ವೃತ್ತಿಯಲ್ಲಿ ಪ್ರಾಮಾಣಿಕತೆ ಮೆರೆದ ಸಿಪಿಐ CPI

ವೃತ್ತಿಯಲ್ಲಿ ಪ್ರಾಮಾಣಿಕತೆ ಮೆರೆದ ಸಿಪಿಐ CPI
ವೃತ್ತಿಯಲ್ಲಿ ಪ್ರಾಮಾಣಿಕತೆ ಮೆರೆದ ಸಿಪಿಐ CPI
Published on

ಪ್ರಮುಖ ಮುಖ್ಯಾಂಶಗಳು

  • ಜಿಪಂ ಮಾಜಿ ಅಧ್ಯಕ್ಷ ತೂಪಲ್ಲಿ ಆರ್​. ನಾರಾಯಣಸ್ವಾಮಿ ಅನಿಸಿಕೆ
ಶ್ರೀನಿವಾಸಪುರ: ಸಿಪಿಐ ಮಹಮದ್​ ಗೊರವನಕೊಳ್ಳ ತಾಲೂಕಿನಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಿಕೊಂಡು ಉತ್ತಮ ಸೇವೆ ಮಾಡಿ ವೃತ್ತಿಯಲ್ಲಿ ನೈಪುಣ್ಯ ಹಾಗೂ ಪ್ರಾಮಾಣಿಕತೆ ಮೆರೆದಿದ್ದಾರೆ ಎಂದು ಜಿಪಂ ಮಾಜಿ ಅಧ್ಯಕ್ಷ ತೂಪಲ್ಲಿ ಆರ್​. ನಾರಾಯಣಸ್ವಾಮಿ ಹೇಳಿದರು.CPI
ಪಟ್ಟಣದ ಸರ್ಕಾರಿ ಸೌಕರರ ಭವನದಲ್ಲಿ ಶನಿವಾರ ಪೊಲೀಸ್​ ಇಲಾಖೆ ಹಾಗೂ ವಿವಿಧ ಸಂ&ಸಂಸ್ಥೆಗಳ ಸಹಯೋಗದಲ್ಲಿ ಲೋಕಾಯುಕ್ತಕ್ಕೆ ವರ್ಗಾವಣೆಗೊಂಡ ಸಿಪಿಐ ಮಹಮದ್​ ಗೊರವನಕೊಳ್ಳ ಅವರಿಗೆ ಆಯೋಜಿಸಿದ್ದ ಬೀಳ್ಕೊಡುಗೆಯಲ್ಲಿ ಮಾತನಾಡಿ, ಚಾಣಾಕ್ಷತೆಯಿಂದ ಎಲ್ಲ ಪಕ್ಷಗಳ ಮುಖಂಡರನ್ನು ವ್ಯವಸ್ಥಿತವಾಗಿ ಸರಿದೂಗಿಸಿಕೊಂಡು ಹೋಗುವ ಕೆಲಸ ಮಾಡಿದ್ದಾರೆ ಎಂದರು.
ಮುಖ್ಯಪೇದೆ ಅಪರಾಧ ವಿಭಾಗದ ಆನಂದ್​ ಮಾತನಾಡಿ, ಠಾಣೆಯಲ್ಲಿ ಅಧಿಕಾರ ವಹಿಸಿಕೊಂಡ ಆರಂಭದ ದಿನಗಳಲ್ಲೇ ಬಾವಲಿಗಳ ಸಮಸ್ಯೆ ತಪ್ಪಿಸಿದರು. ಠಾಣೆಗೆ ಸುಣ್ಣಬಣ್ಣ ಹಾಕಿಸಿ, ವಿನಾಯಕನ ದೇವಸ್ಥಾನ ಸ್ಥಾಪಿಸಿ, ಠಾಣೆಗೆ ಹೆಬ್ಬಾಗಿಲು ನಿರ್ಮಿಸಿ, ಜನಸ್ನೇಹಿಯಾಗಿ ಸೇವೆ ಸಲ್ಲಿಸಿದ್ದಾರೆ ಎಂದು ಸ್ಮರಿಸಿದರು.
ಪುರಸಭೆ ನಾಮಿನಿ ಸದಸ್ಯ ನರಸಿಂಹಮೂರ್ತಿ, ಪೂಲು ಶಿವಾರೆಡ್ಡಿ, ಮಹೇಶ್​, ಬುಜ್ಜಿ ರಾಮಕೃಷ್ಣ, ಗುತ್ತಿಗೆದಾರ ಗೌಡಹಳ್ಳಿ ವೆಂಕಟರೆಡ್ಡಿ,ಕಾನ್​ಸ್ಟೆಬಲ್​ಗಳಾದ ರಾಜು, ಗುಡಿಪಲ್ಲಿ ರಾಮಚಂದ್ರ, ರಮೇಶ್​ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net