

ಪ್ರಮುಖ ಮುಖ್ಯಾಂಶಗಳು
ಯಕ್ಸಂಬಾ ಪಟ್ಟಣದಲ್ಲಿ ಆಕಳಿಗೆ ಸಿಮಂತ ಕಾರ್ಯಕ್ರಮ
ವಿಜಯವಾಣಿ ಸುದ್ದಿಜಾಲ ಚಿಕ್ಕೋಡಿ:
ತಾಲ್ಲೂಕಿನ ಯಕ್ಸಂಬಾದ ಗಣಪತಿ ಸಾಂಗಾವೆ ಎಂಬ ರೈತ ಕುಟುಂಬದವರು ಹೆಣ್ಣುಮಕ್ಕಳಿಗೆ ಮಾಡುವ ಸೀಮಂತ ಕಾರ್ಯಕ್ರಮದಂತೆಯೇ ತಾವು ಸಾಕಿದ ಗೌರಿ ಎಂಬ ಹಸಿವಿನ ಸೀಮಂತ ಕಾರ್ಯಕ್ರಮ ಅದ್ಧೂರಿಯಾಗಿ ಆಚರಣೆ ಮಾಡುವ ಮೂಲಕ ಪ್ರಾಣಿ ಪ್ರೀತಿಗೆ ಪಾತ್ರವಾಗಿದೆ.
ಹಸುವಿನ ಸಿಮಂತದ ವೇಳೆ ಅರ್ಚಕರಿಂದ, ಮಹಿಳೆಯರಿಂದ ಪೂಜೆ, ಮಂಗಳಾರತಿ, ಶೃಂಗಾರ, ಸುಮಂಗಲೆಯರಿಂದ ಉಡಿ ತುಂಬುವುದು, ಸ್ವಾಮೀಜಿಗಳಿಂದ ಧಾರ್ಮಿಕ ವಿಧಿ ವಿಧಾನಗಳು, ಜಾನಪದ ಪದಗಳು ಸೇರಿದಂತೆ ಹಲವಾರು ಸಿಹಿತಿಂಡಿಗಳೊಂದಿಗೆ ಈ ಸೀಮಂತ ಕಾರ್ಯಕ್ರಮ ಗರ್ಭೀಣಿ ಮಾಡುವ ಸೀಮಂತಕ್ಕಿಂತ ಕಡಿಮೆ ಇಲ್ಲ. ೭ ತಿಂಗಳ ಗರ್ಭೀಣಿಯಾದ ಗೌರಿ ಆಕಳುನು ಕಲರಫುಲ್ ಸೀರೆ ಉಡಿಸಿ, ಬಳೆ ತೊಡಿಸಿ, ಹೂಮಾಲೆ ಧರಿಸಿ ಶೃಂಗಾರ ಮಾಡಿದರು. ಸೀಮಂತ ಗ್ರಾಮಸ್ಥರು ಸಾಕ್ಷಿಯಾಗಿದ್ದರು.
ಇದೇ ವೇಳೆ ಆಕಳಿನಾದ ಸುವರ್ಣ ಸಾಂಗಾವೆ ಹಾಗೂ ಪಲ್ಲವಿ ಶುಭಂ ಸಾಂಗಾವೆ ದಂಪತಿಗಳು, ರಚನಾ ಗುರುದತ್ತ ಕಾಮತ, ನಿರ್ಮಲಾ ಸಾಂಗಾವೆ, ಉಜ್ವಲಾ ನಂದನಗೆ, ವಿಷ್ಣು ಬುಬನಾಳೆ, ಪಿಂಟು ಮಾಳಿ, ವಸಂತ ಮಾಳಿ ದಂಪತಿಗಳಿಗೆ ಪ್ರಥಮ ಪೂಜೆ ಮಾಡಿ ಉಡಿ ತುಂಬಿದರು. ನಂತರ ನರೆದ ನೂರಾರು ಜನರು ಭೋಜನ ಮಾಡಿ ಗೋಮಾತೆಯ ಆಶಿರ್ವಾದದವರು.
---
ಕೋಟ
ರೈತರು ತಾವು ಸಾಕಿದ ಮಕ್ಕಳಂತೆ ಜಾನುವಾರುಗಳನ್ನು ಪ್ರೀತಿಸುತ್ತಾರೆ. ನಮ್ಮ ಭಾರತೀಯ ಸಂಸ್ಕೃತಿಯನ್ನು ಕಾಪಾಡಿಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯವಾಗಿದೆ ,ಗಡಿಭಾಗದ ರೈತರ ಪ್ರಾಣಿ ಪ್ರೀತಿಗೆ, ನಮ್ಮ ಜನಪದ ಸಂಸ್ಕೃತಿಗೆ ಈ ಕಾರ್ಯಕ್ರಮ ಮಾದರಿಯಾಗಿದೆ.
ರಚನಾ ಕಾಮತ
ನಿವೃತ್ತ ಶಿಕ್ಷಕಿ
----
ಕೋಟ್
ನಾವು ಮಗಳಂತೆ ಸಾಕಿದ ನಮ್ಮ ಗೋಮಾತೆಗೆ ಇಂದು ಈ ಸೀಮಂತ ಕಾರ್ಯಕ್ರಮ ಮಾಡಿದ್ದು ಈ ಕಾರ್ಯಕ್ರಮ ನಮಗೆ ಸಂತಸ ತಂದಿದ್ದು ನಮ್ಮ ಮನೆಯ ಪರಂಪರೆಯಂತೆ ಈ ಕಾರ್ಯಕ್ರಮ ಮಾಡಲಾಗಿದೆ.
ಗಣಪತಿ ಸಾಂಗಾವೆ
ರೈತ,ಯಕ್ಸಂಬಾ