ಚಿತ್ತಾಪುರದ ಮಹಾದೇವಮ್ಮ ಬಿ.ಪಾಟೀಲ್ ಪಿಯು ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಸ್ವಾಗತ ಸಮಾರಂಭದಲ್ಲಿ ಡಾ.ಶಿವರಂಜನ್ ಸತ್ಯಂಪೇಟೆ, ನಾಗರೆಡ್ಡಿ ಪಾಟೀಲ್ ಕರದಾಳ, ಶಾಂತಕುಮಾರ ಮಳಖೇಡ, ತ್ರಿವೇಣಿ ಪಾಟೀಲ್, ಸೋಮಶೇಖರ ಕಲಶೆಟ್ಟಿ ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಡಾ.ಶಿವರಂಜನ್ ಸತ್ಯಂಪೇಟೆ ಕರೆ
ಚಿತ್ತಾಪುರದಲ್ಲಿ ಸ್ವಾಗತ ಸಮಾರಂಭ
ಚಿತ್ತಾಪುರ: ಸಮಯ ಪಾಲನೆ ಪ್ರತಿಯೊಬ್ಬರ ಜೀವನದಲ್ಲಿ ಅತಿ ಅಗತ್ಯವಾಗಿದ್ದು, ವಿದ್ಯಾರ್ಥಿಗಳು ಸಮಯದ ಸದುಪಯೋಗ ಪಡೆದುಕೊಂಡು ಸಾಧನೆ ಮಾಡಬೇಕು ಎಂದು ಕಾರ್ಯನಿರತ ಪತ್ರಕರ್ತರ ಸಂದ ಜಿಲ್ಲಾ ಉಪಾಧ್ಯಕ್ಷ ಡಾ.ಶಿವರಂಜನ್ ಸತ್ಯಂಪೇಟೆ ಅಭಿಪ್ರಾಯಪಟ್ಟರು.
ವಿಶ್ವಗುರು ಶಿಕ್ಷಣ ಸಂಸ್ಥೆಯ ಮಹಾದೇವಮ್ಮ ಬಿ. ಪಾಟೀಲ್ ಪಿಯು ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಸ್ವಾಗತ ಸಮಾರಂಭ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿ ಜೀವನವು ಬದುಕಿನ ಸುವರ್ಣ ಕಾಲವಾಗಿದೆ. ಮೊಬೈಲ್ ಹಾವಳಿ ಮಧ್ಯೆಯೂ ಪುಸ್ತಕ ಓದುವ, ಬರೆಯುವ ಪರಿಪಾಠ ಹಾಕಿಕೊಳ್ಳಬೇಕು. ಪುಸ್ತಕ ಓದಿದ ಮಾತ್ರಕ್ಕೆ ಯಶಸ್ಸು ನಿಮ್ಮದಾಗುವುದಿಲ್ಲ. ಅದಕ್ಕೆ ಪ್ರಾಮಾಣಿಕ ಪ್ರಯತ್ನಬೇಕು. ಶಿಕ್ಷಣ ಕೇವಲ ಅಂಕಗಳಿಕೆಗೆ ಸೀಮಿತ ಮಾಡಿಕೊಳ್ಳದೆ, ಮೌಲ್ಯ ವೃದ್ಧಿಯತ್ತ ಗಮನಹರಿಸಬೇಕು ಎಂದು ಸಲಹೆ ನೀಡಿದರು.
ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನ ಪರಿಷತ್ ತಾಲೂಕು ಅಧ್ಯಕ್ಷ ಶಾಂತಕುಮಾರ ಮಳಖೇಡ, ಸಂಸ್ಥೆ ಅಧ್ಯಕ್ಷ ನಾಗರೆಡ್ಡಿ ಪಾಟೀಲ ಕರದಾಳ, ಕಾರ್ಯದರ್ಶಿ ವಿಶ್ವಾರಾಧ್ಯ ಪಾಟೀಲ್ ಕರದಾಳ, ಪ್ರಾಚಾಯೆರ್ ತ್ರಿವೇಣಿ ಪಾಟೀಲ್, ಸೋಮಶೇಖರ ಕಲಶೆಟ್ಟಿ ಮಾತನಾಡಿದರು.
ಜ್ಯೋತಿ ಎಸ್, ಖಾಜಾ ಹುಸೇನ್, ಧರಣೇಂದ್ರ, ಅಖಿಲೇಶ ಇತರರಿದ್ದರು. ಶೈಲಜಾ ಮತ್ತು ಪ್ರೀತಿ ನಿರೂಪಣೆ ಮಾಡಿದರು.
"
ಸರಳತೆ, ಸತ್ಯ, ಸಹಾಯ-ಸಹಕಾರ, ಗೌರವ, ವಿಶ್ವಾಸವೇ ಜೀವನದ ಸೂತ್ರವಾಗಬೇಕು. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರ ಹೇಳಿಕೊಡುವ ಕಾರ್ಯ ಸಂಸ್ಥೆಯಿಂದ ನಿರಂತರವಾಗಿ ನಡೆಯುತ್ತಿದೆ.
— > ನಾಗರೆಡ್ಡಿ ಪಾಟೀಲ್ ಕರದಾಳ, ಅಧ್ಯಕ್ಷ, ವಿಶ್ವಗುರು ಶಿಕ್ಷಣ ಸಂಸ್ಥೆ