ಪಾರಂಪರಿಕ ವೈದ್ಯ ಪದ್ಧತಿ ಬೆಳೆಸಿ / DABASPETE

ನೆಲಮಂಗಲ ತಾಲೂಕಿನ ಶಿವಗಂಗೆಯ ಹೊನ್ನಮ್ಮದೇವಿ ಗವಿಮಠದಲ್ಲಿ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರವನ್ನು ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು. ಜಿ.ಮಹದೇವಯ್ಯ, ವೈದ್ಯರಾದ ಪ್ರೊ.ಹರೀಶ್​, ಡಿ.ರೂಪಾ, ರಾಷ್ಟ್ರೀಯ ಅಧ್ಯಕ್ಷ ಗೋಪಾಲಕೃಷ್ಣ, ಡಿ.ಜೆ.ಶಂಕರಪ್ಪ, ಬಿ.ರವಿಕುಮಾರ್​, ನೇರ್ಲಗೆ ಗುರುಸಿದ್ದಪ್ಪ ಇತರರು ಇದ್ದರು.
ನೆಲಮಂಗಲ ತಾಲೂಕಿನ ಶಿವಗಂಗೆಯ ಹೊನ್ನಮ್ಮದೇವಿ ಗವಿಮಠದಲ್ಲಿ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರವನ್ನು ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು. ಜಿ.ಮಹದೇವಯ್ಯ, ವೈದ್ಯರಾದ ಪ್ರೊ.ಹರೀಶ್​, ಡಿ.ರೂಪಾ, ರಾಷ್ಟ್ರೀಯ ಅಧ್ಯಕ್ಷ ಗೋಪಾಲಕೃಷ್ಣ, ಡಿ.ಜೆ.ಶಂಕರಪ್ಪ, ಬಿ.ರವಿಕುಮಾರ್​, ನೇರ್ಲಗೆ ಗುರುಸಿದ್ದಪ್ಪ ಇತರರು ಇದ್ದರು.
Published on
ದಾಬಸ್​ಪೇಟೆ : ಕ್ಷೀಣಿಸುತ್ತಿರುವ ಪಾರಂಪರಿಕ ವೈದ್ಯ ಪರಂಪರೆಯನ್ನು ಉಳಿಸಿ ಬೆಳೆಸುವತ್ತ ಸರ್ಕಾರ ಮತ್ತು ಜನತೆ ಹೆಚ್ಚಿನ ಆಸಕ್ತಿ ವಹಿಸಬೇಕಾಗಿದೆ ಎಂದು ಹೊನ್ನಮ್ಮದೇವಿ ಗವಿ ಮಠದ ಶ್ರೀ ರುದ್ರಮುನಿಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.
ನೆಲಮಂಗಲ ತಾಲೂಕು ಸೋಂಪುರ ಹೋಬಳಿ ಶಿವಗಂಗೆಯ ಹೊನ್ನಮ್ಮದೇವಿ ಗವಿಮಠದಲ್ಲಿ ಪಾರಂಪರಿಕ ವೈದ್ಯಪರಿಷತ್ತಿನಿಂದ ಹಮ್ಮಿಕೊಂಡಿದ್ದ ಬೆಳ್ಳಿ ಮಹೋತ್ಸವ ವರ್ಷಾಚರಣೆ, ವಿಭಾಗ ಮಟ್ಟದ ಗುರು ಶಿಷ್ಯರ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ಪ್ರಕೃತಿ ಅಪರೂಪದ ಸಸ್ಯಮೂಲಗಳನ್ನು ನೀಡಿದೆ. ಔಷಧ ಸಸ್ಯಗಳು ಮಾನವನ ಮತ್ತು ಪ್ರಾಣಿಗಳ ಆರೋಗ್ಯ, ರೋಗ ನಿವಾರಣೆಯಲ್ಲಿ ಮಹತ್ವದ ಪಾತ್ರವಹಿಸುತ್ತದೆ. ನಮ್ಮ ಪೂರ್ವಜರು ನಡೆಸಿಕೊಂಡು ಬಂದ ಆಯುರ್ವೇದ, ಸಿದ್ಧ ಯುನಾನಿ ಮತ್ತು ಜನಪದ ಚಿಕಿತ್ಸೆಯಲ್ಲಿ ಗಿಡಮೂಲಿಕೆಗಳನ್ನು ಆಹಾರವಾಗಿ ಬಳಸುವ ವಿದ್ಯೆ ಕಂಡುಕೊಂಡಿದ್ದರು. ಈ ಆಹಾರ ಪದ್ಧತಿಯನ್ನು ನಾವು ಅನುಸರಿಸಿಕೊಂಡು ಹೋಗಬೇಕು ಎಂದು ಹೇಳಿದರು.
ಸಸ್ಯ ಮೂಲಿಕೆ ಬಳಸುವ ಕಲೆಗಾರಿಕೆಯನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಉದ್ದೇಶದಿಂದ ಹಿರಿಯ ಅನುಭವಿಗಳಿಂದ ಮನುಷ್ಯನ ದೇಹಕ್ಕೆ ಬೇಕಾಗುವ ಕ್ಷಾರ, ಲೇಹ, ಸತ್ವದ ಪ್ರಮಾಣ ಮತ್ತು ತಯಾರಿಕೆ ಹಾಗೂ ಸಂಗ್ರಹಣೆ, ಯೋಗ, ಧ್ಯಾನ, ಪ್ರಾಣಾಯಾಮ ಸೇರಿ ಪರಿಸರದ ಔಷಧೀಯ ವಿಧಾನಗಳ ಕುರಿತು ಪ್ರಾಯೋಗಿಕ ಮಾರ್ಗದರ್ಶನದ ಕಾರ್ಯಕ್ಕೆ ಮುಂದಾಗಿರುವ ವೈದ್ಯ ಪರಿಷತ್​ನ ಕಾರ್ಯ ಶ್ಲಾನೀಯ ಎಂದರು.
ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ವಡ್ನಾಳ್​ ಜಗದೀಶ್​ ಮಾತನಾಡಿ, ಔಷಧ ಸಸ್ಯಗಳು ಜೀವನದ ಅಮೂಲ್ಯ ಸಂಪತ್ತು. ಅವುಗಳ ಸರಿಯಾದ ಬಳಕೆ, ಆರೋಗ್ಯಕರ ಜೀವನಕ್ಕೆ ಸಹಕಾರಿ. ಆದ್ದರಿಂದ ಔಷಧ ಸಸ್ಯಗಳನ್ನು ಸಂರಕ್ಷಿಸಿ ಅವುಗಳ ಬಗ್ಗೆ ಅರಿವು ಬೆಳೆಸುವುದು ಅಗತ್ಯ ಎಂದು ಹೇಳಿದರು. ಕಾರ್ಯಾಗಾರದಲ್ಲಿ ತುಮಕೂರು, ಬೆಂಗಳೂರು ದಕ್ಷಿಣ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪಾರಂಪರಿಕ ವೈದ್ಯರು ಭಾಗವಹಿಸಿದ್ದರು.
ಹಲವು ಉಪಯೋಗ : ಪ್ರಕೃತಿಯಲ್ಲಿ ದೊರೆಯುವ ಸುರಕ್ಷಿತ ಚಿಕಿತ್ಸೆ, ಕಡಿಮೆ ವೆಚ್ಚದಲ್ಲಿ ಆರೋಗ್ಯ ರಕ್ಷಣೆ, ಪರಿಸರ ಸ್ನೇಹಿ ಮತ್ತು ದೀರ್ಘಕಾಲೀನ ಉಪಯೋಗವು ಗ್ರಾಮೀಣ ಆರೋಗ್ಯ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಈ ವಿಚಾರಗಳನ್ನು ಎಲ್ಲ ಹಂತದಲ್ಲಿಯೂ ಪ್ರಚಾರ ಮಾಡಬೇಕು. ಗ್ರಾಮ ಪಂಚಾಯಿತಿಯಲ್ಲಿ ಜೀವ ವೈವಿದ್ಯ ಸಂರಂಕ್ಷಣೆ ಸಮಿತಿಯಲ್ಲಿ ಸದಸ್ಯರಾಗಿ ಅರಿವು ಮೂಡಿಸಿ ಎಂದು ಪಾರಂಪರಿಕ ವೈದ್ಯರಿಗೆ ಕರೆ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net