ರಾಜ್ಯ ರೈತ ಸಂಘದ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ಇರಾನ್&ಅಮೇರಿಕ ಯುದ್ಧ ನೆಪದಲ್ಲಿ ಕಚ್ಚಾ ವಸ್ತುಗಳು ಸಿಗುತ್ತಿಲ್ಲ ಎಂಬ ನೆಪದಲ್ಲಿ ಖಾಸಗಿ ಕೃಷಿ ಪರಿಕರಗಳ ಉತ್ಪಾದನ ಕಂಪನಿಗಳು, ವ್ಯಾಪಾರಸ್ಥರು ಏಕಾಏಕಿ ಕೃಷಿ ಕ್ಷೇತ್ರಕ್ಕೆ ಅವಶ್ಯ ಇರುವ ಮಲ್ಟಿಂಗ್ ಪೇಪರ್, ಡ್ರಿಪ್ ಮತ್ತು ಡ್ರಿಪ್ ಗೊಬ್ಬರಗಳ ಮೇಲೆ ಸಾವಿರಾರು ರೂಪಾಯಿ ಏರಿಕೆ ಮಾಡುವ ಮುಖಾಂತರ ರೈತರ ಜೀವನದ ಜತೆ ಚಲ್ಲಾಟವಾಡುತ್ತಿದ್ದಾರೆ. ಖಾಸಗಿ ಕಂಪನಿಗಳ ಬೆಲೆ ಹಾವಳಿ ನಿಯಂತ್ರಣಕ್ಕೆ ಕಾನೂನು ರಚನೆ ಮಾಡಬೇಕೆಂದು ಹೇಳಿದರು.