ದೇವರಹಿಪ್ಪರಗಿ ತಹಸೀಲ್ದಾರ್ ಕಚೇರಿಯಲ್ಲಿ ಭಯೋತ್ಪಾದನೆ ವಿರೋಧ ದಿನದ ಅಂಗವಾಗಿ ಪ್ರತಿಜ್ಞಾವಿಧಿ ಬೋಧಿಸಲಾಯಿತು. ತಹಸೀಲ್ದಾರ್ ನಿಂಗಣ್ಣ ಬಿರಾದಾರ, ಶಿರಸ್ತೇದಾರ ಸುರೇಶ ಮ್ಯಾಗೇರಿ, ಉಪ ತಹಸೀಲ್ದಾರ್ ಗಿರಿಜಾಬಾಯಿ ಸಜ್ಜನ, ಜಿ.ಪಿ. ಬಿರಾದಾರ ಮತ್ತಿತರರಿದ್ದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ತಹಸೀಲ್ದಾರ್ ನಿಂಗಣ್ಣ ಬಿರಾದಾರ ಹೇಳಿಕೆ
ಭಯೋತ್ಪಾದನೆ ವಿರೋಧಿ ದಿನದ ಪ್ರತಿಜ್ಞಾವಿಧಿ ಬೋಧನಾ ಕಾರ್ಯಕ್ರಮ
ದೇವರಹಿಪ್ಪರಗಿ : ಸಮಾಜದಲ್ಲಿ ಭಯೋತ್ಪಾದನೆ ಹಾಗೂ ಹಿಂಸಾಚಾರದ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಬೇಕಾಗಿದೆ. ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಹಾಗೂ ಏಕತೆ ಕಾಪಾಡುವ ನಿಟ್ಟಿನಲ್ಲಿ ಯುವಕರಲ್ಲಿ ಜಾಗತಿ ಮೂಡಿಸಿ ಸ್ವಸ್ಥ ಸಮಾಜ ನಿರ್ಮಾಣಕ್ಕೆ ನಾಂದಿ ಹಾಡಬೇಕೆಂದು ತಹಸೀಲ್ದಾರ್ ನಿಂಗಣ್ಣ ಬಿರಾದಾರ ಹೇಳಿದರು.
ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ನಡೆದ ಭಯೋತ್ಪಾದನೆ ವಿರೋಧಿ ದಿನದ ಪ್ರತಿಜ್ಞಾವಿಧಿ ಬೋಧನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭಾರತ ಜಗತ್ತಿನಲ್ಲಿ ಶ್ರೇಷ್ಠ ದೇಶವಾಗಲು ಭಯೋತ್ಪಾದನೆ ಮುಕ್ತಗೊಳಿಸಬೇಕು. ಯುವಕರಲ್ಲಿ ದೇಶಪ್ರೇಮ, ಸಂಸ್ಕಾರ, ಸಂಸ್ಕೃತಿ ಆಚಾರ ವಿಚಾರದ ತಿಳಿವಳಿಕೆ ನೀಡಿ ನಮ್ಮ ದೇಶ ನಮ್ಮ ಹೆಮ್ಮೆ ಎನ್ನುವಂತೆ ಬದುಕು ಸಾಗಿಸಬೇಕೆಂದು ಕರೆ ನೀಡಿದರು.
ಶಿರಸ್ತೇದಾರ ಸುರೇಶ ಮ್ಯಾಗೇರಿ ಕಚೇರಿಯ ಎಲ್ಲ ಸಿಬ್ಬಂದಿಗೆ ಭಯೋತ್ಪಾದನಾ ವಿರೋಧಿ ದಿನದ ಪ್ರತಿಜ್ಞಾವಿಧಿಯನ್ನು ಬೋಧಿಸಿದರು.
ಭಯೋತ್ಪಾದಕರ ದಾಳಿಗೆ 1991ರಲ್ಲಿ ಬಲಿಯಾದ ಮಾಜಿ ಪ್ರಧಾನಿ ರಾಜೀವ್‌ಗಾಂಧಿಯನ್ನು ಸ್ಮರಿಸಿದರು.