ಬೆಂಗಳೂರಿನ ಆತ್ಮಜ್ಯೋತಿ ಸ್ವಧ್ಯಾಯ ಮಿಷನ್‌ನ ಸಂಪನ್ಮೂಲ ವ್ಯಕ್ತಿ ರೇಖಾ ಶಶಿಧರ್ ಮಾತನಾಡಿ, ಆರೋಗ್ಯ, ಸ್ವಚ್ಛತೆ ಕಾಪಾಡಿಕೊಂಡಲ್ಲಿ ಸಂತೋಷ, ಆನಂದ ಹೆಚ್ಚಾಗುತ್ತದೆ. ಶಾರೀರಿಕ, ಭೌತಿಕ, ಮಾನಸಿಕ ಹಾಗೂ ಆಧ್ಯಾತ್ಮಿಕವಾಗಿ ತೊಡಗಿಸಿಕೊಳ್ಳಬೇಕು. ಸ್ವಚ್ಛತೆ ಎಂದರೆ ದೇಹ ಶುದ್ಧಿ, ಚಿತ್ತಶುದ್ಧಿ ಬಗ್ಗೆ ಮಾರ್ಗದರ್ಶನ ನೀಡಿ, ಇವೆಲ್ಲವನ್ನು ಅನುಸರಿಸಿದಲ್ಲಿ ನಿಮ್ಮಲ್ಲಿ ಪ್ರಶಾಂತತೆ, ಲವಲವಿಕೆ ಮೂಡಲಿದೆ ಎಂದರು.