ಮಾಹಿತಿ ಸಂವಹನ ತಂತ್ರಜ್ಞಾನ ಹಾಗೂ ಸಾಂಸ್ಥಿಕ ಸಾಮರ್ಥ್ಯ ವೃದ್ದಿಗಾಗಿ ಕ್ಯೂಬಾ ಸಚಿವರ ನಿಯೋಗದಿಂದ ಸಚಿವ ಪ್ರಿಯಾಂಕ್ ಖರ್ಗೆ ಭೇಟಿ,

photo
photo
Published on
ಕಲಬುರಗಿ: ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಹಾಗೂ ಉದಯೋನ್ಮುಖ ತಂತ್ರಜ್ಞಾನಗಳು, ಕೌಶಲ್ಯ ಹಾಗೂ ಸಾಂಸ್ಥಿಕ ಸಾಮರ್ಥ್ಯ ವೃದ್ಧಿಯಲ್ಲಿ ಪ್ರಬಲ ಸಹಯೋಗವನ್ನು ನಿರ್ಮಿಸುವ ಉದ್ದೇಶದಿಂದ ಕ್ಯೂಬಾದ ಸಂವಹನ ಸಚಿವೆ ಶ್ರೀಮತಿ ಮೈರಾ ಅರೆವಿಚ್ ಮರಿನ್ ಅವರ ನೇತೃತ್ವದ ನಿಯೋಗ ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿತು.
ಭಾರತದ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಮತ್ತು ಡಿಜಿಟಲ್ ಸಾರ್ವಜನಿಕ ಸರಕುಗಳು ಹಾಗೂ ಆಧಾರ್ ಮತ್ತು ಡಿಜಿಲಾಕರ್‌ನಂತಹ ಪ್ಲಾಟ್‌ಪಾರ್ಮ್‌ಗಳನ್ನು ಅನುಷ್ಠಾನ, ಆಡಳಿತ ಮತ್ತು ಪ್ರಮಾಣದಲ್ಲಿನ ನಮ್ಮ ಅನುಭವವನ್ನು ಆಧರಿಸಿ, ಕ್ಯೂಬಾದ ವ್ಯವಸ್ಥೆಗೆ ಹೇಗೆ ಅಳವಡಿಸಿಕೊಳ್ಳಬಹುದು ಎಂಬುದರ ಕುರಿತು ನಾವು ಚರ್ಚಿಸಿದ್ದೇವೆ ಎಂದು ಸಚಿವರು ಹೇಳಿದ್ದಾರೆ.
ಕರ್ನಾಟಕದ ಗ್ಲೋಬಲ್ ಇನ್ನೋವೇಶನ್ ಅಲೈಯನ್ಸ್ ಮೂಲಕ ತನ್ನ ಸ್ಟಾರ್ಟ್‌ಅಪ್‌ಗಳಿಗೆ ಮಾರುಕಟ್ಟೆ ಪ್ರವೇಶವನ್ನು ಒದಗಿಸುವುದರೊಂದಿಗೆ ರಚನಾತ್ಮಕ ಸಹಯೋಗ ಮತ್ತು ವಿನಿಮಯಕ್ಕಾಗಿ ಮಾರ್ಗಗಳನ್ನು ತೆರೆಯುವ ಬಗ್ಗೆ ನಿಯೋಗವು ಆಸಕ್ತಿ ತೋರಿಸಿದೆ ಎಂದು ಸಚಿವ ಖರ್ಗೆ ಹೇಳಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net