮೇಷ: ಕುಟುಂಬದೊಂದಿಗೆ ಪ್ರವಾಸಕ್ಕೆ ಸಾಧ್ಯತೆ. ಸಂಗೀತ ಕಲಾವಿದರಿಗೆ ವಿಶೇಷ ದಿನ. ಆಸ್ತಿ ವಿಚಾರದ ಕಿರಿಕಿರಿ ಬಗೆಹರಿಯಲಿದೆ. ಶುಭಸಂಖ್ಯೆ: 2

ವೃಷಭ: ಗೃಹ ಉತ್ಪನ್ನಗಳ ಬೇಡಿಕೆ ಹೆಚ್ಚಾಗಲಿದೆ. ಕುಟುಂಬ- ಕಚೇರಿ ವ್ಯವಹಾರದಲ್ಲಿ ಸಮತೋಲನ ಸಾಧಿಸಿ. ಸಂಸಾರದಲ್ಲಿ ನೆಮ್ಮದಿ. ಶುಭಸಂಖ್ಯೆ: 8

ಮಿಥುನ: ಅವಕಾಶ ಕೈ ತಪ್ಪಿ ಹೋಗದಂತೆ ನೋಡಿಕೊಳ್ಳಿ. ಲೋಹಗಳ ಉದ್ಯಮಿಗಳಿಗೆ ಶುಭದಿನ. ವಿದ್ಯಾರ್ಥಿಗಳಿಗೆ ಪ್ರಯಾಣ ಸಾಧ್ಯತೆ. ಶುಭಸಂಖ್ಯೆ:8

ಕಟಕ: ಉದ್ಯೋಗ ಸ್ಥಾನದಲ್ಲಿ ಉತ್ಸಾಹ ಹೆಚ್ಚಲಿದೆ. ಕುಟುಂಬದ ಹಿರಿಯರ ಆರೋಗ್ಯ ಗಣನೀಯ ಚೇತರಿಕೆ. ಅಧ್ಯಯನದಲ್ಲಿ ಆಸಕ್ತಿ. ಶುಭಸಂಖ್ಯೆ: 8

ಸಿಂಹ: ಉದ್ಯೋಗ ಸ್ಥಾನದಲ್ಲಿ ಹೊಸ ಪ್ರಯೋಗ ಯಶಸ್ವಿ. ವಿವಾದವನ್ನು ತಾಳ್ಮೆಯಿಂದ ನಿರ್ವಹಿಸಿ. ಮಕ್ಕಳ ಸಾಧನೆಯಿಂದ ಹೆಮ್ಮೆ. ಶುಭಸಂಖ್ಯೆ: 3

ಕನ್ಯಾ: ಕೃಷಿ ಸಂಬಂಧಿತ ಉದ್ಯಮಗಳಿಂದ ಲಾಭಗಳಿಸುವಿರಿ. ರಕ್ಷಣಾ ವಿಭಾಗದಲ್ಲಿ ಉದ್ಯೋಗ ಸಿಗಲಿದೆ. ಕ್ರೀಡಾಸಕ್ತರಿಗೆ ಇಂದು ಶುಭದಿನ.ಶುಭಸಂಖ್ಯೆ: 9

ತುಲಾ: ಬುದ್ಧಿವಂತಿಕೆಯಿಂದ ಕಾರ್ಯಸಾಧನೆ. ಕರ ಕುಶಲ ಕೆಲಸಗಳನ್ನು ಮಾಡುವವರಿಗೆ ಬೇಡಿಕೆ. ವಿಚ್ಛೇದಿತರಿಗೆ ವಿವಾಹ ಯೋಗ. ಶುಭಸಂಖ್ಯೆ:1

ವೃಶ್ಚಿಕ: ಕುಟುಂಬದೊಂದಿಗೆ ಪ್ರವಾಸ. ಹೈನು ಉದ್ಯಮಕ್ಕೆ ಬೇಡಿಕೆ ಹೆಚ್ಚಲಿದೆ. ಹೂಡಿಕೆ ವ್ಯವಹಾರ ಪ್ರಾರಂಭಿಸಲು ಇಂದು ಸೂಕ್ತ ಕಾಲ. ಶುಭಸಂಖ್ಯೆ: 7

ಧನಸ್ಸು: ಸೋಲಾರ್ ವ್ಯವಹಾರದಲ್ಲಿ ಅಭಿವೃದ್ಧಿ. ಸಹೋದ್ಯೋಗಿಗಳೊಂದಿಗೆ ಪರಸ್ಪರ ಸಹಕಾರ. ಸಹೋದರ ರೊಂದಿಗೆ ಸಂಬಂಧ ವೃದ್ಧಿ.ಶುಭಸಂಖ್ಯೆ: 4

ಮಕರ: ಸಂಬಂಧಪಡದ ವ್ಯವಹಾರದಲ್ಲಿ ತಲೆ ಹಾಕಬೇಡಿ. ಗೃಹ ನಿರ್ವಣಕ್ಕೆ ಚಾಲನೆ. ದಾಂಪತ್ಯ ಜೀವನದಲ್ಲಿ ಅನಿರೀಕ್ಷಿತ ತಿರುವು. ಶುಭಸಂಖ್ಯೆ:3

ಕುಂಭ: ಮಹತ್ಕಾರ್ಯದ ಕನಸು ಸಾಕಾರ. ಐಟಿ ಉದ್ಯೋಗ ಸ್ಥರಿಗೆ ಯಶಸ್ಸು ಸಿಗಲಿದೆ. ನಾಟಕ ಕಲಾವಿದರಿಗೆ ಸರ್ಕಾರದಿಂದ ಸನ್ಮಾನ. ಶುಭಸಂಖ್ಯೆ:9

ಮೀನ: ಬಿಡುವಿಲ್ಲದ ಕೆಲಸದ ನಡುವೆ ಕಾರ್ಯಸಿದ್ದಿ. ಪ್ರಭಾವಿಗಳ ಭೇಟಿಯಿಂದ ಪದವಿ ಪ್ರಾಪ್ತಿ. ಭೂವ್ಯವಹಾರದಲ್ಲಿ ಲಾಭವಾಗುವುದು. ಶುಭಸಂಖ್ಯೆ: 3

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net