ಉದ್ಯೋಗನಗರಿ ಸೃಷ್ಠಿ ನಮ್ಮ ಸಂಕಲ್ಪ

Creating a job city is our resolve.
Creating a job city is our resolve.
Published on
ಪಟ್ಟನಾಯಕನಹಳ್ಳಿ: ಅತಿವೇಗವಾಗಿ ಬೆಳೆಯುತ್ತಿರುವ ಶಿರಾವನ್ನು ಉದ್ಯೋಗನಗರಿಯಾಗಿ ಮಾಡಬೇಕೆಂಬ ಸಂಕಲ್ಪ ನಮ್ಮದಾಗಿದ್ದು, ನಗರದಲ್ಲಿ ಕೈಗಾರಿಕಾ ವಲಯ ಅಭಿವೃದ್ಧಿ ಕಾಣಬೇಕು, ಹೆಚ್ಚು ಕೈಗಾರಿಕೆಗಳು ಸ್ಥಾಪನೆಯಾಗಬೇಕೆಂಬ ಉದ್ದೇಶದಿಂದ ಕೈಗಾರಿಕಾ ವಲಯಕ್ಕೆ ಭೂಮಿ ನೀಡಲಾಗಿದೆ ಎಂದು ಶಾಸಕ ಟಿ.ಬಿ.ಜಯಚಂದ್ರ ಹೇಳಿದರು.
ಶಿರಾ ತಾಲೂಕು ಪಟ್ಟನಾಯಕನಹಳ್ಳಿಯಲ್ಲಿ ಶನಿವಾರ ಶಾಯಿ ಎಕ್ಸ್​ಪೋರ್ಟ್​ ಕಂಪನಿಯಿಂದ 1 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಕರ್ನಾಟಕ ಪಬ್ಲಿಕ್​ ಶಾಲೆಯ ನೂತನ ಕೊಠಡಿಗಳನ್ನು ಉದ್ಘಾಟಿಸಿ ಮಾತನಾಡಿ, ನಗರದಲ್ಲಿ ಉತ್ತಮ ಶಿಕ್ಷಣ ಒದಗಿಸಿ ಯುವ ಜನತೆಗೆ ಉದ್ಯೋಗ ಒದಗಿಸಲು ಪಾಲಿಟೆಕ್ನಿಕ್​ ಕಾಲೇಜು ಆರಂಭಿಸಲಾಗಿದ್ದು, ಉದ್ಯೋಗ ಆಧಾರಿತ ಶಿಕ್ಷಣವನ್ನು ಒದಗಿಸಲಾಗುತ್ತಿದೆ ಎಂದರು.
ಶಿರಾದಲ್ಲಿ ಕೈಗಾರಿಕಾ ಪ್ರದೇಶಕ್ಕಾಗಿ 1300 ಎಕರೆ ಭೂಮಿ ನೀಡಲಾಗಿದ್ದು, ಕೈಗಾರಿಕೆಗಳು ಆರಂಭವಾದಲ್ಲಿ ಇಲ್ಲಿನ ನಿರುದ್ಯೋಗ ಸಮಸ್ಯೆ ಬಗೆಹರಿಯಲಿದೆ. ಮಾಜಿ ಪ್ರಧಾನಿ ಡಾ.ಮನಮೋಹನ್​ ಸಿಂಗ್​ ಅವರ ಅಧಿಕಾರ ಅವಧಿಯಲ್ಲಿ ಕೈಗಾರಿಕಾ ಕಾಯ್ದೆ ಜಾರಿಗೊಳಿಸಿರುವುದರಿಂದಾಗಿ ಕೈಗಾರಿಕೆಗಳಿಂದ ಬರುವ ಲಾಭಾಂಶದಲ್ಲಿ ಸಾಮಾಜಿಕ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಈ ನಿಟ್ಟಿನಲ್ಲಿ ಶಾಯಿ ಎಕ್ಸ್​ಪೋರ್ಟ್​ ಕಂಪನಿಯಿಂದ ಶಾಲೆಗೆ 1 ಕೋಟಿ ರೂ. ವೆಚ್ಚದಲ್ಲಿ ಕೊಠಡಿ ನಿರ್ಮಾಣ ಮಾಡಿರುವುದು ಸಂತಸ ತಂದಿದೆ ಎಂದರು.
ಶಾಯಿ ಎಕ್ಸ್​ಪೋರ್ಟ್​ ಕಂಪನಿಯ ಅರ್ಚನಾ ಮಾತನಾಡಿ, ದೇಶದ ಶಕ್ತಿಯೇ ಶಿಕ್ಷಣ, ಈ ನಿಟ್ಟಿನಲ್ಲಿ ನಾವು ಶೈಕ್ಷಣಿಕ ಸೌಲಭ್ಯ ಕಲ್ಪಿಸಬೇಕೆಂಬ ಗುರಿಯಿಂದ ಕಂಪನಿಯ ಲಾಭಾಂಶದಲ್ಲಿ ಶೈಕ್ಷಣಿಕ ಸೇವೆ ನೀಡಲಾಗುತ್ತಿದೆ. ಇದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ನಿಷ್ಠೆ, ಪ್ರಾಮಾಣಿಕತೆಯಿಂದ ವಿದ್ಯೆ ಕಲಿತರೆ ಯಶಸ್ಸು ಕಾಣಬಹುದು ಎಂದರು.
ಸೂಡ ಅಧ್ಯಕ್ಷ ಪಿ.ಆರ್​.ಮಂಜುನಾಥ್​, ತಾಪಂ ಇಒ ಆರ್​.ಹರೀಶ್​, ಬಿಇಒ ಕೃಷ್ಣಪ್ಪ, ನಾದೂರು ಗ್ರಾಪಂ ಮಾಜಿ ಅಧ್ಯಕ್ಷೆ ತುಳಸಿ, ತಾಪಂ ಮಾಜಿ ಸದಸ್ಯ ಕೆ.ಎಂ.ಶ್ರೀನಿವಾಸ, ಕೆಪಿಎಸ್​ ಶಾಲೆಯ ಉಪಪ್ರಾಂಶುಪಾಲ ಗಂಗಾಧರ, ಎಸ್​ಡಿಎಂಸಿ ಅಧ್ಯಕ್ಷ ಮಂಜುನಾಥ್​, ಗ್ರಾಪಂ ಮಾಜಿ ಸದಸ್ಯ ನಾಗೇಶ್​, ಮುಖ್ಯಶಿಕ್ಷಕಿ ಮಂಜುಳಾ, ನಿವೃತ್ತ ಶಿಕ್ಷಕ ಓಂಕಾರಪ್ಪ, ಶಾಯಿ ಎಕ್ಸ್​ಪೋರ್ಟ್​ ಕಂಪನಿಯ ನಾಗಯ್ಯ, ಮನು, ಧನಂಜಯ, ಬಿಆರ್​ಸಿ ಭೋಗೆಂದ್ರನಾಯ್ಕ, ಶ್ರೀಧರ್​, ಭೂತರಾಜ ಇತರರಿದ್ದರು.
14 ಪಿಎನ್​ ಹಳ್ಳಿ 01
ಶಿರಾ ತಾಲೂಕು ಪಟ್ಟನಾಯಕನಹಳ್ಳಿ ಗ್ರಾಮದ ಕೆಪಿಎಸ್​ ಶಾಲೆಯಲ್ಲಿ ಶಾಯಿ ಎಕ್ಸ್​ಪೋರ್ಟ್​ ಕಂಪನಿಯಿಂದ ನಿರ್ಮಿಸಿರುವ ನೂತನ ಕೊಠಡಿಗಳನ್ನು ಶಾಸಕ ಟಿ.ಬಿ.ಜಯಚಂದ್ರ ಉದ್ಘಾಟಿಸಿದರು. ಸೂಡ ಅಧ್ಯಕ್ಷ ಪಿ.ಆರ್​.ಮಂಜುನಾಥ್​, ತಾಪಂ ಇಒ ಆರ್​.ಹರೀಶ್​, ಬಿಇಒ ಕೃಷ್ಣಪ್ಪ, ಕೆಪಿಎಸ್​ ಶಾಲೆಯ ಉಪಪ್ರಾಂಶುಪಾಲ ಗಂಗಾಧರ, ಎಸ್​ಡಿಎಂಸಿ ಅಧ್ಯಕ್ಷ ಮಂಜುನಾಥ್​, ಮುಖ್ಯಶಿಕ್ಷಕಿ ಮಂಜುಳಾ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net