ನಗರದ ಗಂಗಿಮಡಿಯಲ್ಲಿ ಶನಿವಾರ ಗೋಮಾತೆಗೆ ಸೀಮಂತ ಕಾರ್ಯಕ್ರಮ ಹಾಗೂ ಮೂರು ಗೋಮಾತೆಯ ಕರುಗಳಿಗೆ ನಾಮಕರಣ ಮಾಡುವ ಮೂಲಕ ಗೋಮಾತೆಯನ್ನು ಸಂರಸಿ ಎಂಬ ವಿಶಿಷ್ಠ ಕಾರ್ಯಕ್ರಮ ಜರುಗಿತು.
ನಗರದ ಗೋಸೇವಾ ಗತಿವಿಧಿ ಉತ್ತರ ಪ್ರಾಂತ ಮತ್ತು ಗೋಜೈವಿಕ ಕೃಷಿ ಅನುಸಂಧಾನ ಕೇಂದ್ರದ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಗೋ ಪೂಜೆ ಮಾಡುವ ಮೂಲಕ ಗೋಸಂರಕ್ಷಣೆಗೆ ವಿವಿದ ಮಹಿಳಾ ಸಂಟನೆಗಳು ಕೈಜೋಡಿಸಿದವು.
ಸಂಟನೆಯ ಸದಸ್ಯರು ಗೋಶಾಲಾ ಶುಚಿಗೊಳಿಸಿದ ನಂತರ ಗಭಿರ್ಣಿ ಗೋಮಾತೆಯನ್ನು ಮುತೆದೆಯರು ಕುಂಭದೊಂದಿಗೆ ಪೂಜಿಸಿದರು. ಗೋಶಾಲೆಯನ್ನು ತಳೀರು ತೋರಣಗಳಿಂದ ಅಲಂಕೃತಗೊಳಿಸಿ ಗೂವುಗಳನ್ನು ಮಂಟಪಕ್ಕೆ ಬರ ಮಾಡಿಕೊಂಡರು. ಗೋಮಾತೆಗೆ ಪಾದಪೂಜೆ ಮಾಡುವ ಮೂಲಕ, ಅರಿಷಿಣ ಹಚ್ಚಿ ಸೀರೆ ಉಡಿಸಿ, ಉಡಿ ತುಂಬಿ ಬೆಲ್ಲ ಅಕ್ಕಿಯೊಂದಿಗೆ ಪಶು ಆಹಾರ ನೀಡಿ ನಮಿಸಿದರು.
ಅಲಂಕೃತ ತೊಟ್ಟಿಲದಲ್ಲಿ ಗೋಶಾಲೆಯ ಮೂರು ಗೋಮಾತೆಯ ಕರುಗಳಿಗೆ ಬಸವ, ಕೃಷ್ಣೆ, ಗೌರಿ ಎಂದು ನಾಮಕರಣ ಮಾಡಿ ಮುತೆದೆಯರು ಜೋಗುಳ ಹಾಡಿ ಸಂಭ್ರಮಿಸಿದರು.
ಕಾರ್ಯಕ್ರಮದಲ್ಲಿ ರಜನಿ ಪಂಥರ, ನಾಗವೇಣಿ ಕಟ್ಟಿಮನಿ, ಅಶ್ವಿನಿ ಜಗತಾಪ, ವೀಣಾ ಕಾವೇರಿ, ರಂಜನಾ ಕೋಟಿ, ವಿಜಯಾ ನವಲೆ, ರವಿ ಹಡಪದ, ನರಸಿಂಹ ಕಾಮಾತಿರ್, ಮೋಹನ ಮಾಳಶೆಟ್ಟಿ, ಗುರುಸಿದ್ದಪ್ಪ ಕೊಣ್ಣೂರ, ಚೇತನ್ ಮೇಹರವಾಡೆ ಸೇರಿದಂತೆ ಇತರರು ಇದ್ದರು.