ಸೂಕ್ತ ಅಗ್ನಿಶಾಮಕ ಉಪಕರಣಗಳು, ತುರ್ತು ನಿರ್ಗಮನ ಮಾರ್ಗಗಳು, ನಿಯಮಿತ ಪರಿಶೀಲನೆ, ಅಡುಗೆ ಕೊಠಡಿಗಳ ನೈರ್ಮಲ್ಯ, ಗುಣಮಟ್ಟವನ್ನು ಹೊಂದಿರಬೇಕು. ಪ್ರವಾಸಿಗರ ನಿಖರ ದಾಖಲೆಗಳನ್ನು ನಿರ್ವಹಿಸಬೇಕು. ಗುರುತಿನ ಚೀಟಿಗಳ ಪರಿಶೀಲನೆ ಮಾಡುವುದು ಮತ್ತು ಕಾನೂನು ಸಂಸ್ಥೆಗಳಿಗೆ ಸಹಕಾರ, ದರ ನಿಗದಿ, ಬುಕಿಂಗ್ ರದ್ದತಿ ನೀತಿ, ಸೌಲಭ್ಯಗಳು, ಮರುಪಾವತಿ, ಗ್ರಾಹಕರ ದೂರುಗಳ ಪರಿಹಾರಕ್ಕೆ ಸೂಕ್ತ ವ್ಯವಸ್ಥೆ ಇರಬೇಕು. ಕುಡಿಯುವ ನೀರು, ತ್ಯಾಜ್ಯ ವಿಲೇವಾರಿ, ಒಳಚರಂಡಿ ನಿರ್ವಹಣೆ ಮತ್ತು ಪರಿಸರ ಸುಸ್ಥಿರತೆಗೆ ಸಂಬಂಧಿಸಿದಂತೆ ಮಾನದಂಡಗಳನ್ನು ಮಾರ್ಗಸೂಚಿಯಲ್ಲಿ ಒಳಗೊಳ್ಳುವಂತೆ ಪ್ರವಾಸೋದ್ಯಮ ಇಲಾಖೆಗೆ ನ್ಯಾಯಾಲಯ ಸಲಹೆ ನೀಡಿದೆ.