ಮುಳಬಾಗಿಲು: ರೈತರು ಕೃಷಿ ಬೆಳೆ ವಿಮೆ ಮಾಡಿಸಲು ಭಾರತೀಯ ಕಿಸಾನ್ ಸಂಘ ರೈತರಲ್ಲಿ ಜಾಗೃತಿ ಮೂಡಿಸುವ ಮೂಲಕ ಬೆಳೆ ನಷ್ಟವಾದಾಗ ಪರಿಹಾರ ಪಡೆಯಲು ಸಾಧ್ಯವಾಗುವಂತೆ ನೋಡಿಕೊಳ್ಳುವ ಜವಾಬ್ದಾರಿ ನಿರ್ವಹಿಸಬೇಕು ಎಂದು ಕಿಸಾನ್ ಸಂಘದ ರಾಜ್ಯ ದಕ್ಷಿಣ ಪ್ರಾಂತ ಸಂಘಟನಾ ಕಾರ್ಯದರ್ಶಿ ಕೆ.ಎನ್.ನಾರಾಯಣಸ್ವಾಮಿ ಸೂಚಿಸಿದರು.
ಟಿಪಿಸಿಎಂಎಸ್ ಕಟ್ಟಡದ ಕಿಸಾನ್ ಸಂಘದ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿ, ರೈತರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸಂಟನೆ ಕಾರ್ಯನಿರ್ವಹಿಸಬೇಕು. ಸರ್ಕಾರ ಹಲವು ಸೌಲಭ್ಯ ನೀಡಿದರೂ ಅರ್ಹ ರೈತರಿಗೆ ತಲುಪುವುದಿಲ್ಲ. ಆದ್ದರಿಂದ ಅವುಗಳ ಉಪಯೋಗಿಸಿಕೊಳ್ಳುವ ಕೌಶಲ ರೈತರಲ್ಲಿ ಮೂಡಿಸಬೇಕು.
ಮುಳಬಾಗಿಲು ಭಾರತೀಯ ಕಿಸಾನ್ ಸಂಘದ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಕೃಷಿ ಅಧಿಕಾರಿ ಬಿ.ಎಂ.ಶುಭಾ ಇಲಾಖೆಯಿಂದ ರೈತರಿಗೆ ಸಿಗುವ ಸೌಲಭ್ಯಗಳು ಮತ್ತು ಬೆಳೆ ವಿಮೆ ನೊಂದಣಿ ಬಗ್ಗೆ ಮಾಹಿತಿ ನೀಡಿದರು.
ಎಲ್ಲದಕ್ಕೂ ಹೋರಾಟ ಮಾಡುವುದರಿಂದ ಪರಿಹಾರ ಸಿಗುವುದಿಲ್ಲ. ತಳಮಟ್ಟದಲ್ಲಿ ರೈತರೊಂದಿಗೆ ಬಿಡುವಿನ ಸಮಯದಲ್ಲಿ ಸಂಪರ್ಕ ಸಾಧಿಸಿ ಕೃಷಿ ಬಿಕ್ಕಟ್ಟು, ಪರಿಹಾರ ಚಿಂತನೆ ಮಾಡಬೇಕು. ಗ್ರಾಮ ಆಧಾರಿತ ಚಟುವಟಿಕೆಗಳು ಪಾರದರ್ಶಕತೆಯಿಂದ ಕೂಡಿದ್ದರೆ ಅಂತಹ ಗ್ರಾಮ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.
ಕೃಷಿ ಅಧಿಕಾರಿ ಬಿ.ಎಂ.ಶುಭ ಮಾತನಾಡಿ, ಇಲಾಖೆಯಿಂದ ರೈತರಿಗೆ ಸಿಗುವ ಸೌಲಭ್ಯಗಳು ಮತ್ತು ಬೆಳೆ ವಿಮೆ ಕುರಿತು ಮಾಹಿತಿ ನೀಡಿದರು. ಕಿಸಾನ್ ಸಂಘದ ಸದಸ್ಯರು ಗ್ರಾಮಗಳಲ್ಲಿ ಈ ಬಗ್ಗೆ ಅರಿವು ಮೂಡಿಸಿ ಎಲ್ಲ ರೈತರು ಬೆಳೆ ವಿಮೆ ನೋಂದಣಿ ಮಾಡಿಸುವ ಮೂಲಕ ರೈತರಿಗೆ ನೆರವಾಗಬೇಕು ಎಂದು ಸಲಹೆ ನೀಡಿದರು.