ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಉತ್ತಮ ಸಂಬಂಧದೊಂದಿಗೆ ಮಗಳ ವಿವಾಹ ಕೂಡಿ ಬರಲಿದೆ

ಜ್ಯೋತಿಷ್ಯ
ಜ್ಯೋತಿಷ್ಯ
Published on

ಮೇಷ: ಹೊಸದಾಗಿ ಉದ್ಯೋಗಕ್ಕೆ ಸೇರಲು ಸುಸಮಯ. ರಾಜಕೀಯ ಪ್ರತಿಸ್ಪರ್ಧಿಗಳಿಂದ ತೊಂದರೆ. ಹೋಟೆಲ್ ವ್ಯವಹಾರದಲ್ಲಿ ಲಾಭ. ಶುಭಸಂಖ್ಯೆ: 9

ವೃಷಭ: ಸಹಕಾರಿ ಹಣಕಾಸಿನ ಸಂಸ್ಥೆಗಳಿಗೆ ಲಾಭ ಗಳಿಕೆ ಹೆಚ್ಚಲಿದೆ. ವಾಹನ ರಿಪೇರಿಗೆ ಖರ್ಚು. ಮಾಧ್ಯಮ ಕ್ಷೇತ್ರದ ನೌಕರರಿಗೆ ಬಡ್ತಿ. ಶುಭಸಂಖ್ಯೆ: 1

ಮಿಥುನ: ಆಸ್ತಿಗೆ ಸಂಬಂಧಿಸಿದ ಮಾತುಕತೆಯಲ್ಲಿ ತಾಳ್ಮೆ ತೀರಾ ಅಗತ್ಯ. ಉತ್ತಮ ಸಂಬಂಧದೊಂದಿಗೆ ಮಗಳ ವಿವಾಹ ಕೂಡಿ ಬರಲಿದೆ. ಶುಭಸಂಖ್ಯೆ:5

ಕಟಕ: ಗೃಹ ನಿರ್ವಣದಲ್ಲಿ ಇದ್ದ ಅಡೆತಡೆ ನಿವಾರಣೆ. ಕೃಷಿ ಜಮೀನು ಖರೀದಿಗೆ ನಿರ್ಧಾರ. ವೈಮಾನಿಕ ಕ್ಷೇತ್ರದಲ್ಲಿ ಉದ್ಯೋಗ ಪ್ರಾಪ್ತಿ. ಶುಭಸಂಖ್ಯೆ: 8

ಸಿಂಹ: ತಂಪು ಪಾನೀಯ ಮಾರಾಟದಿಂದ ಲಾಭ. ಸಹೋದರಿಯ ಮನೆಗೆ ಭೇಟಿ. ವಾಣಿಜ್ಯ ಉದ್ದೇಶದ ಆಸ್ತಿ ವಿವಾದ ಬಗೆಹರಿಯಲಿದೆ. ಶುಭಸಂಖ್ಯೆ: 1

ಕನ್ಯಾ: ನೀರಿನ ಮಾರಾಟದಲ್ಲಿ ಲಾಭ. ಜೇನು ಮತ್ತು ರೇಷ್ಮೆ ಕೃಷಿಕರಿಗೆ ಒಳ್ಳೆಯ ದಿನ. ವೀಸಾ ಸಂಬಂಧಿತ ಸಮಸ್ಯೆಗಳು ಪರಿಹಾರ. ಶುಭಸಂಖ್ಯೆ:4

ತುಲಾ: ಸರ್ಕಾರದ ಸವಲತ್ತು ಪಡೆಯುವಲ್ಲಿ ಇದ್ದ ನಿರ್ಬಂಧ ತೆರವು. ಕೇಂದ್ರ ಸರ್ಕಾರದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ. ಶುಭಸಂಖ್ಯೆ: 9

ವೃಶ್ಚಿಕ: ಕ್ರೀಡಾಪಟುಗಳಿಗೆ ವಿಶೇಷ ಸವಲತ್ತು ಸಿಗಲಿದೆ. ಬಹುದಿನಗಳ ಪಿತ್ರಾರ್ಜಿತ ಆಸ್ತಿ ವಿವಾದ ಮಾತುಕತೆಯ ಮುಖಾಂತರ ಇತ್ಯರ್ಥ. ಶುಭಸಂಖ್ಯೆ: 3

ಧನಸ್ಸು: ಸಂಗಾತಿಯ ಆರೋಗ್ಯದಲ್ಲಿ ಚೇತರಿಕೆ. ಧಾರ್ವಿುಕ ಕಾರ್ಯಗಳಿಂದ ಮನಶ್ಶಾಂತಿ. ಭೂ ವ್ಯವಹಾರದಲ್ಲಿ ಹಣ ಹೂಡಿಕೆಗೆ ಸುಸಮಯ. ಶುಭಸಂಖ್ಯೆ: 8

ಮಕರ: ಸಪ್ತಮದ ಗುರುವಿನ ಕಾರಣದಿಂದ ಸಂಗಾತಿಯ ಕಡೆಯಿಂದ ಆಸ್ತಿ ದೊರೆಯಲಿದೆ. ಕಲಾವಿದರಿಗೆ ವಿದೇಶ ಪ್ರವಾಸ ಸಾಧ್ಯತೆ. ಶುಭಸಂಖ್ಯೆ: 1

ಕುಂಭ: ನಿಮ್ಮ ಪರಿಸರ ಕಾಳಜಿಯಿಂದ ಸಾರ್ವಜನಿಕ ಗೌರವಕ್ಕೆ ಪಾತ್ರರಾಗುವಿರಿ. ಪ್ರಭಾವಿ ವ್ಯಕ್ತಿಗಳ ಶಿಫಾರಸ್ಸಿನಿಂದ ಉದ್ಯೋಗ ಪ್ರಾಪ್ತಿ. ಶುಭಸಂಖ್ಯೆ: 2

ಮೀನ: ಕಿರುಚಿತ್ರಗಳ ನಿರ್ವಪಕರಿಗೆ ಹಣ ಲಾಭ. ಸಿವಿಲ್​ಇಂಜಿನಿಯರಿಂಗ್ ವೃತ್ತಿಯಲ್ಲಿ ಪ್ರಗತಿ. ಆಸ್ತಿ ವಿವಾದಕ್ಕೆ ರ್ತಾಕ ಅಂತ್ಯ. ಶುಭಸಂಖ್ಯೆ: 6

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net