ಶಾಲೆಗಳಲ್ಲಿ ಹಬ್ಬದ ವಾತಾವರಣ ನಿರ್ಮಾಣ / DODABALLAPUR

ದೊಡ್ಡಬಳ್ಳಾಪುರದ ಪಾಲನಜೋಗಿಹಳ್ಳಿ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳನ್ನು ವಿತರಿಸಿ ಸ್ವಾಗತಿಸಲಾಯಿತು. ತಹಸೀಲ್ದಾರ್​ ಮಲ್ಲಪ್ಪ ಕೆ.ಯರಗೋಳ, ಬಿಇಒ ಶಂಕರಯ್ಯ, ಬಿಆರ್​ಸಿ ನಾರಾಯಣಸ್ವಾಮಿ, ಮುಖಂಡರಾದ ರಂಗಸ್ವಾಮಿ, ಶಿಕ್ಷಕರು ಇದ್ದರು.
ದೊಡ್ಡಬಳ್ಳಾಪುರದ ಪಾಲನಜೋಗಿಹಳ್ಳಿ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳನ್ನು ವಿತರಿಸಿ ಸ್ವಾಗತಿಸಲಾಯಿತು. ತಹಸೀಲ್ದಾರ್​ ಮಲ್ಲಪ್ಪ ಕೆ.ಯರಗೋಳ, ಬಿಇಒ ಶಂಕರಯ್ಯ, ಬಿಆರ್​ಸಿ ನಾರಾಯಣಸ್ವಾಮಿ, ಮುಖಂಡರಾದ ರಂಗಸ್ವಾಮಿ, ಶಿಕ್ಷಕರು ಇದ್ದರು.
Published on
ದೊಡ್ಡಬಳ್ಳಾಪುರ: ತಾಲೂಕಿನೆಲ್ಲೆಡೆ ಸರ್ಕಾರಿ ಶಾಲೆಗಳು ಪುನರಾರಂಭಗೊಂಡಿದ್ದು, ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷಕ್ಕೆ ಅಧಿಕೃತ ಚಾಲನೆ ದೊರೆತಿದೆ. ಶಾಲೆಗಳತ್ತ ವಿದ್ಯಾರ್ಥಿಗಳು ಉತ್ಸಾಹದಿಂದ ಹೆಜ್ಜೆ ಹಾಕಿದ್ದು, ಎಲ್ಲೆಡೆ ಶಾಲಾ ಪ್ರಾರಂಭದ ಸಂಭ್ರಮ ಮನೆಮಾಡಿತ್ತು. ಶಾಲಾ ಶಿಕ್ಷಣ ಇಲಾಖೆ ಸೂಚನೆ ಮೇರೆಗೆ ಶಾಲೆಗಳಲ್ಲಿ ಹಬ್ಬದ ವಾತಾವರಣ ನಿರ್ಮಿಸಲಾಗಿತ್ತು.
ಶಿಕ್ಷಕರು ವಿದ್ಯಾರ್ಥಿಗಳಿಗೆ ಹೂವು ನೀಡಿ ಬರಮಾಡಿಕೊಂಡರು. ಮಧ್ಯಾಹ್ನದ ಬಿಸಿಯೂಟದಲ್ಲಿ ಸಿಹಿ ತಿನಿಸು ನೀಡಿ ಮಕ್ಕಳಲ್ಲಿ ಸಂತಸವನ್ನು ಹೆಚ್ಚಿಸಲಾಯಿತು. ಮೊದಲ ದಿನವೇ ಅನೇಕ ಶಾಲೆಗಳಲ್ಲಿ ಮಕ್ಕಳಿಗೆ ಪುಸ್ತಕ, ಸಮವಸ್ತ್ರ ವಿತರಣೆ ಮಾಡಲಾಯಿತು. ವಿದ್ಯಾರ್ಥಿಗಳ ಕಲಿಕಾ ಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ಮೊದಲ 15 ದಿನ ಸೇತುಬಂಧ ಕಾರ್ಯಕ್ರಮದಡಿ ಪುನರಾವರ್ತನಾ ತರಗತಿ ನಡೆಸಲು ಆದೇಶಿಸಲಾಗಿದೆ. ಇದರಂತೆ ಶಾಲೆಗಳಲ್ಲಿ ಆರಂಭದ ದಿನವೇ ಮಕ್ಕಳೊಂದಿಗೆ ಬಂದ ಪಾಲಕರ ಸಭೆ ನಡೆಸಲಾಯಿತು.
ಶಾಲಾ ಆರಂಭಕ್ಕೂ ಮುನ್ನವೇ ಶೇ.70 ಪಠ್ಯಪುಸ್ತಕಗಳು ಶಾಲೆತಲುಪಿವೆ. ಇನ್ನೂ ಉಳಿದ ಪ್ರಮಾಣದ ಪುಸ್ತಕಗಳು ಶೀಘ್ರಶಾಲೆಗಳಿಗೆ ಸೇರಲಿವೆ ಎನ್ನಲಾಗಿದೆ.
ಸಮವಸ್ತ್ರ ವಿತರಿಸಿದ ಡಿಡಿಪಿಐ : ತಾಲೂಕಿನ ಅರಳುಮಲ್ಲಿಗೆ ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಡಿಡಿಪಿಐ ಬೈಲಾಂಜಿನಪ್ಪ ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಸ್ವಾಗತಿಸಿದರು. ಮಕ್ಕಳಿಗೆ ಉಚಿತ ಪಠ್ಯಪುಸ್ತಕ ಹಾಗೂ ಸಮವಸ್ತ್ರ ವಿತರಿಸಿದರು. ಮಿಂಚಿನ ಸಂಚಾರ ಕಾರ್ಯಕ್ರಮದ ಮೂಲಕ ಕ್ಲಸ್ಟರ್​ಮಟ್ಟದಿಂದ ಜಿಲ್ಲಾಮಟ್ಟದ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ಅಲ್ಲಿನ ಸ್ಥಿತಿಗತಿಗಳ ಪರಿಶೀಲಿಸುವ ಕೆಲಸ ಮಾಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net