ಮಕ್ಕಳಲ್ಲಿ ಗ್ರಾಮೀಣ ಸೊಗಡಿನ ಅರಿವು ಮೂಡಿಸಿ

 create-awareness-of-rural-beauty-among-children
create-awareness-of-rural-beauty-among-children
Published on
ನೊಣವಿನಕೆರೆ : ಅಧುನಿಕ ವೈಜ್ಞಾನಿಕ ಜೀವನದಲ್ಲಿ ಹಳ್ಳಿ ಸೊಗಡು, ಸಂಪ್ರದಾಯ, ಆಚರಣೆಗಳು ಕಣ್ಮರೆಯಾಗುತ್ತಿರುವ ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಗ್ರಾಮೀಣ ಸೊಗಡು, ಆಚರಣೆಗಳ ಮಹತ್ವ ತಿಳಿಸುವ ಉದ್ದೇಶದಿಂದ ಶಿಕ್ಷಕರು ಮತ್ತು ಮಕ್ಕಳು ಸಾಂಪ್ರದಾಯಿಕ ಉಡುಗೆ ತೊಡುಗೆ ತೊಟ್ಟು ಸಂಭ್ರಮಿಸುವುದರ ಜತೆಗೆ ಇಂದಿನ ಮಕ್ಕಳಲ್ಲಿ ಶ್ರಮದ ಅರಿವನ್ನು ಮೂಡಿಸಲಾಗುತ್ತಿದೆ ಎಂದು ಪದವೀದರ ಮುಖ್ಯಶಿಕ್ಷಕ ಎಸ್.ಆರ್.ಸುರೇಶ್ ತಿಳಿಸಿದರು.
ಪಟ್ಟಣದ ಪಿಎಂಶ್ರೀ ಕೆಪಿಎಸ್ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಹಳ್ಳಿ ಸೊಗಡು ಸಂಕ್ರಾಂತಿ ಸಂಭ್ರಮ ವಿಶೇಷ ಕಾರ್ಯಕ್ರಮದಲ್ಲಿ ವಾತನಾಡಿದ ಅವರು, ರೈತರು ದಿನಕ್ಕೆ ನಾಲ್ಕೈದು ಗಂಟೆಗಳ ಶ್ರಮಪಟ್ಟರೆ ಹೊರಗೆ ಹೋಗಿ ಹತ್ತಾರು ಸಾವಿರ ಸಂಬಳ ಪಡೆಯುವುದಕ್ಕಿಂತ ಹೆಚ್ಚು ಆದಾಯ ಪಡೆಯುವುದಕ್ಕೆ ಸಾಧ್ಯತೆ ಇದೆ ಎನ್ನುವುದರ ಜತೆಗೆ ಜನಪದ ಗೀತೆಗಳು ಜೀವನದ ಮೌಲ್ಯ ತಿಳಿಸುತ್ತವೆ ಎಂದರು.
ದಿನಕ್ಕೆ ಒಮ್ಮೆಯಾದರೂ ಜಾನಪದ ಗೀತೆಯನ್ನು ಕೇಳುತ್ತ ಹೋದರೆ ನಮ್ಮ ಮಕ್ಕಳೆಲ್ಲರೂ ಸಹ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯತೆ ಇದೆ. ಅಂತಹ ವಾಹಿತಿಯ ಕಣಜಗಳೇ ಜನಪದ ಗೀತೆಗಳು. ಅದೇ ರೀತಿ ನಮ್ಮ ಸಂಪ್ರದಾಯಕ ಉಡುಗೆ ತೊಡುಗೆಗಳು ಆರೋಗ್ಯಕ್ಕೆ ತುಂಬಾ ಹತ್ತಿರವಾಗಿವೆ ಅವುಗಳನ್ನು ನಾವು ಮನೆಯಲ್ಲ್ಲದರೂ ಬಳಸಿಕೊಳ್ಳಬೇಕು ಎಂದರು.
ಜಾನಪದ ಗೀತೆ ಹಾಗೂ ಉಡುಗೆ ತೊಡುಗೆಗಳ ಸ್ವರ್ಧೆಯಲ್ಲಿ ಭಾಗವಹಿಸಿದ ಮಕ್ಕಳಿಗೆ ಬಹುವಾನ ವಿತರಿಸಲಾಯಿತು. ಶಿಕ್ಷಕರು ಮತ್ತು ಮಕ್ಕಳು ಸಾಮೂಹಿಕವಾಗಿ ಗಂಡು ಮಕ್ಕಳು ಬಿಳಿ ಪಂಚೆ, ಅಂಗಿ, ಹೆಣ್ಣು ಮಕ್ಕಳು ಸೀರೆ ತೊಟ್ಟಿದ್ದು ಕಾರ್ಯಕ್ರಮದ ವಿಶೇಷವಾಗಿತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net