ಸದೃಢ ಆರೋಗ್ಯಕ್ಕಾಗಿ ಸೈಕಲ್ ಬಳಸಿ

ಸದೃಡ ಆರೋಗ್ಯಕ್ಕಾಗಿ ಸೈಕಲ್ ಬಳಸಿ
ಸದೃಡ ಆರೋಗ್ಯಕ್ಕಾಗಿ ಸೈಕಲ್ ಬಳಸಿ
Published on

ಪ್ರಮುಖ ಮುಖ್ಯಾಂಶಗಳು

  • ಆರೋಗ್ಯ ಜಾಗೃತಿಗಾಗಿ ಸೈಕಲ್ ಜಾಥಾ
  • ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿ ನಡೆದ ರ್ಯಾಲಿ
  • ಕಾನೂನು ಮಹಾವಿದ್ಯಾಲಯದಿಂದ ಆಯೋಜನೆ

ಸದೃಡ ಆರೋಗ್ಯಕ್ಕಾಗಿ ಸೈಕಲ್ ಬಳಸಿ
| ಪ್ರೊ. ಪಿ.ಎಮ್. ಕಮತೆ ಅಭಿಪ್ರಾಯ | ಇಂಧನ ಉಳಿತಾಯಕ್ಕಾಗಿ ಸೈಕಲ್ ಜಾಥಾ
ವಿಜಯವಾಣಿ ಸುದ್ದಿಜಾಲ ಚಿಕ್ಕೋಡಿ:

ಹಸಿರು ಪರಿಸರ ನಿರ್ಮಾಣ ಹಾಗೂ ಆರೋಗ್ಯಯುತ ಜೀವನ ನಡೆಸಲು ನಿತ್ಯ ಜೀವನದಲ್ಲಿ ಪ್ರತಿಯೊಬ್ಬರು ಸೈಕಲ್ ಬಳಸಬೇಕಾಗಿದೆ ಎಂದು ಕೆಎಲ್‌ಇ ಸಂಸ್ಥೆಯ ಕಾನೂನು ಮಹಾವಿದ್ಯಾಲಯದ ಎನ್‌ಎಸ್‌ಎಸ್ ಘಟಕದ ಅಧಿಕಾರಿ ಪ್ರೊ. ಪಿ.ಎಂ. ಕಮತೆ ಅಭಿಪ್ರಾಯಪಟ್ಟರು.
ಪಟ್ಟಣದ ಕೆಎಲ್ ಇ ಸಂಸ್ಥೆಯ ಕಾನೂನು ಮಹಾವಿದ್ಯಾಲಯದ ಈಚೆಗೆ ಮಹಾವಿದ್ಯಾಲಯದ ಎನ್‌ಎಸ್‌ಎಸ್ ಘಟಕ ಹಾಗೂ ಕಾನೂನು ಸಲಹಾ ಸಮಿತಿ ವತಿಯಿಂದ ಉಳಿತಾಯದ ಜಾಗೃತಿ ಕುರಿತು ಹಮ್ಮಿಕೊಂಡಿದ್ದ ಸೈಕಲï ಜಾಥಾ ಕಾರ್ಯಕ್ರಮದಲ್ಲಿ ಅವರು ಇದ್ದರು.
ಇರಾನ ಮತ್ತು ಇಸ್ರೇಲ್ ದೇಶಗಳ ನಡುವಿನ ಯುದ್ಧದಿಂದ ದೇಶದ ಪೆಟ್ರೋಲ್ ಮತ್ತು ಡೀಸೆಲ್ ಕೊರತೆ ಹೆಚ್ಚು ಸಮಸ್ಯೆಯಾಗಿದೆ ಉಂಟಾಗುತ್ತಿದೆ.ಪ್ರತಿಯೊಬ್ಬರು ಸಾಧ್ಯವಾದಷ್ಟು ಇಂದನ ಉಳಿತಾಯ ಮತ್ತು ಪರಿಸರದಲ್ಲಿನ ಸಮತೋಲನವನ್ನು ಕಾಯ್ದುಕೊಳ್ಳಲು ಸೈಕಲ್ ಬಳಸುತ್ತಾರೆ ಅವಶ್ಯಕವಾಗಿದೆ ಎಂದರು.
ಜಾಗೃತಿ ಜಾಥಾವು ಮಹಾವಿದ್ಯಾಲಯದಿಂದ ಪ್ರಾರಂಭವಾಗಿ ಬಸವ ವೃತ್ತ,ಬಸ್ ನಿಲ್ದಾಣ,ಕೆ.ಸಿ ರಸ್ತೆ ಮಾರ್ಗವಾಗಿ ಸಾಗಿ ಕಾಲೇಜು ಆವರಣದಲ್ಲಿ ಮುಕ್ತಾಯಗೊಂಡಿತು.
ಪ್ರಾಚಾರ್ಯೆ ಪ್ರೊ.ದೀಪಾಲಿ ಪಾಟೀಲ, ಮೇಘಾ ಶೆಟ್ಟಿ, ಸವಿತಾ ನಾಗರಾಳೆ, ಗಂಗಾ ಗೊಲ್ಲಶೆಟ್ಟಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net