ಸಾಹಿತ್ಯದಿಂದಲೇ ಸಂಸ್ಕಾರ ಸಂಸತಿ ಸೃಷ್ಟಿ

ಕಲಬುರಗಿಯಲ್ಲಿ ವಿಶ್ವಜ್ಯೋತಿ ಪ್ರತಿಷ್ಠಾನ ಭಾನುವಾರ ಆಯೋಜಿಸಿದ್ದ ಸಮಾರಂಭದಲ್ಲಿ ಅನೇಕ ಸಾಧಕರಿಗೆ ಸೇವಾಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ಶ್ರೀ ವೀರಮಹಾಂತ ಶಿವಾಚಾರ್ಯ, ಡಾ.ವಾಸುದೇವ ಸೇಡಂ, ವಿಜಯಕುಮಾರ ತೇಗಲತಿಪ್ಪಿ, ಜಗನ್ನಾಥ ತರನಳ್ಳಿ, ಶಿವರಾಜ ಅಂಡಗಿ, ಧರ್ಮಣ್ಣ ಧನ್ನಿ, ಕಲ್ಯಾಣಕುಮಾರ ಶೀಲವಂತ ಇತರರಿದ್ದರು.
ಕಲಬುರಗಿಯಲ್ಲಿ ವಿಶ್ವಜ್ಯೋತಿ ಪ್ರತಿಷ್ಠಾನ ಭಾನುವಾರ ಆಯೋಜಿಸಿದ್ದ ಸಮಾರಂಭದಲ್ಲಿ ಅನೇಕ ಸಾಧಕರಿಗೆ ಸೇವಾಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ಶ್ರೀ ವೀರಮಹಾಂತ ಶಿವಾಚಾರ್ಯ, ಡಾ.ವಾಸುದೇವ ಸೇಡಂ, ವಿಜಯಕುಮಾರ ತೇಗಲತಿಪ್ಪಿ, ಜಗನ್ನಾಥ ತರನಳ್ಳಿ, ಶಿವರಾಜ ಅಂಡಗಿ, ಧರ್ಮಣ್ಣ ಧನ್ನಿ, ಕಲ್ಯಾಣಕುಮಾರ ಶೀಲವಂತ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶ್ರೀ ವೀರಮಹಾಂತ ಶಿವಾಚಾರ್ಯ ಅನಿಸಿಕೆ
  • ವಿಶ್ವಜ್ಯೋತಿ ಪ್ರತಿಷ್ಠಾನದಿಂದ ಸೇವಾಶ್ರೀ ಪ್ರಶಸ್ತಿ ಪ್ರದಾನ
ಕಲಬುರಗಿ: ನಮ್ಮ ಬದುಕಿಗೆ ಬೇಕಾಗುವ ಸಂಸ್ಕಾರ ಮತ್ತು ಸಂಸತಿ ಸಾಹಿತ್ಯದಿಂದಲೇ ಸೃಷ್ಟಿ ಆಗಬಲ್ಲವು ಎಂದು ಚಿನ್ಮಯಗಿರಿ ಮಹಾಂತೇಶ್ವರ ಮಠದ ಶ್ರೀ ವೀರಮಹಾಂತ ಶಿವಾಚಾರ್ಯ ನುಡಿದರು.
ವಿಶ್ವಜ್ಯೋತಿ ಪ್ರತಿಷ್ಠಾನದಿಂದ ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ಭಾನುವಾರ ಆಯೋಜಿಸಿದ್ದ ನೆಲದೊಲವಿನ ಝೇಂಕಾರದ ಸಂಸತಿ ಸಡಗರ&2026 ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ನಾಡಿನ ಕಲೆ, ಸಾಹಿತ್ಯ ಮತ್ತು ಸಂಗೀತ ೇತ್ರ ಉಳಿದು ಬೆಳೆಯಬೇಕಾದರೆ ನಮ್ಮಲ್ಲಿನ ವಚನ, ತತ್ವಪದ ಹಾಗೂ ಜನಪದ ಸಾಹಿತ್ಯವೇ ಕಾರಣ. ಈ ದಿಸೆಯಲ್ಲಿ ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಅವರ ಕ್ರಿಯಾಶೀಲ ಚಟುವಟಿಕೆಗಳು ಸ್ಫೂರ್ತಿ ನೀಡುತ್ತಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಗುಲ್ಬರ್ಗ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ.ವಾಸುದೇವ ಸೇಡಂ ಮಾತನಾಡಿ, ಕನ್ನಡ ಸಾಹಿತ್ಯದ ಮೂಲಬೇರು ವಚನ, ಜನಪದ, ತತ್ವಪದ. ಇವುಗಳ ಶ್ರೀಮಂತಿಕೆಗೆ ಸಾಹಿತ್ಯ ಪರಿಷತ್​ ನಿರಂತರ ಶ್ರಮಿಸುತ್ತಿದೆ. ಕಲ್ಯಾಣ ಕರ್ನಾಟಕ ಭಾಗಕ್ಕೆ ಉದ್ಯೋಗದಲ್ಲಿ ಅನ್ಯಾಯವಾಗುತ್ತಿದೆ. ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಸರ್ಕಾರ ಮುಂದಾಗಬೇಕು. ಆಗಲೇ ಇಲ್ಲಿಯ ಭಾಷೆ, ಸಂಸತಿ ಇಮ್ಮಡಿಗೊಳ್ಳುತ್ತವೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪ್ರತಿಷ್ಠಾನದ ಸಂಸ್ಥಾಪಕರೂ ಆದ ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಮಾತನಾಡಿ, ಇಂದಿನ ಮೊಬೈಲ್​, ಕಂಪ್ಯೂಟರ್​ಗಳಂತಹ ಆಧುನಿಕ ತಂತ್ರಜ್ಞಾನ ಹಾವಳಿಯಿಂದಾಗಿ ಸಂಸ್ಕಾರ ಮತ್ತು ಸಂಸತಿ ಮರೆಯಾಗುತ್ತಿದೆ. ಹೀಗಾಗಿ ಹೊಸ ಪೀಳಿಗೆಗೆ ಸಂಸ್ಕಾರದ ಬಗ್ಗೆ ಪಾಠವಾಗಬೇಕಿದೆ ಎಂದರು.
ಪಾಲಕರಾದ ನಾವೆಲ್ಲರೂ ಮಕ್ಕಳಿಗೆ ಸಂಸ್ಕಾರ, ಸಂಸತಿ ಬಗ್ಗೆ ತಿಳಿಹೇಳಬೇಕಿದೆ. ಯುವ ಪೀಳಿಗೆಯಲ್ಲಿ ಜ್ಞಾನ ಸಂಪತ್ತಿಗೆ ಯಾವುದೇ ಕೊರತೆ ಇಲ್ಲ. ಆದರೆ ಸದುಪಯೋಗ ಮಾಡಿಕೊಳ್ಳಬೇಕಾದ ಅಗತ್ಯವನ್ನು ಮನಗಂಡು ಪ್ರತಿಷ್ಠಾನ ಮತ್ತು ಕನ್ನಡ ಸಾಹಿತ್ಯ ಪರಿಷತ್​ ಉತ್ತಮ ಕಾರ್ಯಕ್ರಮಗಳನ್ನು ರೂಪಿಸುತ್ತಿವೆ ಎಂದು ತಿಳಿಸಿದರು.
ಕನ್ನಡ ವಿದ್ವಾಂಸ ಡಾ.ಜಗನ್ನಾಥ ತರನಳ್ಳಿ ಸೇಡಂ, ಗುರೂಜಿ ಪದವಿ ಮಹಾವಿದ್ಯಾಲಯ ಅಧ್ಯಕ್ಷ ಕಲ್ಯಾಣಕುಮಾರ ಶೀಲವಂತ, ಗುಲ್ಬರ್ಗ ವಿವಿ ಸಿಂಡಿಕೇಟ್​ ಸದಸ್ಯ ಮಲ್ಲಣ್ಣ ಮಡಿವಾಳ, ಜಿಲ್ಲಾ ಕಸಾಪ ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ, ಧರ್ಮಣ್ಣ ಧನ್ನಿ, ಕೋಶಾಧ್ಯಕ್ಷ ಶರಣರಾಜ ಛಪ್ಪರಬಂದಿ, ಸಿದ್ಧಲಿಂಗ ಬಾಳಿ ಮಾತನಾಡಿದರು.
ಪ್ರಮುಖರಾದ ದಿನೇಶ ಮದಕರಿ, ರಾಜೇಂದ್ರ ಮಾಡಬೂಳ, ಗಣೇಶ ಚಿನ್ನಾಕಾರ, ಅಮೃತ ಪಾಟೀಲ ಇತರರಿದ್ದರು. ಜಿಲ್ಲೆಯ ವಿವಿಧ ೇತ್ರದ 46 ಸಾಧಕರಿಗೆ ಸೇವಾಶ್ರೀ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.
"

ವಿಜಯಕುಮಾರ ತೇಗಲತಿಪ್ಪಿ ಸಾರಥ್ಯದ ವಿಶ್ವಜ್ಯೋತಿ ಪ್ರತಿಷ್ಠಾನ ಜಿಲ್ಲೆಯ ಅನೇಕ ಪ್ರತಿಭಾವಂತರಿಗೆ ಧ್ವನಿ ಮತ್ತು ಶಕ್ತಿ ನೀಡಿದೆ. ವಿವಿಧ ಸಾಹಿತ್ಯ, ಸಾಂಸತಿಕ ಸಮ್ಮೇಳನ ನಡೆಸುವ ಮೂಲಕ ಉತ್ತಮ ವಾತಾವರಣಕ್ಕೆ ಮುನ್ನುಡಿ ಬರೆದಿದೆ.

> ಶ್ರೀ ವೀರಮಹಾಂತ ಶಿವಾಚಾರ್ಯ .

ಮಹಾಂತೇಶ್ವರ ಮಠ ಚಿನ್ಮಯಗಿರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net