ಐಟಿ ಕಂಪನಿ ಮಾದರಿಯಲ್ಲಿ ನಗರದ ಎಚ್‌ಎಸ್‌ಆರ್ ಲೇಔಟ್, ಚೂಡಸಂದ್ರ ಹಾಗೂ ಕೋರಮಂಗಲದ ಎರಡು ಕಡೆ ಸೇರಿ ಒಟ್ಟು ನಾಲ್ಕು ಕಡೆ ತೆರೆಯಲಾಗಿದ್ದ ಕಾಲ್ ಸೆಂಟರ್‌ಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಸೈಬರ್ ವಂಚನೆಯ ಪ್ರಮುಖರಾಗಿದ್ದ ದೆಹಲಿ ಮೂಲದ ಪ್ರಶಾಂತ, ಉತ್ತರ ಪ್ರದೇಶದ ಆಕಾಶ್ ಎಂಬುವರನ್ನು ಬಂಧಿಸಿದ್ದಾರೆ. ಆರೋಪಿತರಿಂದ 44 ಎಸ್‌ಎಸ್‌ಡಿ, ಮೊಬೈಲ್ ಫೋನ್, ಕಂಪ್ಯೂಟರ್, 2 ಲ್ಯಾಪ್‌ಟಾಪ್, 9 ಸ್ಕ್ರಿಪ್ಟ್ ಪುಸ್ತಕ ಸೇರಿ ಇತರೆ ತಾಂತ್ರಿಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. Cyber cirme