ವಿದ್ಯಾರ್ಥಿಗಳಿಗೆ ವಿದ್ಯೆಯೊಂದಿಗೆ ಸಂಸ್ಕಾರ ಮುಖ್ಯ

ಚಿಮ್ಮಡದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪಿಯುಸಿ, ಎಸ್‌ಎಸ್‌ಎಲ್‌ಸಿ ಹಾಗೂ ಸ್ನಾತಕೊತ್ತರ ಪದವಿಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ವಿರಕ್ತಮಠದ ಪ್ರಭು ಮಹಾಸ್ವಾಮಿಗಳು, ಜನಾರ್ದಾನ ಮಹಾರಾಜರು, ಚಂದ್ರಕಾಂತ ಜಾಡಗೌಡರ, ರಾಮಣ್ಣ ಮುಗಳಖೋಡ ಇತರರಿದ್ದರು.
ಚಿಮ್ಮಡದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪಿಯುಸಿ, ಎಸ್‌ಎಸ್‌ಎಲ್‌ಸಿ ಹಾಗೂ ಸ್ನಾತಕೊತ್ತರ ಪದವಿಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ವಿರಕ್ತಮಠದ ಪ್ರಭು ಮಹಾಸ್ವಾಮಿಗಳು, ಜನಾರ್ದಾನ ಮಹಾರಾಜರು, ಚಂದ್ರಕಾಂತ ಜಾಡಗೌಡರ, ರಾಮಣ್ಣ ಮುಗಳಖೋಡ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವಿರಕ್ತಮಠದ ಪ್ರಭು ಮಹಾಸ್ವಾಮಿಗಳು ಹೇಳಿಕೆ
  • ಪುರಸ್ಕಾರ ವಿದ್ಯಾರ್ಥಿಗಳಿಗೆ ಪ್ರೇರಣೆ
ಚಿಮ್ಮಡ: ಬಡ ವಿದ್ಯಾರ್ಥಿಗಳ ಪ್ರತಿಭೆಗೆ ನೀಡುವ ಗೌರವ, ಪುರಸ್ಕಾರ ಇನ್ನುಳಿದ ವಿದ್ಯಾರ್ಥಿಗಳಿಗೆ ಪ್ರೇರಣೆ. ಈ ಕಾರ್ಯ ನಿರಂತರ ನಡೆಯಬೇಕು ಎಂದು ವಿರಕ್ತಮಠದ ಪ್ರಭು ಮಹಾಸ್ವಾಮಿಗಳು ಹೇಳಿದರು.

ಗ್ರಾಮದ ಬನಶಂಕರಿದೇವಿ ಕಲ್ಯಾಣ ಮಂಟಪದಲ್ಲಿ ಬನಶಂಕರಿದೇವಿ ಸೇವಾ ಸಮಿತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿದ್ಯೆಯೊಂದಿಗೆ ಸಂಸ್ಕಾರ ಮುಖ್ಯವಾಗಿದ್ದು, ಆ ಸಂಸ್ಕಾರ ನೀಡುವ ಕಾರ್ಯವನ್ನು ಮಹಾಲಿಂಗಪುರದ ಹಟಗಾರ ಸಮಾಜ ಬಾಂಧವರು ಮಾಡುತ್ತಿದ್ದು, ವಿದ್ಯಾರ್ಥಿಗಳು ಗುರುಗಳ ಮಾರ್ಗದರ್ಶನದಂತೆ ನಿರಂತರ ಓದಿದರೆ ಮಾತ್ರ ಯಶಸ್ಸು ಕಾಣಲು ಸಾಧ್ಯವೆಂದರು.

ಗ್ರಾ.ಪಂ. ಮಾಜಿ ಅಧ್ಯಕ್ಷ ಪರಪ್ಪಾ ಪಾಲಭಾವಿ ಮಾತನಾಡಿ, ವಿದ್ಯೆ ಕಸಿಯಲಾಗದ ಸಂಪತ್ತು, ಸಾಧಿಸುವ ಛಲವಿದ್ದವರಿಗೆ ಯಾವುದೇ ಸಮಸ್ಯೆ ಅಡ್ಡಿಯಾಗದು, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಿ ಗೌರವಿಸುವುದರೊಂದಿಗೆ ಇತರ ಸಮುದಾಯಗಳಿಗೆ ಮಾದರಿಯಾಗಿದ್ದಾರೆಂದರು.

ಸಮಾಜದ ಮುಖ್ಯಸ್ಥ ಅಶೋಕ ಧಡೂತಿ ಪ್ರಾಸ್ತಾವಿಕ ಮಾತನಾಡಿದರು. ಸಮಾಜದ ಪ್ರಮುಖರಾದ ಮಲ್ಲಪ್ಪ ಭಾವಿಕಟ್ಟಿಲಕ್ಕಪ್ಪ ಚಮಕೇರಿ, ನೇಕಾರ ಹೋರಾಟ ಸಮೀತಿ ಮುಖ್ಯಸ್ಥ ಶಿವಲಿಂಗ ಟಿರಕಿ ಮಾತನಾಡಿದರು.

ಸಾಧು ಮಹಾರಾಜರ ಮಠದ ಜನಾರ್ಧನ ಮಹಾರಾಜರು ಸಾನ್ನಿಧ್ಯ ವಹಿಸಿದ್ದರು. ಸೇವಾ ಸಮಿತಿ ಅಧ್ಯಕ್ಷ ಚಂದ್ರಕಾಂತ ಜಾಡಗೌಡರ ಅಧ್ಯಕ್ಷತೆ ವಹಿಸಿದ್ದರು. ರಾಮಣ್ಣ ಮುಗಳಖೋಡ, ಅಣ್ಣಪ್ಪಗೌಡ ಪಾಟೀಲ ಇತರರಿದ್ದರು.

ಶೇ.90ಕ್ಕೂ ಅಧಿಕ ಅಂಕ ಪಡೆದ ದ್ವಿತೀಯ ಪಿಯುಸಿ, ಎಸ್‌ಎಸ್‌ಎಲ್‌ಸಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಐದು ಬಂಗಾರದ ಪದಕ ಪಡೆಯುವ ಮೂಲಕ ವಿಶ್ವವಿದ್ಯಾಲಯಕ್ಕೆ ಪ್ರಥಮ ಸ್ಥಾನ ಪಡೆದ ರೇಖಾ ಪರಪ್ಪ ದೊಡವಾಡರನ್ನು ಸತ್ಕರಿಸಿ ನಗದು ಧನಸಹಾಯ ನೀಡಿ ಪುರಸ್ಕರಿಸಲಾಯಿತು. ವಿಶೇಷ ಸಾಧನೆಗೈದ ಹಲವು ಪ್ರಮುಖರನ್ನು ಗೌರವಿಸಲಾಯಿತು.

ನಿವೃತ್ತ ಮುಖ್ಯೋಪಾದ್ಯಾಯ ಕಲ್ಲಪ್ಪ ವಿಜಾಪುರ, ಉಪನ್ಯಾಸಕ ಪ್ರವೀಣ ಮೈತ್ರಿ, ಶಿಕ್ಷಕ ಮಂಜುನಾಥ ಧಡೂತಿ ಕಾರ್ಯಕ್ರಮ ನಿರೂಪಿಸಿದರು. ಶಾಖಾಂಬರಿ ಕರಡಿ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net