ಗುರುಗಳಿಗೆ ಗೌರವ ನೀಡುವ ಸಂಸ್ಕಾರ ಬೆಳೆಸಿಕೊಳ್ಳಿ

ಗುಳೇದಗುಡ್ಡದಲ್ಲಿ ಸೈಂಟ್ ಝೇವಿಯರ್ಸ್ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಹಳೆಯ ವಿದ್ಯಾರ್ಥಿಗಳಿಂದ ಹಮ್ಮಿಕೊಂಡಿದ್ದ ಗುರುವಂದನೆ ಕಾರ್ಯಕ್ರಮವನ್ನು ನಿವೃತ್ತ ಶಿಕ್ಷಕ ಎಸ್.ಎಸ್. ನಾರಾ ಉದ್ಘಾಟಿಸಿದರು. ಾದರ್ ಹ್ಯಾರಿ ರಾಬರ್ಟ್, ಶಾಲೆ ಮುಖ್ಯೋಪಾಧ್ಯಾಯ ಬಿ.ಆರ್.ದೊಡ್ಡಿಹಾಳ, ನಿವೃತ್ತ ಶಿಕ್ಷಕರಾದ ಎಸ್.ಎಸ್.ನಾರಾ, ಬಿ.ಎಂ. ಕೆಂಚಣ್ಣವರ, ಜೆ.ಆರ್.ಪಾಟೀಲ, ಸಿ.ಎ.ಮೇಟಿ, ಜಯಪ್ರಕಾಶ ಕಳ್ಳಿಗುಡ್ಡ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ನಿವೃತ್ತ ಶಿಕ್ಷಕ ಎಸ್.ಎಸ್. ನಾರಾ ಹೇಳಿಕೆ
  • ಗುರುವಂದನಾ ಕಾರ್ಯಕ್ರಮ
ಗುಳೇದಗುಡ್ಡ: ವಿದ್ಯಾರ್ಥಿಗಳು ಕಲಿಸಿದ ಗುರುಗಳನ್ನು ಮೀರಿಸಿ ಉನ್ನತ ಸ್ಥಾನ ತಲುಪಿದಾಗ ಮಾತ್ರ ಕಲಿಸಿದ ಗುರುಗಳಿಗೆ ತೃಪ್ತಿಯಾಗುತ್ತದೆ. ತಂದೆ ತಾಯಿಗಳಿಗೆ, ಗುರುಗಳಿಗೆ ಗೌರವ ಕೊಡುವಂತಹ ಸಂಸ್ಕಾರ, ಸಂಸ್ಕೃತಿಯನ್ನು ಮಕ್ಕಳಿಗೆ ಕಲಿಸಬೇಕು ಎಂದು ನಿವೃತ್ತ ಶಿಕ್ಷಕ ಎಸ್.ಎಸ್. ನಾರಾ ಹೇಳಿದರು.
ಪಟ್ಟಣದ ಸೈಂಟ್ ಝೇವಿಯರ್ಸ್ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ 1990-91 ಮತ್ತು 1996-97ನೇ ಸಾಲಿನ ವಿದ್ಯಾರ್ಥಿಗಳಿಂದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಗುರುವಂದನೆ ಸ್ವೀಕರಿಸಿ ಅವರು, ಮಾತನಾಡಿದರು.
ಗುರುಶಿಷ್ಯರ ಪರಂಪರೆ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಅತ್ಯಂತ ಮಹತ್ವದ್ದಾಗಿದೆ. ನೀವು ಕಲಿತು ಎಷ್ಟೇ ದೂರ ಹೋದರೂ, ಎಷ್ಟೇ ದೊಡ್ಡ ವ್ಯಕ್ತಿಗಳಾದರೂ ಗುರುಶಿಷ್ಯರ ಸಂಬಂಧ ಹೀಗೆ ಮುಂದುರಿಯಬೇಕು ಎಂದರು.
ಶಾಲೆಯ ಸಂಚಾಲಕ ಫಾದರ್ ಹ್ಯಾರಿ ರಾಬರ್ಟ್ ಮಾತನಾಡಿ, ಹಿಂದೆ ವಿದ್ಯಾರ್ಥಿಗಳಾಗಿದ್ದ ನೀವು ಇಂದು ಒಬ್ಬ ಜವಾಬ್ದಾರಿಯುತ ವ್ಯಕ್ತಿಗಳಾಗಿ ಹಿಂದಿನ ಆ ಶಾಲಾದಿನಗಳನ್ನು ನೆನಪಿಸಿಕೊಂಡು ಮತ್ತೇ ಎಲ್ಲರೂ ಒಟ್ಟಾಗಿ ಸೇರಿ, ಅಕ್ಷರ ಕಲಿಸಿದ ಜೀವನದ ದಾರಿ ತೋರಿಸಿದ ಶಿಕ್ಷಕರನ್ನು ಗೌರವಿಸಿ, ಗುರುವಂದನೆ ಅರ್ಪಿಸುತ್ತಿರುವುದು ಶ್ಲಾಘನೀಯ ಎಂದರು.
ಫಾದರ್ ಹ್ಯಾರಿ ರಾಬರ್ಟ್, ಶಾಲೆ ಮುಖ್ಯೋಪಾಧ್ಯಾಯ ಬಿ.ಆರ್.ದೊಡ್ಡಿಹಾಳ, ನಿವೃತ್ತ ಶಿಕ್ಷಕರಾದ ಎಸ್.ಎಸ್. ನಾರಾ, ಬಿ.ಎಂ. ಕೆಂಚಣ್ಣವರ, ಜೆ.ಆರ್. ಪಾಟೀಲ, ಸಿ.ಎ. ಮೇಟಿ, ಜಯಪ್ರಕಾಶ ಕಳ್ಳಿಗುಡ್ಡ, ಶಾಲೆಯ ಸಿಸ್ಟರ್ ತೇರೆಜಾ, ಸಿಸ್ಟರ್ ವಿದ್ಯಾ, ಮನೋಹರ ಪುಟಾಣಿಕರ, ಶಿವಾನಂದ ಆಲೂರ, ಹುಚ್ಚೇಶ ದೊಡಮನಿ, ಪ್ರಸನ್ ಭಾವಿಕಟ್ಟಿ, ಮಹೇಶ ಅಲದಿ, ಸೋಮನಾಥ ತಾಂಡೂರ, ದೇವೇಂದ್ರಪ್ಪ ಕೆರೂರ, ಸಂಗನಬಸು ರೊಡಗೈ, ಡೆನಿಸ್ ಜೋಸಫ್, ಮಹಾಂತೇಶ ಗುಡದಾರಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net