ಸಿಎಸ್‌ಆರ್ ನಿಧಿ ಪ್ರಾಥಮಿಕ ಶಿಕ್ಷಣಕ್ಕೆ ಬಳಕೆಯಾಗಲಿ; ಸಿಎಂ ಡಿ.ಕೆ.ಶಿವಕುಮಾರ್ ತಾಕೀತು

ಎಫ್‌ಕೆಸಿಸಿಐ ಆಯೋಜಿಸಿದ್ದ ಜಾಗತಿಕ ಸಿಎಸ್‌ಆರ್ ಮತ್ತು ಸುಸ್ಥಿರ ಅಭಿವೃದ್ಧಿ ಶೃಂಗಸಭೆಯನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉದ್ಘಾಟಿಸಿದರು. ಎಫ್​ಕೆಸಿಸಿಐ ಅಧ್ಯಕ್ಷೆ ಉಮಾರೆಡ್ಡಿ, ವಿವಿಧ ದೇಶಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.
ಎಫ್‌ಕೆಸಿಸಿಐ ಆಯೋಜಿಸಿದ್ದ ಜಾಗತಿಕ ಸಿಎಸ್‌ಆರ್ ಮತ್ತು ಸುಸ್ಥಿರ ಅಭಿವೃದ್ಧಿ ಶೃಂಗಸಭೆಯನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉದ್ಘಾಟಿಸಿದರು. ಎಫ್​ಕೆಸಿಸಿಐ ಅಧ್ಯಕ್ಷೆ ಉಮಾರೆಡ್ಡಿ, ವಿವಿಧ ದೇಶಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಿಎಸ್‌ಆರ್ ನಿಧಿ ಪ್ರಾಥಮಿಕ ಶಿಕ್ಷಣಕ್ಕೆ ಬಳಕೆಯಾಗಲಿ
  • ಉದ್ಯಮಿಗಳಿಗೆ ಸಿಎಂ ಡಿ.ಕೆ.ಶಿವಕುಮಾರ್ ತಾಕೀತು
  • ಎಪ್​ಕೆಸಿಸಿಐನಿಂದ ಜಾಗತಿಕ ಸಿಎಸ್​​ಆರ್ ನಿಧಿ ಸುಸ್ಥಿರ ಬಳಕೆ ಶೃಂಗ ಸಭೆ

ಬೆಂಗಳೂರು:ರಾಜ್ಯದಲ್ಲಿಸುಮಾರು 10 ಸಾವಿರಕೋಟಿ ಸಿಎಸ್‌ಆರ್ ನಿಧಿ ಇದ್ದು,ಇದರ ಪ್ರತಿಯೊಂದುಪೈಸೆಯು ಗ್ರಾಮೀಣ ಭಾಗದ ಪ್ರಾಥಮಿಕಶಿಕ್ಷಣಕ್ಕೆ ವಿನಿಯೋಗವಾಗಬೇಕುಎಂದು ಸಿಎಂ ಡಿ.ಕೆ.ಶಿವಕುಮಾರ್ತಾಕೀತು ಮಾಡಿದ್ದಾರೆ.

ಕೆ.ಜಿ.ರಸ್ತೆಯಲ್ಲಿರುವಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾಮಹಾಸಂಸ್ಥೆ (ಎಫ್‌ಕೆಸಿಸಿಐ)ಗುರುವಾರಆಯೋಜಿಸಿದ್ದ ಜಾಗತಿಕ ಸಿಎಸ್‌ಆರ್ಮತ್ತು ಸುಸ್ಥಿರ ಅಭಿವೃದ್ಧಿಶೃಂಗಸಭೆಯನ್ನು ಉದ್ಘಾಟಿಸಿಮಾತನಾಡಿದರು.

ಸಿಎಸ್‌ಆರ್ನಿಧಿಯನ್ನು ಕೆಲವರು ಸಮರ್ಪಕವಾಗಿಬಳಸುತ್ತಿದ್ದಾರೆ.ಆದರೆ ಶೇ.50ರಷ್ಟುಉದ್ಯಮಿಗಳು ಸಿಎಸ್‌ಆರ್ ನಿಧಿದುರುಪಯೋಗ ಮಾಡುತ್ತಿದ್ದಾರೆ.ಹೀಗಾಗಿ ಪ್ರತ್ಯೇಕಅಧಿಕಾರಿಗಳ ತಂಡ ನೇಮಿಸಿ ನಿಧಿಯನ್ನುಎಲ್ಲೆಲ್ಲಿ ಬಳಸಲಾಗುತ್ತಿದೆಎಂದು ಪರಿಶೀಲನೆ ಮಾಡಲಾಗುವುದು.ಗ್ರಾಮೀಣ ಭಾಗದಮಕ್ಕಳಿಗೆ ನಗರ ಪ್ರದೇಶದಂತೆಗುಣಮಟ್ಟದ ಶಿಕ್ಷಣ ಸಿಗಬೇಕು.ಹೀಗಾಗಿ ನಾವುನೀತಿ ರೂಪಿಸುತ್ತಿದ್ದು,ಎಲ್ಲರೂ ಸಿಎಸ್‌ಆರ್ನಿಧಿಯನ್ನು ಪ್ರಾಥಮಿಕ ಶಿಕ್ಷಣಕ್ಕೆವಿನಿಯೋಗಿಸಬೇಕು.ಸಿಎಸ್‌ಆರ್ನಿಧಿಯಲ್ಲಿ ಶಾಲೆಗಳನ್ನು ಗ್ರಾಮೀಣಭಾಗದಲ್ಲಿ ನಿರ್ಮಾಣ ಮಾಡಬೇಕು.ನಮ್ಮ ಸರ್ಕಾರರಾಜ್ಯದಲ್ಲಿ 2ಸಾವಿರ ಜಾಗಗಳನ್ನುಗುರುತಿಸಿದ್ದು,ಪ್ರತಿ ಕಾರ್ಪೊರೇಟ್ಸಂಸ್ಥೆ ಈ ಜಾಗಗಳಲ್ಲಿ ಅತ್ಯುತ್ತಮಮೂಲಸೌಕರ್ಯವಿರುವ ಶಾಲೆಗಳನ್ನುನಿರ್ಮಾಣ ಮಾಡಬೇಕು.

ಸರ್ಕಾರಿಶಾಲೆಗಳನ್ನು ನಗರದ ಖಾಸಗಿ ಶಾಲೆಗಳುದತ್ತು ಪಡೆಯಬೇಕು,ಪಡೆಯದಿದ್ದರೆಆ ಶಾಲೆಗಳಿಗ ಶುಲ್ಕಕ್ಕೆ ಮಿತಿಹಾಕಲಾಗುವುದು.ನಗರ ಪ್ರದೇಶಗಳಲ್ಲಿ50 ಸಾವಿರಕ್ಕಿಂತಹೆಚ್ಚು ಶುಲ್ಕ ಪಡೆಯುತ್ತಿರುವಶಾಲೆಗಳು ಗ್ರಾಮೀಣ ಭಾಗದ ಸರ್ಕಾರಿಶಾಲೆಗಳನ್ನು ಕಡ್ಡಾಯವಾಗಿ ದತ್ತುಪಡೆಯಬೇಕು.ಸಿಎಸ್‌ಆರ್ನಿಧಿಯನ್ನು ಮೊದಲು ಪ್ರಾಥಮಿಕಶಿಕ್ಷಣಕ್ಕೆ ವಿನಿಯೋಗಿಸಿ,ನಂತರ ಆರೋಗ್ಯಕ್ಷೇತ್ರದತ್ತ ಗಮನಹರಿಸಬಹುದು.ನಾವು ಈ ವಿಚಾರವಾಗಿನೀತಿ ರೂಪಿಸಿ,ಎಲ್ಲಾ ಕೈಗಾರಿಕೋದ್ಯಮಿಗಳಜೊತೆ ಚರ್ಚಿಸುವುದಾಗಿ ಸಿಎಂತಿಳಿಸಿದರು.ಕಾರ್ಯಕ್ರಮದಲ್ಲಿಎಫ್‌ಕೆಸಿಸಿಐ ಅಧ್ಯಕ್ಷೆ ಉಮಾರೆಡ್ಡಿ, ವಿವಿಧದೇಶಗಳ ಪ್ರತಿನಿಧಿಗಳು,ಪಾಲ್ಗೊಂಡಿದ್ದರು.

ರಾಜ್ಯದಪ್ರಗತಿಯಲ್ಲಿ ಎಫ್‌ಕೆಸಿಸಿಐಕೊಡುಗೆ

ಎಫ್‌ಕೆಸಿಸಿಐಮಹಾರಾಜರ ಕಾಲದಿಂದ ಇಂದಿನವರೆಗೂಅತ್ಯುತ್ತಮ ಕೆಲಸ ಮಾಡುತ್ತಿದೆ.ಕರ್ನಾಟಕ ಹಾಗೂಭಾರತದ ಪ್ರಗತಿಗೆ ತನ್ನದೇ ಆದಕೊಡುಗೆ ನೀಡಿದೆ.ಪ್ರತಿ ಕ್ಷೇತ್ರದಲ್ಲೂತನ್ನ ಸೇವೆ ಸಲ್ಲಿಸಿದ್ದು,ಕರ್ನಾಟಕದ ಯಶಸ್ಸುಈ ಸಂಸ್ಥೆಯ ಜೊತೆಯಲ್ಲಿದೆ.ರಾಜ್ಯದಲ್ಲಿರುವಮಾನವ ಸಂಪನ್ಮೂಲ,ಇಲ್ಲಿನ ಶಿಕ್ಷಣದಗುಣಮಟ್ಟ ದೇಶದ ಬೇರೆಲ್ಲೂ ಇಲ್ಲ. ಕ್ಯಾಲಿಫೋರ್ನಿಯಾದಲ್ಲಿರುವ13 ಲಕ್ಷಇಂಜಿನಿಯರ್‌ಗಳಲ್ಲಿ 8ಲಕ್ಷ ಜನಭಾರತದವರಾಗಿದ್ದು,ಅದರಲ್ಲಿ 6ಲಕ್ಷ ಕರ್ನಾಟಕದವರು.ವೈದ್ಯಕೀಯಕ್ಷೇತ್ರದಲ್ಲೂ ಕರ್ನಾಟಕ ಮುಂದಿದೆಎಂದು ಸಿಎಂ ವಿವರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net