ಉದ್ಯೋಗ ಹುಡುಕುವ ಬದಲು ಸೃಷ್ಟಿಸಿ

Create a job instead of looking for one.
Create a job instead of looking for one.
Published on
ಕುಣಿಗಲ್​: ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಉದ್ಯೋಗ ಅರಸುವ ಬದಲು, ಉದ್ಯೋಗ ಸೃಷ್ಟಿಸಿ, ಸ್ವಾವಲಂಬಿ ಜೀವನ ರೂಪಿಸಿ ಎಂದು ಮಿಡಿಗೇಶಿ ಸರ್ಕಾರಿ ಕಾಲೇಜಿನ ವಾಣಿಜ್ಯಶಾಸ್ತ್ರ ಅಧ್ಯಾಪಕ ಡಾ.ಎಲ್​. ಮಂಜು ಭಾರ್ಗವಿ ಕರೆ ನೀಡಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಐಕ್ಯೂಎಸಿ ಮತ್ತು ವಾಣಿಜ್ಯಶಾಸ್ತ್ರಿ ವಿಭಾಗದಿಂದ ಏರ್ಪಡಿಸಿದ್ದ ವಿಶೇಷ ಉಪನ್ಯಾಸ ಮತ್ತು ಅಂತಿಮ ಬಿ.ಕಾಂ. ವಿದ್ಯಾರ್ಥಿಗಳ ಬೀಳ್ಕೊಡಿಗೆ ಸಮಾರಂಭದಲ್ಲಿ ಮಾತನಾಡಿ, ಬಿ.ಕಾಂ ವಿದ್ಯಾರ್ಥಿಗಳು ಕಲಿತ ವಿಷಯಗಳನ್ನು ನಿಜ ಜೀವನದ ಸಮಸ್ಯೆ ಪರಿಹರಿಸಲು ಬಳಸಿ, ಜನರ ಅವಶ್ಯಕತೆ ಪೂರೈಸುವ ವ್ಯವಹಾರ ಕಟ್ಟಿ. ಉದ್ಯಮ ಕ್ಷೇತ್ರದ ಆವಿಷ್ಕಾರ, ಡಿಜಿಟಲೀಕರಣ, ತಂತ್ರಜ್ಞಾನದ ಸದ್ಬಳಕೆ ಮಾಡಿ ಆರ್ಥಿಕವಾಗಿ ಸಬಲರಾಗಿ ಎಂದರು.
ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಟಿ.ಎನ್​.ನರಸಿಂಹಮೂರ್ತಿ ಮಾತನಾಡಿ, ಜೀವನವೇ ದೊಡ್ಡ ವಾಣಿಜ್ಯಶಾಲೆ, ಇಲ್ಲಿ ಕಲಿತ ಲೆಕ್ಕಶಾಸ್ತ್ರ, ವ್ಯವಹಾರ ನ್ಯಾಯಗಳನ್ನು ಜೀವನಕ್ಕೆ ಅನ್ವಯಿಸಿಕೊಳ್ಳಿ, ಸಾಧಿಸುವ ಛಲದಿಂದ ಮುನ್ನಡೆದು ಸಾಧಕರಾಗಿ ಎಂದರು.
ಪ್ರಾಂಶುಪಾಲ ರಾಮಾಂಜನಪ್ಪ ಮಾತನಾಡಿ, ವಿದ್ಯಾರ್ಥಿಗಳು ಅಂಕಗಳಿಸುವ ಯಂತ್ರಗಳಾಗುವ ಬದಲು ಸಮಾಜಕ್ಕೆ ಉಪಯುಕ್ತ ಉದ್ಯಮಿಗಳಾಗಿ ಹೊರ ಹೊಮ್ಮಬೇಕು ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net